ನೆತ್ತಿ ಸುಡುವ ರಣ ಬಿಸಿಲಿಗೆ ಜನತೆ ಸುಸ್ತು


Team Udayavani, Apr 19, 2022, 9:38 AM IST

1summer

ಆಳಂದ: ಎಂದಿನಂತೆ ಮಾರ್ಚ್‌ ಮುಗಿದು ಏಪ್ರಿಲ್‌ ಅರ್ಧ ಅವಧಿ ಮುಗಿಯುತ್ತಾ ಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ಬೇಸಿಗೆ ತಾಪ ಹೆಚ್ಚುತ್ತಲೇ ಇದ್ದು, ಗಡಿನಾಡಿನ ಜನರು ಬಸವಳಿದು ಹೋಗಿದ್ದರೇ, ಜಾನುವಾರುಗಳು ನೀರಿಗಾಗಿ ತತ್ವಾರ ಪಡುತ್ತಿವೆ.

ಮಕ್ಕಳು, ಯುವಕರು ಗಡಿನಾಡಿನಲ್ಲಿರುವ ಕೆರೆ, ಬಾವಿಗಳಲ್ಲಿ ಈಜಿ ಧಗೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ವೃದ್ಧರು, ಶೆಡ್‌ ಮನೆಗಳನ್ನು ಹೊಂದಿದವರು ನೆರೆಯ ದೇವಸ್ಥಾನ, ಗಿಡ-ಮರಗಳ ನೆರಳನ್ನು ಆಶ್ರಯಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆಯಾಗಿದ್ದರಿಂದ ಬಿಸಿಲಿನ ಪ್ರಖರತೆ ಕಡಿಮೆಯಾಗಬಹುದು ಎಂದು ಕೊಂಡಿದ್ದರೂ ಪ್ರತಿ ವರ್ಷ ಇರುವಷ್ಟೇ ಅಂದರೆ 40ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಲಿದೆ. ಇದು ಜನ, ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಎರಡು ದಿನಗಳ ಹಿಂದೆ ತಾಲೂಕಿನ ಮಾದನ ಹಿಪ್ಪರಗಾ, ಖಜೂರಿಯಲ್ಲಿ ಕೊಂಚ ಅಕಾಲಿಕ ಮಳೆ ಸುರಿದು ತಂಪೇರಿದರೆ ಆಳಂದ ಮತ್ತು ನರೋಣಾ ವಲಯದ ವಾತಾವರಣ ಅಷ್ಟೇನು ತಂಪಾಗಿಲ್ಲ. ವಾರದಿಂದ ರಾತ್ರಿ ವೇಳೆ ಮೋಡಮುಸುಕಿದ ವಾತಾವರಣ ಹಾಗೂ ಕೆಲವೆಡೆ ಸುರಿದ ಕೊಂಚ ಜಿಟಿ, ಜಿಟಿ ಮಳೆಯಿಂದಾಗಿ ತಂಪೇರಿತ್ತಾದರೂ ಮರುದಿನದ ಎಂದಿನಂತೆ ಬಿಸಿಲಿನ ಪ್ರಕರತೆ ಹೆಚ್ಚುತ್ತಲೇ ಇದೆ. ಏಪ್ರಿಲ್‌ ತಿಂಗಳಲ್ಲೇ ತಾಲೂಕಿನಾದ್ಯಂತ ಹೆಚ್ಚಿನ ಜಾತ್ರೆ, ಉತ್ಸವಗಳು ಇವೆ. ಇವುಗಳಲ್ಲಿ ಪಾಲ್ಗೊಂಡ ಜನ ಹೈರಾಣಾಗುತ್ತಿದ್ದಾರೆ. ವಿವಾಹ, ನೆಂಟಸ್ಥನ, ಗೃಹ ಶಾಂತಿ, ಜಾತ್ರೆ, ಉತ್ಸವ ಹೀಗೆ ಬಿಸಿಲಿನ ಪ್ರಖರತೆಗೆ ಮೈಯೊಡ್ಡಿ ಜನತೆ ದಿನದೂಡುತ್ತಿದ್ದಾರೆ.

