ಸಣ್ಣ ಗುತ್ತಿಗೆದಾರನ ಪ್ರಕರಣದ ಹಿಂದೆ ಬೇನಾಮಿ ಅಧ್ಯಕ್ಷೆಯ ‘ಕೈ’ವಾಡವಿದೆ: ಬಿಜೆಪಿ
Team Udayavani, Apr 16, 2022, 4:36 PM IST
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಮುಂದುವರಿದಿದೆ. ಈ ಪ್ರಕರಣದ ಹಿಂದೆ ಬೇನಾಮಿ ಅಧ್ಯಕ್ಷೆಯ ಕೈವಾಡವಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ಆರೋಪಿಸಿದೆ.
ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು, ಕೆಪಿಸಿಸಿಯ ಅಧ್ಯಕ್ಷ ಹಾಗೂ ಕೆಪಿಸಿಸಿಯ ʼಸೂಪರ್ ಅಧ್ಯಕ್ಷೆʼ ಇಬ್ಬರೂ ಅಕ್ರಮಗಳ ಸರದಾರರು. ಬೇನಾಮಿ ಅಧ್ಯಕ್ಷೆ ಬೇನಾಮಿ ಕಾಮಗಾರಿ ನಡೆಸುವುದರಲ್ಲೂ ಎತ್ತಿದ ಕೈ. ಕಾರ್ಯಾದೇಶ ಇಲ್ಲದ ಕಾಮಗಾರಿಗಳಿಗೆ ಕೋಟಿ ಕೋಟಿ ಸುರಿಯುವ ಧೈರ್ಯ ಖಂಡಿತವಾಗಿ ಒಬ್ಬ ಸಣ್ಣ ಗುತ್ತಿಗೆದಾರ ಮಾಡಲಾರ. ಇದರ ಹಿಂದೆ ಬೇನಾಮಿ ಅಧ್ಯಕ್ಷೆಯ ಕೈವಾಡವಿದೆ ಎಂದು ಆರೋಪಿಸಿದೆ.
ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಆಸ್ತಿ ಹೆಚ್ಚಳದ ಹಿಂದಿರುವ ವ್ಯಕ್ತಿ ಹಾಗೂ ಶಕ್ತಿ ಯಾರು? ಇವರ ಅಕ್ರಮದ ಆಚಾರ- ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಇದು ಸಕಾಲ. ಸಕ್ರಮ ಮಾರ್ಗದಲ್ಲಿ ಇಷ್ಟೊಂದು ಸಂಪತ್ತು ಗಳಿಸಲು ಸಾಧ್ಯವೇ? ಓಟು, ನೋಟಿಗಾಗಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹೊರಟ ಬೇನಾಮಿ ಅಧ್ಯಕ್ಷೆ ಇಂದು ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅಕ್ರಮವನ್ನೇ ರಾಜಕಾರಣ ಎಂದುಕೊಂಡಿರುವ ಕೆಪಿಸಿಸಿಯ ಸೂಪರ್ ಅಧ್ಯಕ್ಷರೇ, ನಿಮ್ಮ ಅಕ್ರಮ ಆಸ್ತಿ ಲೆಕ್ಕ ಕೊಡುವಿರಾ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಉತ್ತರಪ್ರದೇಶ; ಹಿಂದೂ ಯುವತಿ ಅಪಹರಣಕ್ಕೆ ಆಕ್ರೋಶ, ಮುಸ್ಲಿಂ ಯುವಕನ ಮನೆಗೆ ಬೆಂಕಿ
ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಸಚಿವನಾಗಿದ್ದ ಅವಧಿಯಲ್ಲಿ ಭ್ರಷ್ಟಾಧ್ಯಕ್ಷ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ? ಬೆಳಗಾವಿಯ “ಲಕ್ಷ್ಮಿ”ಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದರ ಹಿಂದೆ ಭ್ರಷ್ಟಾಧ್ಯಕ್ಷನ ಕೈವಾಡ ಇಲ್ಲವೇ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.