ಸಾಲು ಸಾಲು ರಜೆ: ಸಾಂಸ್ಕೃತಿಕ ನಗರಿಯತ್ತ ಪ್ರವಾಸಿಗರ ದಂಡು


Team Udayavani, Apr 16, 2022, 1:37 PM IST

Untitled-1

ಮೈಸೂರು: ಸಾಲು ಸಾಲು ರಜೆ ಹಿನ್ನೆಲೆ ಮೈಸೂರಿಗೆ ಪ್ರವಾಸಿಗರ ದಂಡು ಹರಿದುಬರುತ್ತಿದ್ದು, ಕೋವಿಡ್‌ ಪರಿಸ್ಥಿತಿಯಿಂದ ನೆಲಕಚ್ಚಿದ್ದ ಪ್ರವಾಸೋದ್ಯಮ ಮತ್ತೆ ಪುಟಿದೆದ್ದಿದೆ.

ಏಪ್ರಿಲ್‌ನ 2ನೇ ವಾರಾಂತ್ಯದಲ್ಲಿ ಸಾಲು ಸಾಲು ರಜೆ ಹಿನ್ನೆಲೆ ನೆರೆಯ ಜಿಲ್ಲೆ ಸೇರಿದಂತೆ ದೇಶದ ವಿವಿಧ ಭಾಗ ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂ ರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರು ವುದು ಪ್ರವಾ ಸೋದ್ಯಮ ಅವಲಂಭಿಸಿರುವವರಲ್ಲಿ ಸಂತಸ ತಂದಿದೆ.

ಮಕ್ಕಳಿಗೆ ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಯವಾಗಿರುವುದು ಹಾಗೂ ಏ.14 ರಂದು ಅಂಬೇಡ್ಕರ್‌ ಜಯಂತಿ, ಏ.15ರಂದು ಗುಡ್‌ಫ್ರೈಡೆ ಈ ಎರಡು ದಿನ ಸರ್ಕಾರಿ ರಜೆ ಇದ್ದು, 16ರಂದು ಶನಿವಾರ ಅರ್ಧದಿನ ಹೊರತುಪಡಿಸಿದರೆ ಮತ್ತೆ ಭಾನುವಾರ ವಾರದ ರಜೆ ಇರುವುದರಿಂದ ಏ.13ರಂದು ರಾತ್ರಿಯೇ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿನತ್ತ ಮುಖಮಾಡಿದ್ದಾರೆ.

ಶುಭ ತಂದ ಶುಭ ಶುಕ್ರವಾರ: ಕಳೆದೆರಡು ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ಈ ಪ್ರಮಾಣದ ಪ್ರವಾಸಿಗರು ಆಗಮಿಸಿದ್ದು ಹೋಟೆಲ್‌, ಪ್ರವಾಸಿ ಕೇಂದ್ರ, ಪ್ರವಾಸಿ ಟ್ಯಾಕ್ಸಿ, ಮಾರ್ಗದರ್ಶಿ ಹಾಗೂ ವ್ಯಾಪಾರಿಗೆಗಳಿಗೆ ಗುಡ್‌ ಫ್ರೈಡೆ ರಜಾ (ಶುಭ ಶುಕ್ರವಾರ) ಶುಭ ತಂದಿದೆ. 2020 ಮತ್ತ 2021ರ ಎರಡೂ ವರ್ಷದ ಏಪ್ರಿಲ್‌ನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿದ್ದರಿಂದ ಪ್ರವಾಸಿ ಕೇಂದ್ರಗಳಲ್ಲಿ ಕೋವಿಡ್‌ ಮಾರ್ಗಸೂಚಿ ಹೇರಲಾಗಿದ್ದರೆ ಇನ್ನೂ ಕೆಲವೆಡೆ ಬಂದ್‌ ಮಾಡಲಾಗಿತ್ತು. ಪರಿಣಾಮ ಪ್ರವಾಸಿಗರಿಲ್ಲದೇ ಪ್ರವಾಸಿ ಕೇಂದ್ರಗಳೊಂದಿಗೆ ಪ್ರವಾಸೋದ್ಯಮವನ್ನೇ ಅವಲಂಭಿಸಿದ್ದ ಇತರೆ ಉದ್ಯಮವೂ ಸೊರಗಿತ್ತು.

ಪ್ರವಾಸಿ ಕೇಂದ್ರಗಳಲ್ಲಿ ನೂಕುನುಗ್ಗಲು: ಸಾಲು ಸಾಲು ರಜೆ ಹಿನ್ನೆಲೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಕಾರಂಜಿಕೆರೆ, ಜಗನ್ಮೋಹನ ಅರಮನೆ, ನಂಜನಗೂಡು ನಂಜುಂಡೇಶ್ವರ ದೇಗುಲ ಸೇರಿದಂತೆ ಹಲವು ತಾಣಗಳಿಗೆ ನಿತ್ಯ 5ರಿಂದ 10 ಸಾವಿರ ಮಂದಿ ಭೇಟಿ ನೀಡುತ್ತಿದ್ದು, ಎಲ್ಲೆಡೆ ನೂಕುನುಗ್ಗಲು ಕಂಡು ಬರುತ್ತಿದೆ. ಗುರುವಾರ ಮತ್ತು ಶುಕ್ರವಾರ ಮೃಗಾಲಯ, ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ 8ರಿಂದ 10 ಸಾವಿರ ಮಂದಿ ಭೇಟಿ ನೀಡಿರುವ ಬಗ್ಗೆ ಅಧಿಕಾರಿಗಳು ಉದಯವಾಣಿಗೆ ಖಚಿತಪಡಿಸಿದ್ದಾರೆ.

