![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 19, 2022, 11:33 AM IST
ಕೊಪ್ಪಳ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲ ಸಂಗಮದಲ್ಲಿ ಎ.21 ರಿಂದ ಅನಿರ್ದಿಷ್ಟ ಧರಣಿ ಆರಂಭಿಸಲಾಗುವುದು ಎಂದು ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ,ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು 27 ವರ್ಷದಿಂದ ಹಕ್ಕೊತ್ತಾಯ ಮಾಡುತ್ತಲೇ ಬಂದಿದೆ. ಕಳೆದ ಒಂದು ವರ್ಷ ಆರು ತಿಂಗಳಿಂದ ನಿರಂತರ ಹೋರಾಟ ನಡೆಸಿದೆ. ಕಳೆದ ವರ್ಷ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದೇವೆ. ನಾವು ಬೆಂಗಳೂರಲ್ಲಿ ಧರಣಿ ನಡೆಸಿದಾಗ ಸರ್ಕಾರ ಆಯೋಗಕ್ಕೆ ವರದಿ ಕೊಡಲು ಶಿಫಾರಸ್ಸು ಮಾಡಿತ್ತು. ವರದಿ ಬಂದ ಬಳಿಕ ಮೀಸಾಲತಿ ಕೊಡಿವ ಭರವಸೆ ನೀಡಿತ್ತು. ಆದರೆ ನಿರಂತರ ಹೋರಾಟ, ಧರಣಿ ನಡೆಸಿದಾಗ ಸರ್ಕಾರ ಕಾಲವಕಾಶ ಕೇಳಿತ್ತು. ಸರ್ಕಾರವೇ ಕಳೆದ ವರ್ಷ ಸೆ.15 ರೊಳಗೆ ಮೀಸಲಾತಿ ಕೊಡುವ ಮಾತು ಕೊಟ್ಟಿತ್ತು. ಆದರೂ ಕೊಡಲಿಲ್ಲ. ಮತ್ತೆ ನಾವು ಸರ್ಕಾರಕ್ಕೆ ಗಡುವು ನೀಡಿದೆವು. ಸಿಎಂ ಬದಲಾದ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಮತ್ತೆ ಮೂರು ತಿಂಗಳ ಕಾಲವಕಾಶ ಕೇಳಿ, ಬಜೆಟ್ ಒಳಗಾಗಿ ಮೀಸಲು ಕೊಡುವು ಮಾತನ್ನಾಡಿತ್ತು. ಸರ್ಕಾರ ಮತ್ತೆ ಮಾತು ತಪ್ಪಿದೆ ಎಂದರು.
ಈಗ ಮತ್ತೆ ಏ.21 ರಂದು ಕೂಡಲಸಂಗಮ ಪೀಠದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಲು ನಿರ್ಧಾರವನ್ನು ಮಾಡಲಾಗಿದೆ. ಅಂದು ಮಹಾ ರಥೋತ್ಸವಕ್ಕೆ ಚಾಲನೆ ನೀಡಿ ಧರಣಿ ಆರಂಭಿಸಲಾಗುವುದು. ಈ ಬಾರಿ ಧರಣಿಗೆ ಸಮಾಜದ ಸತಿ ಪತಿಗಳು ತಮ್ಮ ಮಕ್ಕಳೊಂದಿಗೆ ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ತಾಲೂಕು ಹಂತದಲ್ಲಿ ನಂತದ ಜಿಲ್ಲಾ ಹಂತದಲ್ಲಿ ಡಿಸಿ ಕಚೇರಿ ಮುಂದೆ ಹೋರಾಟ ಆರಂಭಿಸಲಾಗುವುದು. ರಾಜ್ಯದಲ್ಲಿ ನಾಲ್ಕು ಜಿಲ್ಲೆಯಲ್ಲಿ ಮಾತ್ರ ಆಯೋಗ ಸರ್ವೆ ನಡೆಸಿದೆ. ಇನ್ನು ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಭಾಗಕ್ಕೆ ಬಂದಿಲ್ಲ ಎಂದರು.
ಇದನ್ನೂ ಓದಿ:ಕಾಪು: 51 ದಿನಗಳಲ್ಲಿ 9 ಸಾವಿರ ಕಿ.ಮೀ ಬೈಕ್ ಯಾತ್ರೆ; ಸಚಿನ್ ಶೆಟ್ಟಿ ತಂಡದ ಸಾಹಸ
ರಾಜ್ಯದಲ್ಲಿ ಅನುದಾನ ಕೊಡುವ ವಿಚಾರದಲ್ಲಿ ಕಮಿಷನ್ ಕೊಡುವ ವಿಷಯ ನನಗೆ ಗೊತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ನಮಗೆ ಅನುದಾನ ಕೊಟ್ಟಿದ್ದರು, ಆಗ ಕಮಿಷನ್ ಕೊಟ್ಟಿಲ್ಲ. ಆದರೆ ನಮಗೆ ಮೀಸಲಾತಿ ಕೊಡಿ ಎಂದು ಹೇಳಿ ಅನುದಾನ ವಾಪಾಸ್ ಕೊಟ್ಟಿದ್ದೇವೆ ಎಂದರು.
ನಿರಾಣಿ ಹೋರಾಟಕ್ಕೆ ಬರಲಿ: ಮೀಸಲಾತಿ ವಿಚಾರದಲ್ಲಿ ನಿರಾಣಿ ಹೋರಾಟಕ್ಕೆ ಬರಲಿ. ಕೆಲವು ಗುರು ಶಿಷ್ಯರ ನಡುವೆ ಜಗಳ ಇರ್ತಾವೆ. ಅವರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರಲ್ಲದೇ ಕರ್ನಾಟಕ ಸರ್ವ ಜನಾಂಗದ ತೋಟವಾಗಿದೆ. ಎಲ್ಲದರಲ್ಲೂ ಕೆಟ್ಟವರು ಇರುವುದು ಸಹಜ. ಇದರಲ್ಲಿ ಅಮಾಯಕರಿಗೆ ಅನ್ಯಾಯ ಆಗದಿರಲಿ ಎಂದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.