ಬಿ.ಸಿ.ರೋಡ್ ಫ್ಲೈ ಓವರ್: ತಳಭಾಗಕ್ಕೆ ಇಂಟರ್‌ಲಾಕ್ ಅಳವಡಿಕೆ
Team Udayavani, Apr 17, 2022, 9:22 AM IST
ಬಂಟ್ವಾಳ: ಸುಂದರ ಬಿ.ಸಿ.ರೋಡ್ ಭಾಗವಾಗಿ ಇದೀಗ ಫ್ಲೈ ಓವರ್ ತಳಭಾಗಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಆರಂಭಗೊಂಡಿದ್ದು, ತಳಭಾಗಕ್ಕೆ ಮಣ್ಣು ಹಾಕಿ ಸಮತಟ್ಟು ಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಬಸ್ ನಿಲ್ದಾಣ ಭಾಗಕ್ಕೂ ಇಂಟರ್‌ಲಾಕ್ ಅಳವಡಿಸುವ ಸಾಧ್ಯತೆ ಇದೆ. ಬಿ.ಸಿ.ರೋಡ್‌ನಲ್ಲಿ ಫ್ಲೈ ಓವರ್ ನಿರ್ಮಾಣಗೊಂಡ ಬಳಿಕ ಅದರ ತಳಭಾಗವು ಸಮರ್ಪಕ ವ್ಯವಸ್ಥೆಯಿಲ್ಲದೆ ಪಾಳು ಬಿದ್ದಿದ್ದು, ಅದೇ ಸ್ಥಳದಲ್ಲಿ ಆಟೋ ಸೇರಿದಂತೆ ಇತರ ವಾಹನಗಳು ನಿಲ್ಲುತ್ತಿದ್ದವು . ಮಳೆಗಾಲದಲ್ಲಿ ಸಂಪೂರ್ಣ ನೀರು ನಿಂತು ಕೊಳಕಾಗುವ ಪರಿಸ್ಥಿತಿಯೂ ಇತ್ತು. ಪ್ರಸ್ತುತ ಇಂಟರ್ ಅಳವಡಿಸುವ ಜತೆಗೆ ಚರಂಡಿಯನ್ನೂ ಸಮರ್ಪಕಗೊಳಿಸುವ ಕಾರ್ಯ ಆಗಬೇಕಿದೆ.
ಈ ಫ್ಲೈ ಓವರ್ ನ ಕೆಳಗೆ ಒಂದು ಭಾಗದಲ್ಲಿ ಶೌಚಾಲಯ ನಿರ್ಮಾಣಗೊಂಡಿದ್ದು, ಅದರ ಕಾಮಗಾರಿಯೂ ಪೂರ್ಣಗೊಳ್ಳಬೇಕಿದೆ. ಉಳಿದಂತೆ ಎಲ್ಲ ಭಾಗದಲ್ಲಿ ಇಂಟರ್‌ಲಾಕ್ ಅಳವಡಿಕೆಯೊಂದಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಆಗಬೇಕಿದೆ. ಆಟೋ-ಟ್ಯಾಕ್ಸಿಗಳ ನಿಲ್ದಾಣಕ್ಕೂ ಸರಿಯಾದ ವ್ಯವಸ್ಥೆ ಕಲ್ಪಿಸಬೇಕಿದೆ.
ಬಿ.ಸಿ.ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಸರ್ಕಲ್ ನಿರ್ಮಾಣದ ಪ್ರಸ್ತಾವವೂ ಇದ್ದು, ಅದರ ಕಾಮಗಾರಿಯೂ ಶೀಘ್ರ ಆರಂಭಗೊಳ್ಳಬೇಕಿದೆ. ಸರ್ಕಲ್ ಇಲ್ಲದೆ ಮಂಗಳೂರು ಭಾಗದಿಂದ ಆಗಮಿಸುವ ಕೆಎಸ್ ಆರ್‌ಟಿಸಿ ಬಸ್‌ಗಳು ನಿಲ್ದಾಣ ಪ್ರವೇಶಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.