ಜಲಸಿರಿ ಯೋಜನೆಯಿಂದ ನೀರು ಸರಬರಾಜು ಸರಾಗ: ಶಾಸಕ ಕಾಮತ್
ಹೋಲಿಹಿಲ್: ಜಲಸಂಗ್ರಹಾಗಾರ ನಿರ್ಮಾಣ: ಪೂಜೆ
Team Udayavani, Apr 18, 2022, 11:11 AM IST
ಮರೋಳಿ: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 24×7 ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯಡಿ 10 ಲಕ್ಷ ಲೀ. ಸಂಗ್ರಹಣಾ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಮರೋಳಿಯ ಹೋಲಿಹಿಲ್ ಬಳಿ ಶಾಸಕ ವೇದವ್ಯಾಸ ಕಾಮತ್ ಭೂಮಿಪೂಜೆ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಹೋಲಿಹಿಲ್ ಬಳಿ 2.30 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ವಾಗುವ ಜಲಸಂಗ್ರಹಾಗಾರ ದಿಂದ ಮರೋಳಿ, ವೆಲೆನ್ಸಿಯಾ, ಅಳಪೆ ಉತ್ತರ ವಾರ್ಡ್‌ನ 1723 ಮನೆಗಳಿಗೆ ನೀರು ಪೂರೈಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ 3 ವಾರ್ಡ್‌ನ ಪ್ರತಿ ಮನೆಗೂ ನೀರು ಪೂರೈಸಲು ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನೀರಿನ ಸರಬರಾಜು ಸುಲಭಗೊಳಿಸಲು ಇದು ಪೂರಕವಾಗಲಿದೆ ಎಂದರು.
ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಉಪಮಹಾಪೌರರಾದ ಸುಮಂಗಲಾ ರಾವ್, ಪಾಲಿಕೆ ಸ್ಥಾಯೀ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ, ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ರೂಪಶ್ರೀ ಪೂಜಾರಿ, ಮುಖಂಡರಾದ ಕಿರಣ್ ಮರೋಳಿ, ಕೃಷ್ಣ ಎಸ್.ಆರ್., ಜಗದೀಶ್ ಶೆಣೈ, ವಸಂತ್ ಜೆ.ಪೂಜಾರಿ, ಜಗನ್ನಾಥ್ ಆಡುಮನೆ, ಪ್ರಶಾಂತ್ ಮರೋಳಿ, ರಾಘು, ಅರುಣ್ ಶೆಟ್ಟಿ, ರವಿ ಸತೀಶ್, ತೇಜಾಕ್ಷ ಸುವರ್ಣ, ಹರಿಣಾಕ್ಷ, ನಾಗೇಶ್ ದೇವಾಡಿಗ, ಅಂಬುಜಾಕ್ಷ ಆಚಾರ್ಯ, ಜನಾರ್ದನ, ಅನುಪಮಾ, ಫ್ರಾನ್ಸಿಸ್, ಶಿವಪ್ಪ ಅಮೀನ್, ಭೋಜ ಅಮೀನ್, ಜೆರೋಮ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.