ಒಪ್ಪೋದಿಂದ ಎರಡು ಹೊಸ ಫೋನ್ ಬಿಡುಗಡೆ: ಏನಿದು ಏರ್ ಗೆಶ್ಚರ್ ಸೌಲಭ್ಯ?
Team Udayavani, Apr 16, 2022, 4:09 PM IST
ನವದೆಹಲಿ: ಒಪ್ಪೋ ಬ್ರಾಂಡ್ ಭಾರತದಲ್ಲಿ ತನ್ನ ಎರಡು ಹೊಸ ಮೊಬೈಲ್ ಫೋನ್ ಹಾಗೂ ಇಯರ್ ಬಡ್ ಅನ್ನು ಇದೀಗ ಬಿಡುಗಡೆ ಮಾಡಿದೆ. ತನ್ನ F21 Pro (ಎಫ್21 ಪ್ರೋ) ಮತ್ತು F21 Pro 5G (ಎಫ್21 ಪ್ರೋ 5ಜಿ) ಸ್ಮಾರ್ಟ್ ಫೋನ್‌ಗಳು ಹಾಗೂ OPPO Enco Air2 Pro TWS ಇಯರ್ ಬಡ್ ಅನ್ನು ಹೊರತಂದಿದೆ.
F21 Pro ಫೋನ್‌ನ ಬೆಲೆಯು 22,999 ರೂ. ಆಗಿದ್ದು, ಈಗಾಗಲೇ ಎಲ್ಲ ಆನ್‍ಲೈನ್ ಮತ್ತು ಆಫ್‍ಲೈನ್ ಸ್ಟೋರ್ ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. OPPO F21 Pro 5G ಬೆಲೆ 26,999 ರೂ.ಗಳಾಗಿದೆ ಮತ್ತು OPPO Enco Air2 Pro TWS 3,499 ಆಗಿದೆ. ಈ ಎರಡು ಸಾಧನಗಳು ಎಲ್ಲ ಆಫ್‍ಲೈನ್ ಮತ್ತು ಆನ್‍ಲೈನ್ ಸ್ಟೋರ್ ಗಳಲ್ಲಿ, ರೀಟೇಲ್ ಸ್ಟೋರ್ ಗಳಲ್ಲಿ ಏ. 21 ರಿಂದ ಲಭ್ಯವಾಗಲಿವೆ.
F21 Pro ಮತ್ತು F21 Pro 5G ಸ್ಮಾರ್ಟ್‌ಫೋನ್ ಗಳು ಸೆಲ್ಫಿ ಛಾಯಾಗ್ರಹಣದಲ್ಲಿ ಹೊಸ ವೈಶಿಷ್ಟ್ಯ ಹೊಂದಿವೆ. F21 Pro ಫೋನಿನ 32 MP ಸೆಲ್ಫಿ ಕ್ಯಾಮೆರಾವು ಸೋನಿಯ IMX709 RGBW ಸೆಲ್ಫಿ ಸೆನ್ಸರ್ ಅನ್ನು ಒಳಗೊಂಡಿದ್ದು, ಇದು ಬೆಳಕಿಗೆ 60% ಹೆಚ್ಚು ಸಂವೇದನಾಶೀಲವಾಗಿದೆ, ಇದು ಬಳಕೆದಾರರಿಗೆ ಸ್ಪುಟವಾದ, ಸುಸ್ಪಷ್ಟ ಮತ್ತು ಗಾಢವಾದ ಛಾಯಾಚಿತ್ರಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
OPPO ತನ್ನ F21 Pro ನಲ್ಲಿ ಈ ಶ್ರೇಣಿಯಲ್ಲಿ ಇದೇ ಮೊದಲೆನಿಸಿದ 2MP ಮೈಕ್ರೋಲೆನ್ಸ್ ಅನ್ನು ಸಹ ಪರಿಚಯಿಸಿದೆ.
