ಮಿಷನ್‌ 150 ಸಂಕಲ್ಪ

2023ರ ಚುನಾವಣೆಗೆ ರಣಕಹಳೆ  

Team Udayavani, Apr 18, 2022, 1:02 PM IST

12

ಬಳ್ಳಾರಿ: 2023ರ ವಿಧಾನಸಭೆ ಚುನಾವಣೆಗೆ ವಿಜಯನಗರ ನೆಲದಲ್ಲಿ “ಮಿಷನ್‌ 150′ ಕಹಳೆ ಮೊಳಗಿಸಿರುವ ಬಿಜೆಪಿ, ಇದಕ್ಕೆ ಬೇಕಾದ ಸಕಲ ತಯಾರಿಗೂ ಸಲಹೆ- ಸೂಚನೆ ನೀಡಿದೆ. ಮತದಾರರನ್ನು ಹೇಗೆ ತಲುಪಬೇಕೆಂಬ ದಾರಿಯನ್ನೂ ಕಂಡುಕೊಂಡಿದೆ!

ಹೊಸಪೇಟೆ ನಗರದ ಭಟ್ರಳ್ಳಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ, ಅಭಿವೃದ್ಧಿ ಪರವಾದ ಚಿಂತನೆ ನಡೆಸುವುದರ ಜತೆಗೆ ವಿಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾದ ಕಾಂಗ್ರೆಸ್‌ ಪಕ್ಷದ ಧೋರಣೆಯನ್ನು ಖಂಡಿಸಲಾಯಿತು.

ಮುಂದಿನ 2023ರ ಚುನಾ ವಣೆಗೆ ರೂಪಿಸಬೇಕಾದ ಸಿದ್ಧತಾ ಕಾರ್ಯತಂತ್ರಗಳು, ಇನ್ನಿತರೆ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಪ್ರಧಾನಿ ನರೇಂದ್ರ ಮೋದಿ ಈಚೆಗೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆ ಎದುರಿ ಸಲು ಮಾಡಿಕೊಂಡಿದ್ದ ತಂತ್ರಗಾರಿಕೆ ಮತ್ತು ಅಭಿವೃದ್ಧಿ ಕಾರ್ಯಗಳಿಂದಲೇ ಗೆಲುವು ಸಾಧ್ಯ ಎಂಬ ಸಂದೇಶ ರವಾನಿಸಲಾಯಿತು.

ವಿಪಕ್ಷಗಳ ವಿರೋಧವಿ ದ್ದರೂ ಅದನ್ನು ಸಕಾರಾತ್ಮಕವಾಗಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗಿದ್ದು, ಉಕ್ರೇನ್‌ ಯುದ್ಧ ಭೂಮಿಯಿಂದ 22 ಸಾವಿರ ಜನರನ್ನು ಭಾರತಕ್ಕೆ ಕರೆತರುವುದರ ಜತೆಗೆ ಮೃತಪಟ್ಟ ಏಕೈಕ ವಿದ್ಯಾರ್ಥಿಯ ಮೃತದೇಹವನ್ನು ಸಹ ಭಾರತಕ್ಕೆ ತಂದು ಕುಟುಂಬಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ಮೋದಿ ಕಾರ್ಯ ಅಭಿನಂದಿಸಲಾಯಿತು.

ದೇಶ ಸೇರಿ ರಾಜ್ಯದಲ್ಲಿ ಕಾಂಗ್ರೆಸ್‌ ಸೃಷ್ಟಿಸುತ್ತಿರುವ ಗೊಂದಲದ ವಾತಾವರಣ, ಓಲೈಕೆ ರಾಜಕಾರಣ, ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸುತ್ತಿರುವುದಕ್ಕೆ ಖಂಡನೆ ವ್ಯಕ್ತವಾಯಿತು. ಮುಂದಿನ ಚುನಾವಣೆಗೆ ನಮ್ಮ ಸಿದ್ಧತೆ, ಕಾರ್ಯತಂತ್ರ ಗಳು ಹೇಗಿರಬೇಕು. ಯಾವ ರೀತಿ ಚುನಾವಣೆಗಳನ್ನು ಗೆಲ್ಲಬೇಕು. ಬೂತ್‌ ಮಟ್ಟದ ಕಾರ್ಯಕರ್ತರನ್ನು ಗುರುತಿಸಬೇಕು. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ, ಅವರೆಲ್ಲರನ್ನೂ ತೃಪ್ತಿ ಪಡಿಸುವ ಕೆಲಸ ಮಾಡಿದರೆ ಮಾತ್ರ ನಮಗೆ ಗೆಲುವು.