ತಂಪು ಪಾನೀಯದ ಮೊರೆ

ಒಂದೂವರೆ ತಿಂಗಳಿಂದ ಪಟ್ಟಣದ ಹಳೆ ತಹಶೀಲ್ದಾರ್‌ ಕಚೇರಿ, ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರಿಗಳು ಜನರ ದಾಹ ತಣಿಸಲು ತಂಪು ಪಾನೀಯ ಅಂಗಡಿಗಳನ್ನು ತೆರೆದಿದ್ದು, ವ್ಯಾಪಾರ ಭರ್ಜರಿಯಿಂದ ನಡೆಯುತ್ತಿದೆ. ಕಲ್ಲಂಗಡಿ, ಕರಬೂಜ್‌, ಸೇಬು, ಅಂಜೂರು ಮತ್ತಿತರ ಹಣ್ಣಿನ ಪಾನೀಯ, ಕಬ್ಬಿನಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಅಲ್ಲದೇ ಮಲೆನಾಡಿನಿಂದ ತರಿಸಿದ ಎಳೆನೀರು ಹೆಚ್ಚು ಮಾರಾಟವಾಗುತ್ತಿದೆ. ಮಳೆ ಉತ್ತಮವಾಗಿ ಆಗಿದ್ದರಿಂದ ತೋಟಗಳಲ್ಲಿ ತರಕಾರಿ ಬೆಳೆ ಉತ್ತಮವಾಗಿದೆ. ಜತೆಗೆ ಬೆಲೆಯೂ ಏರಿಕೆಯಾಗಿದೆ. ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿದೆ. ಬಡವರು ಮತ್ತು ಮಧ್ಯವರ್ಗದ ಜನರು ಮಣ್ಣಿನ ಮಡಿಕೆಯಲ್ಲೇ ನೀರು ತಂಪಾಗಿಸಿ ಕುಡಿದರೆ, ಅನುಕೂಲಸ್ತರು ಪ್ರಿಜ್‌ನಲ್ಲಿನ ನೀರು ಕುಡಿಯುತ್ತಿದ್ದಾರೆ.

ಅಧಿಕಾರಿಗಳು ಆರಾಮ, ಜನ ಹೈರಾಣ

ಹಬ್ಬಗಳಿಗೆ ಸರ್ಕಾರಿ ರಜೆ, ಎಡನೇ ಶನಿವಾರ ಹೀಗೆ ವಾರದ ರಜೆಗಳೇ ಹೆಚ್ಚಿರುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಲಭ್ಯವಾಗದೇ ಸಾಮಾನ್ಯ ಜನರು ಕಚೇರಿಗಳಿಗೆ ಅಲೆದಾಡಿ ಹೈರಾಣವಾಗುತ್ತಿದ್ದಾರೆ. ಇನ್ನೊಂದೆಡೆ ಬಹುತೇಕ ಇಲಾಖೆಗಳು ಮಿನಿವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರ ಆಗಿದ್ದರಿಂದ ದೂರದ ಕಚೇರಿಗೆ ಹೋಗಿ ಬರಲು ಗ್ರಾಮಸ್ಥರು ಪರದಾಡುವಂತೆ ಆಗಿದೆ. ಇದೇ ಪರಿಸ್ಥಿತಿ ಅಂಚೆ ಇಲಾಖೆಯಲ್ಲೂ ಇದೆ.

-ಮಹಾದೇವ ವಡಗಾಂವ

ಟಾಪ್ ನ್ಯೂಸ್

CHandrababu-Naidu

Tirupati ಲಡ್ಡು ಪ್ರಸಾದದ ಬಗ್ಗೆ ಈಗ ಭಕ್ತರಿಂದ ಮೆಚ್ಚುಗೆ: ಸಿಎಂ ನಾಯ್ಡು

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CHandrababu-Naidu

Tirupati ಲಡ್ಡು ಪ್ರಸಾದದ ಬಗ್ಗೆ ಈಗ ಭಕ್ತರಿಂದ ಮೆಚ್ಚುಗೆ: ಸಿಎಂ ನಾಯ್ಡು

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.