ಫ್ಲಿಪ್ ಕಾರ್ಟ್ ನಿಂದ ಕರಕುಶಲಕರ್ಮಿಗಳಿಗಾಗಿ ಸಮರ್ಥ್ ಮಾರಾಟ ಮೇಳ
Team Udayavani, Apr 17, 2022, 4:54 PM IST
ಬೆಂಗಳೂರು: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ 2 ನೇ ಆವೃತ್ತಿಯ ಸಮರ್ಥ್ ಮಾರಾಟ ಮೇಳ `ಕ್ರಾಫ್ಟೆಡ್ ಬೈ ಭಾರತ್’ಗೆ ಚಾಲನೆ ನೀಡಿದೆ.
ಫ್ಲಿಪ್ ಕಾರ್ಟ್ ನೊಂದಿಗೆ ಸಹಭಾಗಿತ್ವ ಹೊಂದಿರುವ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸ್ವ-ಸಹಾಯ ಗುಂಪುಗಳ ಮಹಿಳೆಯರು, ದಿವ್ಯಾಂಗರು, ಕರಕುಶಲಕರ್ಮಿಗಳು, ನೇಕಾರರು ಸೇರಿದಂತೆ ಇನ್ನಿತರೆ ವರ್ಗದವರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವ ಕುಶಲಕರ್ಮಿಗಳ ದಿನದ ಅಂಗವಾಗಿ ಈ ಮೇಳ ಆಯೋಜಿಸಲಾಗಿದೆ.
ಫ್ಲಿಪ್ ಕಾರ್ಟ್ ಸಮರ್ಥ್ ಮೂಲಕ ದೇಶದ ಲಕ್ಷಾಂತರ ಕುಶಲಕರ್ಮಿಗಳು, ನೇಕಾರರು, ಎಂಎಸ್ಎಂಇಗಳು ಮತ್ತು ಸಣ್ಣ ವ್ಯಾಪಾರಿಗಳು ವಿಸ್ತಾರವಾದ ಮಾರುಕಟ್ಟೆಯನ್ನು ಪ್ರವೇಶಿಸಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. `ಕ್ರಾಫ್ಟೆಡ್ ಬೈ ಭಾರತ್’ನ 2 ನೇ ಆವೃತ್ತಿಯಲ್ಲಿ 1 ಲಕ್ಷಕ್ಕೂ ಅಧಿಕ ಉತ್ಪನ್ನಗಳು ಮತ್ತು 220 ಕ್ಕೂ ಹೆಚ್ಚು ಕಲಾ ಮಾದರಿಗಳನ್ನು ಫ್ಲಿಪ್ ಕಾರ್ಟ್ ನಲ್ಲಿ 400 ಮಿಲಿಯನ್ ಗೂ ಹೆಚ್ಚು ಗ್ರಾಹಕರನ್ನು ತಲುಪಲಿವೆ.
ಈ ಸಮರ್ಥ್ ಮೇಳದಲ್ಲಿ ಕುಶಲಕರ್ಮಿಗಳು ಮತ್ತು ನೇಕಾರರು ಹಾಗೂ ಅವರು ಉತ್ಪಾದಿಸಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ವೀಕ್ಷಣೆಗೆ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಫ್ಲಿಪ್ ಕಾರ್ಟ್ ಸಮರ್ಥ್ ಗೆಂದೇ ಪ್ರತ್ಯೇಕವಾದ ಕ್ಯಾಮೆರಾ ಫಿಲ್ಟರ್ ಸೌಲಭ್ಯವನ್ನು ಒದಗಿಸುತ್ತಿದೆ. ಇದು ಆಂಡ್ರಾಯ್ಡ್ ಆಪ್ ಮೇಲೆ ಎಆರ್ ಅನುಭವವನ್ನು ಒದಗಿಸುವ ಸೇವೆಯಾಗಿದೆ ಮತ್ತು ಗ್ರಾಹಕರು ನೇಕಾರರು ಮತ್ತು ಕುಶಲಕರ್ಮಿಗಳ ಜತೆ ಸಂವಹನ ನಡೆಸಬಹುದಾಗಿದೆ. ಈ ಫಿಲ್ಟರ್ ಗ್ರಾಹಕರಿಗೆ ಉತ್ಪನ್ನದ ಸ್ಕ್ಯಾನ್ ಮಾಡುವುದು ಮತ್ತು ನೇರವಾಗಿ ಮಾರಾಟಗಾರರ ಸೈಟ್ ಗೆ ಸಂಪರ್ಕ ಕಲ್ಪಿಸುತ್ತದೆ.
ಮೊದಲ ಆವೃತ್ತಿಯಲ್ಲಿ ಫ್ಲಿಪ್ ಕಾರ್ಟ್ ಸಮರ್ಥ್ ಮಾರಾಟಗಾರರು ತಮ್ಮ ಆದಾಯವನ್ನು 2 ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಅವರ ಉತ್ಪನ್ನಗಳ ಮಾರಾಟದಲ್ಲಿ ಗಮನಾರ್ಹವಾದ ಬೆಳವಣಿಗೆ ಆಗಿದ್ದು, ತಮ್ಮ ಉತ್ಪನ್ನಗಳನ್ನು ಲಕ್ಷಾಂತರ ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.