ಇಲ್ಲದಿದ್ದಲ್ಲಿ ನಮ್ಮನ್ನು ತಿರಸ್ಕರಿಸಬಹುದು. ಆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜನರ ಪ್ರೀತಿ-ವಿಶ್ವಾಸ ಗಳಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂಬ ಸಂದೇಶ ರವಾನಿಸಿ ಸಂಕಲ್ಪ ತೊಡುವ ಮೂಲಕ ಕಾರ್ಯಕಾರಿಣಿ ಸಭೆಯನ್ನು ಕೊನೆಗೊಳಿಸಲಾಯಿತು.

ಎರಡು ದಿನಗಳ ಕಾಲ ನಡೆದ ಕಾರ್ಯಕಾರಣಿ ಸಭೆಗೆ ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಕೈಜೋಡಿಸಿದರು. ಪಕ್ಷದ ಹಿರಿಯ ಮುಖಂಡರ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಕಾರ್ಯಕರ್ತರು, ಗುರುತಿನ ಚೀಟಿಯಿಲ್ಲದೆ ಯಾರೇ ಕಂಡರೂ, ತಾವ್ಯಾರು? ಐಡಿ ಕಾರ್ಡ್‌ ಇಲ್ಲ ಎಂದು ಪ್ರಶ್ನಿಸುತ್ತಿದ್ದರು. ಕಾರ್ಯಕಾರಣಿ ಸಭೆಯೊಳಗೆ ಅಪೇಕ್ಷಿತ ವ್ಯಕ್ತಿಗಳನ್ನು ಹೊರತುಪಡಿಸಿ, ಪಕ್ಷದ ಕಾರ್ಯಕರ್ತರು ಸೇರಿ ಯಾರೊಬ್ಬರನ್ನು ಸಹ ಒಳಗೆ ಬಿಡದೆ ತಡೆಯುತ್ತಿದ್ದರು.

ಟಾಪ್ ನ್ಯೂಸ್

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Chandra

Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ

BCCI

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

rajnath 2

Rajnath Singh; ಸ್ನೇಹ ಇದ್ದಿದ್ದರೆ ಪಾಕ್‌ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BSF Bangla

Bangladesh ಅಕ್ರಮ ವಲಸಿಗರ ಆಧಾರ್‌ ನಿಷ್ಕ್ರಿಯಗೊಳಿಸಿ: ಪ್ರಾಧಿಕಾರಕ್ಕೆ ಸೇನೆ ಮನವಿ

ISREL

Israel ಸೇನೆ ನಿರಂತರ ದಾಳಿ; ಒಂದು ವಾರದಲ್ಲಿ 20 ಹೆಜ್ಬುಲ್ಲಾ ಉಗ್ರರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Bellary; Darshan IT interrogation in jail

Bellary; ಜೈಲಿನಲ್ಲಿಂದು ದರ್ಶನ್‌ ಐಟಿ ವಿಚಾರಣೆ; ಬಳ್ಳಾರಿಗೆ ಬಂದ ಅಧಿಕಾರಿಗಳು

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

POlice

Huvina Hadagali: ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; ಪ್ರಕರಣ ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Rahul Gandhi (3)

Haryana;ಭಾರತ್‌ ಜೋಡೋ ಮಾದರಿ ಪ್ರಚಾರ ಇಂದು ಶುರು?

Chandra

Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ

BCCI

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

rajnath 2

Rajnath Singh; ಸ್ನೇಹ ಇದ್ದಿದ್ದರೆ ಪಾಕ್‌ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.