ಶಂಖನಾದದಲ್ಲಿ ಸಪ್ತಸ್ವರಗಳು!

ಪಾಶ್ಚಿಮಾತ್ಯ ಸಂಗೀತದಲ್ಲೂ ಕೂಟವಾದ್ಯವಾದ ಶಂಖ

Team Udayavani, Apr 16, 2022, 3:49 PM IST

shankha

ಅರುವತ್ತು ವಿಧದ ಬಣ್ಣದ ಮೃದ್ವಂಗಿ ಜಾತಿಯ ಸಮುದ್ರ ಜೀವಿಯಿಂದ ನಿರ್ಮಿತವಾಗುವ ಶಂಖವು ಇಂಡೋಪೆಸಿಫಿಕ್‌ ಸಮುದ್ರದಲ್ಲಿ ಹೆಚ್ಚಾಗಿ ಸಿಗುತ್ತದೆ. ಶಂಖ ಎರಡು ಪ್ರಕಾರವಾಗಿ ಬಳಕೆಯಲ್ಲಿದೆ. ಊದುವ ಹಾಗೂ ಪೂಜಾದಿ ಅಭಿಷೇಕಕ್ಕೆ ಬಳಸುವ ಶಂಖ. ಎಡಮುರಿ ಊದಲು ಹಾಗೂ ಬಲಮುರಿ ಶಂಖ ಧಾರ್ಮಿಕ ಕಾರ್ಯಕ್ಕೆ ಬಳಸಲಾಗುತ್ತದೆ.

ಅಲ್ಲದೇ ಶಂಖಗಳನ್ನು ಅಲಂಕಾರಿಕ ವಸ್ತುವಾಗಿಯೂ ಬಳಸಲಾಗುತ್ತಿದೆ. ಶಂಖನಾದ ಒಂದು ಗಂಭೀರ ನಾದ. ಒಮ್ಮೆ ಕೇಳಿದರೆ ಮತ್ತೂಮ್ಮೆ ಕೇಳಬೇಕೆನಿಸುವ ನಾದ. ಪೂಜಾಗೃಹದಲ್ಲಾಗಲಿ, ದೇವಾಲಯ, ಯುದ್ಧಭೂಮಿಯಲ್ಲಾಗಲಿ ಶಂಖನಾದಕ್ಕೆ ಅದರದ್ದೇ ಆದ ವೈಶಿಷ್ಟ್ಯಗುಣ ಮತ್ತು ಸ್ಥಾನಗಳಿವೆ.

ಶಂಖನಾದವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿದ್ದು 1992ರಲ್ಲಿ. ಕಂಕಾರ್ಡಿಯಾ ವಿಶ್ವ ವಿದ್ಯಾಲಯದಲ್ಲಿರುವ ನನ್ನ ಪ್ರಯೋಗಾಲಯದಲ್ಲಿ, ಆ ಸಂಶೋಧನೆಯ ಬೆನ್ನಿಗೆ ಅದನ್ನಾಧರಿಸಿ ಬೇರೆ ಹಲವು ಸಂಶೋಧನೆಗಳು ಬೆಳಕಿಗೆ ಬಂದವು. ಒಂದು ಪಿಎಚ್‌.ಡಿ. ಪ್ರಬಂಧ, ಮೂರು ಮಾಸ್ಟರ್ಸ್‌ ಪ್ರಬಂಧಗಳು ಪ್ರಕಾಶಕ್ಕೆ ಬಂದುವು.

ಶಂಖವನ್ನು ಊದುವ ಕೊನೆಯಲ್ಲಿ ಒಂದು ಊದುವ ಕೊಳವೆಯನ್ನು ಉಪಯೋಗಿಸಿ ತಿರುವಾರೂರು ದೇವಸ್ಥಾನದ ಪ್ರಧಾನ ಶಂಖವಾದಕರಾಗಿದ್ದ ಸಂಗು ಮಹಾಲಿಂಗ ಪಿಳೈ ಅವರು ಅನೇಕ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

