ಮೂಲಸೌಕರ್ಯಗಳಿಲ್ಲದೆ ಸಂಕಷ್ಟ
ಜ್ಯೋತಿ ನಗರವೆಂಬ ಕಿಷ್ಕಿಂದೆ ಅನಾರೋಗ್ಯಕರ ವಾತಾವರಣದಲ್ಲಿ ಬದುಕು!
Team Udayavani, Apr 19, 2022, 12:54 PM IST
ಕಾವೂರು: ವಲಸೆ ಕಾರ್ಮಿಕ ರಾಗಿ ಬಂದವರು ಗುಡ್ಡದ ಮೇಲೊಂದು ಜೋಪಡಿಯ ಮಾಡಿ ಎಂಬಂತೆ, ಕಾಲಕ್ರಮವಾಗಿ ಜೋಪಡಿಗಳು ಇದ್ದ ಲ್ಲಿಯೇ ಕಲ್ಲು ಸಿಮೆಂಟು, ತಗಡು ಶೀಟಿನಿಂದ ಮನೆ ಮಾಡಿ ಕುಳಿತವರಿಗೆ ಇದೀಗ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ವಿಷಯವಾಗಿದೆ. ಹಾಗಾಗಿ ಅನಾರೋಗ್ಯಕರ ವಾತಾವರಣದಲ್ಲಿ ಅವರು ವಾಸಿಸುವಂತಾಗಿದೆ. ಜ್ಯೋತಿ ನಗರವೆಂಬ ಬೆಟ್ಟದಂತಹ ಇಳಿಜಾರಿನ ಸರಕಾರಿ ಜಾಗದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಮನೆ ನಿರ್ಮಿಸಿ ಹಲವಾರು ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ವಾಸಿಸುವವರ ಸಂಖ್ಯೆ ಏರುತ್ತಿದ್ದಂತೆ ಒಳಚರಂಡಿ, ದಾರಿ ಸರಿಯಾಗಿ ಇಲ್ಲದಿರುವುದು ಪ್ರಮುಖ ವಾಗಿ ಇಲ್ಲಿನ ಸಮಸ್ಯೆಯಾಗಿ ಕಾಡತೊಡಗಿತು.
ರಸ್ತೆ ಚರಂಡಿಗೆ ವ್ಯತ್ಯಸವಿಲ್ಲದಂತೆ ಹರಿಯುವ ನೀರು, ಸರಿಯಾಗಿ ಬೆಳಕು ಇಲ್ಲದ ಕಡೆ ಮನೆಗಳು, ರಾಶಿ ಕಸ, ತೆರೆದ ಮೋರಿ, ಕೊಳಚೆ ನೀರು ಅಲಲ್ಲಿ ನಿಂತ ಕಾರಣ ದುರ್ವಾಸನೆ, ಜತೆಗೆ ಸೊಳ್ಳೆಗಳು ಹೆಚ್ಚಿವೆ. ರೋಗಗಳು ಹರಡುವ ಭೀತಿ ನಡುವೆ ಜ್ವರ, ಶೀತ ಸಾಮಾನ್ಯ. ಬಡಾವ ಣೆಗೆ ಕಾಲಿಟ್ಟರೆ ಇಲ್ಲಿ ಜನ ವಸತಿ ಸಾಧ್ಯವೇ ಎಂಬ ಅನುಮಾನ ಬಾರದೇ ಇರದು.
ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿದರೂ ಏರು ಪ್ರದೇಶದಲ್ಲಿ ಪ್ರಶರ್ ಕೊರತೆಯಿಂದ ಕೆಲವೆಡೆ ನೀರು ತಲುಪುವುದಿಲ್ಲ. ಬಡಾವಣೆ ತಲುಪಲು ಅಗಲ ಕಿರಿದಾದ ರಸ್ತೆ. ಸತತ ಮಾಹಿತಿ, ಜಾಗೃತಿಯಿಂದ ಸದ್ಯ ಬಯಲು ಶೌಚಾಲಯದ ಸಮಸ್ಯೆ ಇಲ್ಲ. ಆದರೆ ಸರಿಯಾಗಿ ಜಾಗವಿಲ್ಲದ ಪರಿಣಾಮ, ಕೆಲವರಿಗೆ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯಲು ರಸ್ತೆಯೇ ಆಧಾರ. ಇದರ ನೀರು ರಸ್ತೆಯಲ್ಲಿ ಹರಿದು ಅರೆ ಬರೆಯಾಗಿರುವ ಚರಂಡಿ ಸೇರುತ್ತದೆ. ಹರಿವ ಕೊಳಚೆ ನೀರು, ರಸ್ತೆ ಬದಿಯಲ್ಲೇ ಅಳಿದುಳಿದ ಆಹಾರ ಎಸೆಯುವ ಕಾರಣ ಬಡಾವಣೆ ಸುತ್ತ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಇಷ್ಟೆಲ್ಲ ಅವಾಂತರಗಳ ನಡುವೆ ಇಲ್ಲಿನ ನಿವಾಸಿಗಳು ಸಂಕಷ್ಟದ ಜೀವನ ಸಾಗುತ್ತಿದೆ.
ಈ ಬಡಾವಣೆಯಲ್ಲಿ 75ಕ್ಕೂ ಅಧಿಕ ಮನೆಗಳಲ್ಲಿ ಬಡವರ್ಗದವರು ವಾಸ ಮಾಡುತ್ತಿದ್ದಾರೆ. ಇದ್ದ ಹಾಗೆಯೇ ಮನೆಗಳು ಕೈಯಿಂದ ಕೈಗೆ ಬದಲವಾಣೆ ಆಗುತ್ತಲೇ ಇವೆ. ಇಲ್ಲಿನವರಿಗೆ ಮೂಲಸೌಕರ್ಯ ಒದಗಿಸದಿದ್ದರೂ ಹಕ್ಕು ಪತ್ರ, ಮತದಾನದ ಹಕ್ಕನ್ನು ನೀಡಲಾಗಿದೆ.
ಮೂಲ ಸೌಕರ್ಯ ಒದಗಿಸಲು ನಮಗೂ ಮನಸ್ಸಿದೆ, ಅನುದಾನವನ್ನು ಶಾಸಕರು ನೀಡಿದ್ದಾರೆ. ಆದರೆ ಅದನ್ನು ನೀಡುವುದು ಹೇಗೆ ಎಂಬುದೇ ಇಲ್ಲಿನ ಸಮಸ್ಯೆ. ಕಾರಣ ಜಾಗದ ಕೊರತೆ, ಚರಂಡಿ ನಿರ್ಮಾಣಕ್ಕೆ ತಾಂತ್ರಿಕ ಅಡಚಣೆ ಹೀಗೆ ನೂರಾರು ಅಡ್ಡಿಗಳಿವೆ. ಅದರೂ ನಮ್ಮಿಂದಾದಷ್ಟು ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಇಲ್ಲಿನ ಮನಪಾ ಸದಸ್ಯ ಶರತ್ ಕುಮಾರ್.
-ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.