ಮತ್ತೊಂದೆಡೆ, F21 Pro 5G ಫೋನ್, 16 MP ಮುಂಭಾಗದ ಕ್ಯಾಮೆರಾ, 64 MP ಮುಖ್ಯ ಕ್ಯಾಮೆರಾ, 2 MP ಡೆಪ್ತ್ ಕ್ಯಾಮೆರಾ ಮತ್ತು 2 MP ಮ್ಯಾಕ್ರೋ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ.
F21 Pro ಎರಡು ಬಣ್ಣಗಳಲ್ಲಿ ಬರುತ್ತದೆ: ಸನ್ಸೆಟ್ ಆರೆಂಜ್ ಮತ್ತು ಕಾಸ್ಮಿಕ್ ಬ್ಲ್ಯಾಕ್. ಸನ್ಸೆಟ್ ಆರೆಂಜ್ ಮಾದರಿಯು ಉದ್ಯಮದಲ್ಲೇ ಮೊದಲೆನಿಸಿದ OPPO ಅನ್ವೇಷಿತ ʻಫೈಬರ್ ಗ್ಲಾಸ್ ಲೆದರ್ʼ ವಿನ್ಯಾಸವನ್ನು ಹೊಂದಿದೆ.
F21 Pro ಕೇವಲ 7.54 ಎಂಎಂ ದಪ್ಪವಾಗಿದ್ದು, 175 ಗ್ರಾಂ ತೂಕವಿದೆ. ಹೆಚ್ಚುವರಿ ಬಾಳಿಕೆಗಾಗಿ ಫೋನ್ ಮುಂಭಾಗಕ್ಕೆ 2.5D ಕಾರ್ನಿಂಗ್ ಗ್ಲಾಸ್ ಅಳವಡಿಸಲಾಗಿದೆ.
ಮತ್ತೊಂದೆಡೆ, F21 Pro 5G ಫೋನ್ ಎರಡು ಬಣ್ಣಗಳಲ್ಲಿ ಬರುತ್ತದೆ, ಅವುಗಳೆಂದರೆ: ರೈನ್‌ಬೋ ಸ್ಪೆಕ್ಟ್ರಮ್ ಮತ್ತು ಕಾಸ್ಮಿಕ್ ಬ್ಲ್ಯಾಕ್. ರೈನ್‌ಬೋ ಸ್ಪೆಕ್ಟ್ರಮ್ ಮಾದರಿಯು ಮೂರು-ಪದರಗಳ ವಿನ್ಯಾಸ ಮತ್ತು ಎರಡು ಪದರಗಳ ಲೇಪನ ಹೊಂದಿದೆ.
F 21Pro 5G ʻಎಫ್ʼ ಸರಣಿಯ ಅತ್ಯಂತ ತೆಳುವಾದ 5G ಸಾಧನವಾಗಿದೆ. ಇದು 7.55 ಎಂಎಂ ತೆಳುವಾಗಿದೆ ಮತ್ತು ಕೇವಲ 173 ಗ್ರಾಂ ತೂಕವನ್ನು ಹೊಂದಿದೆ. ಎರಡೂ ಹ್ಯಾಂಡ್‌ಸೆಟ್‌ಗಳು 6.4 ಇಂಚಿನ AMOLED ಡಿಸ್‌ಪ್ಲೇನೊಂದಿಗೆ ಬರುತ್ತವೆ.
OPPO F21 Pro ʻಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 680ʼ ಚಿಪ್‌ಸೆಟ್ ಹೊಂದಿದೆ. OPPO F 21 Pro 5G `ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 695 5G ಪ್ರೊಸೆಸರ್ ಒಳಗೊಂಡಿದೆ. Pro’ ಸರಣಿಯ ಎರಡೂ ಫೋನ್‍ಗಳು 4,500 mAh ಬ್ಯಾಟರಿ ಮತ್ತು 33W ಸೂಪರ್ SUPERVOOC ಚಾರ್ಜರ್ ಜತೆ ಬರಲಿದ್ದು, ಇದು 63 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ.