ಹೋಟೆಲ್‌ ರೂಂಗಳು ಭರ್ತಿ: ಪ್ರವಾಸಿಗರು ಮೈಸೂರಿನತ್ತ ಪ್ರವಾಹದಂತೆ ಹರಿದುಬರುತ್ತಿರುವ ಹಿನ್ನೆಲೆ ನಗರದ ಎಲ್ಲಾ ಹೋಟೆಲ್‌ಗ‌ಳ ಕೊಠಡಿಗಳು ಏ.16ರವರೆಗೆ ಶೇ.100 ಭರ್ತಿಯಾಗಿವೆ. ಕೊರೊನಾ ಬಳಿಕ ಚೇತರಿಕೆಯ ಹಾದಿಯಲ್ಲಿರುವ ಹೋಟೆಲ್‌ ಉದ್ಯಮಕ್ಕೆ ದಸರಾ ನಂತರ ಇದೆ ಮೊದಲ ಬಾರಿಗೆ ಸಾಕಷ್ಟು ಉತ್ತೇಜನ ದೊರೆತಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಪ್ರವಾಸೋದ್ಯಮವು 2 ವರ್ಷಗಳಿಂದ ನೆಲಕಚ್ಚಿದೆ. ಸಾಲು ಸಾಲು ರಜೆ ಇರುವುದರಿಂದ ಏ. 13ರಿಂದ 16 ರವರೆಗೆ ನಾಲ್ಕು ದಿನಗಳು ಮೈಸೂರಿನ ಎಲ್ಲ ಹೋಟೆಲ್‌ ರೂಂಗಳು ಭರ್ತಿಯಾಗಿವೆ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ಸಾಲು ಸಾಲು ರಜೆ ಹಿನ್ನೆಲೆ ಮೈಸೂರಿನ ಅಂದ ಸವಿಯಲು ಸಾವಿರಾರು ಪ್ರವಾಸಿಗರು ವಿವಿಧ ಜಿಲ್ಲೆ, ರಾಜ್ಯ, ದೇಶಗಳಿಂದ ಅರಮನೆ ನಗರಿಗೆ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಗೆ ಕಾಣುತ್ತಿದ್ದು, ಆಟೋ, ಟಾಂಗಾ ಹಾಗೂ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಅರಮನೆ, ಚಾಮುಂಡಿ ಬೆಟ್ಟ ಹಾಗೂ ಕೆಆರ್‌ಎಸ್‌, ಮೃಗಾಲಯದಲ್ಲಿ ವಿವಿಧೆಡೆ ಭೇಟಿ ನೀಡಿ ಸಂಭ್ರಮಿಸುತ್ತಿದ್ದಾರೆ.

ಗರಿಗೆದರಿದ ವ್ಯಾಪಾರ : ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಜತೆಗೆ ಪ್ರಾವಸೋದ್ಯಮವನ್ನೇ ನಂಬಿರುವ ಪ್ರವಾಸಿ ಟ್ಯಾಕ್ಸಿ , ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳು, ಮಾಲ್‌, ಚಿತ್ರಮಂದಿರ, ಸಾರಿಗೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ವ್ಯಾಪರ ಚಟುವಟಿಕೆ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ಸಾಲು ಸಾಲು ರಜೆ ಹಿನ್ನೆಲೆ ತಂಪಾದ ವಾತಾವರಣವಿರುವ ಮೃಗಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಒರಾಂಗುಟಾನ್‌, ಆಫ್ರಿಕಾದ ಚೀತಾ, ಗೊರಿಲ್ಲದಂತಹ ಅಪರೂಪದ ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಗುರುವಾರ ಮೃಗಾಲಯಕ್ಕೆ 9 ಸಾವಿರ ಮಂದಿ ಭೇಟಿ ನೀಡಿದ್ದರೆ ಶುಕ್ರವಾರ 12 ಸಾವಿರದಷ್ಟು ಮಂದಿ ಆಗಮಿಸಿದ್ದರು.   ಎಲ್‌.ಆರ್‌. ಮಹದೇವಸ್ವಾಮಿ,ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ

ಕಳೆದ 2ವರ್ಷಗಳ ಬಳಿಕ ಪ್ರವಾಸೋದ್ಯಮ ಚೇತರಿಸಿಕೊಂಡಿದೆ. ರಜೆ ಹಿನ್ನೆಲೆ ಪ್ರವಾಸಿ ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೋಟೆಲ್‌, ಚಿತ್ರ ಮಂದಿರ, ಮಾಲ್‌, ಸಾರಿಗೆ ಕ್ಷೇತ್ರಗಳಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿ.ಎಸ್‌. ಪ್ರಶಾಂತ್‌, ಅಧ್ಯಕ್ಷರು ಸಂಘ ಸಂಸ್ಥೆಗಳ ಒಕ್ಕೂಟ ಮೈಸೂರು.

 

-ಸತೀಶ್ ದೇಪುರ

ಟಾಪ್ ನ್ಯೂಸ್

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.