ಸಂಗೀತ ಸ್ವರಗಳನ್ನು ಹೊರಡಿಸಬಲ್ಲ ಕಾರಣ ಶಂಖ ನಾದವನ್ನು ಸಂಗೀತ ಕಛೇರಿಗಳಲ್ಲಿ ಶ್ರುತಿ ಹಿಡಿಯಲು ಉಪಯೋಗಿಸುತ್ತಿದ್ದರಂತೆ ಒಂದು ಕಾಲದಲ್ಲಿ. ಎಡ ಕೈಯಲ್ಲಿ ಶಂಖವನ್ನು ಹಿಡಿದುಕೊಂಡು ಬಲ ಕೈಯನ್ನು ಶಂಖದ ಬಾಯಿಯ ಒಳಗೆ ಹಿಂದೆ ಮುಂದೆ ಎಳೆದರೆ ಬೇರೆ ಬೇರೆ ಕಂಪನಾಂಕಗಳ ಸ್ವರಗಳನ್ನು ಹೊರಡಿಸಿ ಸಂಗೀತವನ್ನು ಬಾರಿಸಬಹುದು. ಪಾಶ್ಚಿಮಾತ್ಯ ಸಂಗೀತದಲ್ಲಿ ಇತ್ತೀಚೆಗೆ ಶಂಖವನ್ನು ಒಂದು ಕೂಟವಾದ್ಯವನ್ನಾಗಿ ಉಪಯೋಗಿಸುತ್ತಾರೆ.

ಪ್ರಪಂಚದ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಶಂಖನಾದಕ್ಕೆ ಬೇರೆ ಬೇರೆ ಉಪಯೋಗಗಳು ಮತ್ತು ಸ್ಥಾನಗಳಿವೆ. ಬುದ್ಧ ಮತದಲ್ಲಿ ಶಂಖ ನಾದಕ್ಕೆ ಎತ್ತರದ ಸ್ಥಾನವಿದ್ದರೆ, ಗ್ರೀಸ್‌ನಲ್ಲಿ ಮಂಜು ಮುಸುಕಿದ ಸಮುದ್ರದಲ್ಲಿ ಮೀನು ಹಿಡಿಯಲು ಹೋದ ದೋಣಿಗಳು ಪರಸ್ಪರ ಢಿಕ್ಕಿ ಹೊಡೆಯದಂತೆ ಅಪಾಯ ಸೂಚಕಗಳಾಗಿ ಉಪಯೋಗಿಸುತ್ತಾರೆ.

ಶಂಖದ ಹುಳಗಳು ಶಂಖದ ಗುಹೆಯೊಳಗೆ ವಾಸಿಸುತ್ತವೆ. ಪ್ರಪಂಚದ ಬೇರೆ ಬೇರೆ ಸ್ಥಳಗಳಲ್ಲಿ ಸಿಗುವ ಶಂಖಗಳ ಆಕೃತಿಗಳು ಬೇರೆ ಬೇರೆಯಾಗಿರುತ್ತವೆ.

ಶಂಖದ ಚಿಪ್ಪಿನ ಒಳಗೆ ಶಂಕುವಿನಾಕಾರದ ತೂತು ಸುರುಳಿ ಸುರುಳಿಯಾಗಿ ಇರುವ ಕಾರಣ ಇದರಿಂದ ಹೊರಡುವ ಸ್ವರವು ಸುರುಳಿ ಸುತ್ತಿರುವ ಕೊಂಬುವಾದ್ಯದ ಗುಣವನ್ನು ಹೊಂದಿದೆ. ಕೊಳವೆಯ ಉದ್ದವನ್ನು ಹೊಂದಿಕೊಂಡು ಅದರಿಂದ ಹೊರಡುವ ಶಬ್ದ ಬೇರೆ ಬೇರೆ ಕಂಪನಾಂಕಗಳಿವೆ.

ಶಂಖದ ಹೊರಗಿನ ಉದ್ದಕ್ಕಿಂತ ತೂತಿನ ಉದ್ದ ಎರಡು ಪಾಲು ಹೆಚ್ಚು ಇದೆ. ಮಹಾಭಾರತದ ಪ್ರತಿಯೊಬ್ಬ ವೀರನ ಶಂಖಕ್ಕೂ ಬೇರೆ ಬೇರೆ ಕಂಪನಾಂಕಗಳಿದ್ದು ಯಾವ ವೀರನು ಯುದ್ಧ ಭೂಮಿಯಲ್ಲಿ ಎಲ್ಲಿ ಇದ್ದಾನೆ ಎಂದು ತಿಳಿಯಲು ಸುಲಭವಾಗುತ್ತಿತ್ತು.