ಎರಡೂ ಡಿವೈಎಸ್ ಗಳು 128 GB ಸ್ಟೋರೇಜ್ ಮತ್ತು 8 GB RAM ಹೊಂದವೆ. OPPO ಸಂಸ್ಥೆಯ ಆವಿಷ್ಕಾರದ ʻRAM Expansion’ (RAM ವಿಸ್ತರಣೆ) ತಂತ್ರಜ್ಞಾನದ ಮೂಲಕ ಈ ಸಾಮರ್ಥ್ಯವನ್ನು ಇನ್ನೂ 5 GB ಹೆಚ್ಚಿಸಬಹುದು.
ಹೊಸ ವೈಶಿಷ್ಟ್ಯಗಳು!:
F21 Pro ಸರಣಿಯು OPPO ಸಂಸ್ಥೆಯ ಹೊಸ ColorOS 12 ನೊಂದಿಗೆ ಬರುತ್ತದೆ, ಇದು ಗೌಪ್ಯತೆಗಾಗಿ ʻಆಂಟಿ-ಪೀಪಿಂಗ್ʼ ನೋಟಿಫಿಕೇಶನ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಫೋನ್ ಗೆ ಮೆಸೇಜ್ ಬಂದಾಗ, ನಿಮ್ಮ ಫೋನಿನ ಪರದೆಯನ್ನು ಬೇರೊಬ್ಬರು ನೋಡುತ್ತಿದ್ದರೆ, ಸಂದೇಶಗಳನ್ನು ಮರೆಮಾಚುತ್ತದೆ!
ಗ್ರಾಹಕರು ʻಏರ್ ಗೆಶ್ಚರ್ʼ ಬಳಸುವ ಮೂಲಕ ಫೋನ್ ಅನ್ನು ಸ್ಪರ್ಶಿಸದೆಯೇ ತಮ್ಮ ಕೈಗಳನ್ನು ಸನ್ನೆ ಮಾಡುವ ಮೂಲಕ ಮಾಡುವ ಮೂಲಕ ಕರೆಗಳನ್ನು ಸ್ವೀಕರಿಸಲು, ಮ್ಯೂಟ್ ಮಾಡಲು ಅಥವಾ ಪೇಜ್‌ಗಳನ್ನು ಮೇಲಕ್ಕೆ ಮತ್ತು ಕೆಳಗೆ ಸ್ಕ್ರಾಲ್ ಮಾಡಲು ಸಾಧ್ಯವಾಗಲಿದೆ.
ಎಂಕೋ ಏರ್ 2 ಪ್ರೊ ಇಯರ್ ಬಡ್:
OPPO Enco Air 2 Pro ಸಕ್ರಿಯ ನಾಯ್ಸ್ ಕ್ಯಾನ್ಸಲೇಶನ್ ಹೊಂದಿರುವ `TWS’ ಇಯರ್ ಬಡ್‌ಗಳಾಗಿವೆ. ಇದು 12.4 ಎಂಎಂ ಟೈಟನೈಸ್ಡ್ ಡಯಾಫ್ರಮ್ ಡ್ರೈವರ್ ಅನ್ನು ಒಳಗೊಂಡಿದೆ. ಉತ್ತಮ ಬಾಸ್‍ಗಾಗಿ ʻಎನ್ಕೋ ಲೈವ್ʼ ಬಾಸ್ ಟ್ಯೂನಿಂಗ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಗ್ರಾಹಕರು ʻಎಚ್‌ಡಿಎಫ್‌ಸಿ ಬ್ಯಾಂಕ್ʼ, ʻಐಸಿಐಸಿಐ ಬ್ಯಾಂಕ್ʼ, ʻಕೋಟಕ್ ಬ್ಯಾಂಕ್ʼ, ʻಸ್ಟ್ಯಾಂಡರ್ಡ್ ಚಾರ್ಟರ್ಡ್ʼ, ʻಐಡಿಎಫ್ಸಿ ಫಸ್ಟ್ ಬ್ಯಾಂಕ್ʼ ಮತ್ತು ʻಬ್ಯಾಂಕ್ ಆಫ್ ಬರೋಡಾʼ ಕ್ರೆಡಿಟ್ ಕಾರ್ಡ್‌ಗಳ ಮೂಲಕ 10% ಕ್ಯಾಶ್‌ಬ್ಯಾಕ್ ಜೊತೆಗೆ 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ದೊರಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.