ಚಿಪ್ಪಿನ ಒಳಗಿನ ಹುಳವು ಸತ್ತಾಗ ಹುಳವನ್ನು ಹೊರಗೆ ತೆಗೆದು ಚಿಪ್ಪನ್ನು ಶುದ್ಧೀಕರಿಸಿ ಅದರ ಮುಚ್ಚಿದ ಕೊನೆಯನ್ನು ತೂತು ಕೊರೆಯುವ ಯಂತ್ರ, ಗರಗಸ ಅಥವಾ ಹರಿತವಾದ ಆಯುಧಗಳನ್ನು ಉಪಯೋಗಿಸಿ ತೂತು ಮಾಡುತ್ತಾರೆ. ಆ ಮೇಲೆ ಒರಟು ಕಾಗದವನ್ನು ಉಪಯೋಗಿಸಿ ಕೊರೆದ ಬಾಯನ್ನು ನಯಗೊಳಿಸುತ್ತಾರೆ. ನಮ್ಮ ತುಟಿಗಳನ್ನು ಕಂಪಿಸಿ ಗಾಳಿಯನ್ನು ಊದಿದಾಗ ಆ ಶಂಖದ ವಿಶಿಷ್ಟವಾದ ಕಂಪನಾಂಕಗಳಲ್ಲಿ ಶಂಖನಾದವು ಹೊರಡುತ್ತದೆ. ಶಂಖನಾದವನ್ನು ನಾದಗ್ರಾಹಕಗಳಲ್ಲಿ ಗ್ರಹಣ ಮಾಡಿ ವಿಶ್ಲೇಷಿಸಿದರೆ ಆ ನಾದಕ್ಕೆ 10ಕ್ಕಿಂತಲೂ ಅಧಿಕವಾಗಿ ಸಂಗತಾಂಕಗಳಿವೆ ಎಂದು ತಿಳಿಯುತ್ತದೆ. ಬೇರೆ ಬೇರೆ ಶಂಖಗಳ ಕಂಪನಾಂಕಗಳೂ ಬೇರೆ ಬೇರೆ ಮತ್ತು ಅದರ ಸಂಗತಾಂಕಗಳ ಬೆಲೆ ಮತ್ತು ಎಷ್ಟು ಸಂಗತಾಂಕಗಳಿವೆ ಎನ್ನುವುದರ ಮೇಲೆ ಪ್ರತ್ಯೇಕ ಶಂಖದ ನಾದವನ್ನೂ ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ.

ಓಂಕಾರ ನಾದದಲ್ಲಿ ಇರುವ ಕಂಪನಾಂಕಗಳನ್ನು ಶಂಖನಾದದ ಕಂಪನಾಂಕಗಳಿಗೆ ಹೋಲಿಸಿ ಅವೆರಡರ ಮಧ್ಯೆ ತುಂಬಾ ಸಾಮ್ಯತೆಯಿದೆ ಎಂದು ಗುರುತಿಸಲಾಗಿದೆ. ಯಾಂತ್ರಿಕ ಕ್ಷೇತ್ರದಲ್ಲಿ ಶಂಖದ ಮೇಲೆ ಆಧಾರಿತವಾದ ಉಪಯೋಗಗಳು ಕೆಲವು ಇವೆ. ಉದಾಹರಣೆಗೆ, ವಾಹನಗಳ ಆಗಮನ ಸೂಚಕವಾಗಿ, ಕಡಿಮೆ ಗಾತ್ರದ ಸ್ಥಳಗಳಲ್ಲಿ ತೀಕ್ಷ್ಣ ನಾದವನ್ನು ಉಂಟುಮಾಡಲು ನಾದ ಮೂಲ ಯಂತ್ರವಾಗಿಯೂ ಶಂಖಗಳು ಬಳಕೆಯಲ್ಲಿವೆ.

ರಾಮ ಭಟ್‌, ಕೆನಡಾ

ಟಾಪ್ ನ್ಯೂಸ್

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: 35 ಪ್ರಯಾಣಿಕರಿದ್ದ ಬಸ್ ಪಲ್ಟಿ… ೧೦ ಮಂದಿ ಮೃತ್ಯು, ಹಲವರಿಗೆ ಗಾಯ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: 35 ಪ್ರಯಾಣಿಕರಿದ್ದ ಬಸ್ ಪಲ್ಟಿ… ೧೦ ಮಂದಿ ಮೃತ್ಯು, ಹಲವರಿಗೆ ಗಾಯ

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.