ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿ 40 ಕೋಟಿ ರೂ.ವಂಚನೆ: ನಾಲ್ವರ ಸೆರೆ
ಸುಶಿಕ್ಷತ ಹಾಗೂ ವಿದ್ಯಾವಂತರಿಂದಲೇ ನಡೆದ ಪ್ರಕರಣ
Team Udayavani, Apr 19, 2022, 1:55 PM IST
ಬೆಂಗಳೂರು: ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶ ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿ 40 ಕೋಟಿ ರೂ.ಗೂ ಅಧಿಕ ಪ್ರಮಾಣದಲ್ಲಿ ವಂಚಿಸಿದ್ದ ಹೈ ಪ್ರೊಫೈಲ್ ಪ್ರಕರಣವನ್ನು ಭೇದಿಸಿರುವ ಸೈಬರ್ ಕ್ರೈಂ ಪೊಲೀಸರು, ಶೇರ್‌ಹ್ಯಾಶ್ ಸಂಸ್ಥೆಯ ನಿರ್ದೇಶಕ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಭಾರತ ಮೂಲದ ಶೀತಲ್ ಬಾಸ್ತ ವುದ್, ಜಬಿವುಲ್ಲಾ ಖಾನ್, ಇಮ್ರಾನ್ ರಿಯಾಜ್, ರೆಹಮತ್ ಉಲ್ಲಾ ಖಾನ್ ಬಂಧಿತ ಆರೋಪಿಗಳು. ಆರೋಪಿ ಗಳಿಂದ 44 ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದ 15 ಕೋಟಿ ರೂ. ಫ್ರೀಜ್ ಮಾಡಲಾಗಿದೆ. 1 ಕೆ.ಜಿ. 650 ಗ್ರಾಂ ಚಿನ್ನ, 78 ಲಕ್ಷ ರೂ. ನಗದು, 44 ಡಿಎಸ್‌ಸಿ ಟೋಕನ್‌ಗಳು, 5 ಸೀಲುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣವು ಸುಶಿಕ್ಷತ ಹಾಗೂ ವಿದ್ಯಾವಂತರಿಂದಲೇ ನಡೆದಿದ್ದು, ಸಾರ್ವಜನಿಕರನ್ನು ಹೊಸ ಹೊಸ ವಿಧಾನಗಳ ಮೂಲಕ ವಂಚಿಸುವುದಕ್ಕೆ ಮತ್ತೂಂದು ಉದಾಹರಣೆಯಾಗಿದೆ.
2021ರಲ್ಲಿ ಕೊರೊನಾ ಎರಡನೇ ಅಲೆ ವೇಳೆ ಸಾರ್ವಜನಿಕರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಹಾಗೂ ಮೊಬೈಲ್‌ಗಳಿಗೆ ಸಂದೇಶ ಕಳುಹಿಸಿದ್ದು, ಶೇರ್ ಹ್ಯಾಸ್ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ, ಎಚ್‌ಎಸ್‌ಟಿ (ಹೆಲಿಯಮ್ ಕ್ರಿಪ್ಟೋ ಟೋಕನ್) ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶ ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡುವುದಾಗಿ ನಂಬಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಪರ್ಸಂಟೇಜ್ ಪಿತಾಮಹ, ಅನೈತಿಕ ರಾಜಕಾರಣದ ಅಸಲಿ ಅಪ್ಪ: ಕುಮಾರಸ್ವಾಮಿ ಟೀಕೆ
ಕಂಪನಿಗಳ ಹೇಳಿಕೆ ಮೇಲೆ ವಿಶ್ವಾಸವಿದ್ದ ಸಾರ್ವಜನಿಕರು ಶೇರ್‌ಹ್ಯಾಶ್ ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಅಲ್ಲಿ ಖಾತೆ ತೆಗೆದು ಲಾಗಿನ್ ಆಗಿ ತಮ್ಮ ಉಳಿತಾಯ ಬ್ಯಾಂಕ್ ಖಾತೆಗಳಿಂದ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್‌ಗಳ ಮೂಲಕ ಕೊಟಾಟ ಟೆಕ್ನಾಲಜಿ, ಸಿರಲೀನ್ ಟೆಕ್ ಸಲ್ಯೂಷನ್ ಪ್ರೈ.ಲಿ., ನಿಲೇನ್ ಇನ್ಫೋಟೆಕ್ ಪ್ರೈ.ಲಿ., ಮೋಲ್‌ಟ್ರೇಸ್ ಎಕ್ಸೀಮ್ ಪ್ರೈ..ಲಿ., ಕ್ರಾಂಷಿಂಗ್‌ಟನ್ ಟೆಕ್ನಾಲಜಿ ಪ್ರೈ.ಲಿ.,ನಲ್ಲಿ ಕೋಟ್ಯಂತರ ರೂ.ಹಣವನ್ನು ಹೂಡಿಕೆ ಮಾಡಿದ್ದರು.
ಶೇ.30 ಲಾಭಾಂಶ ಭರವಸೆ: ಕಳೆದ ಜ.11ರಂದು ಶೇರ್‌ಹ್ಯಾಶ್ ವರ್ಷನ್ 1ರಲ್ಲಿ ತಾಂತ್ರಿಕ ದೋಷ ಹೊಂದಿದ್ದು, ಹೊಸ ವೈಶಿಷ್ಟ್ಯಗಳೊಂದಿಗೆ ತಮ್ಮ ಅಪಿ É ಕೇಶನ್ ಅನ್ನು ಅಪ್‌ಗ್ರೇಡ್ ಮಾಡುವ ಅಗತ್ಯವಿದೆ. ಜ.18 ಮತ್ತು 19ರೊಳಗೆ ಶೇರ್‌ಹ್ಯಾಶ್ 2.0 ವರ್ಷನ್ -2 ಹೊಸ ಅಪ್ಲಿಕೇಶನ್ ಬಿಡುಗಡೆಯಾಗಲಿದೆ. ಅದರಲ್ಲಿ ಅಧಿಕ ಹಣ ಹೂಡಿಕೆ ಮಾಡುವವರಿಗೆ ಪ್ರೀಮಿಯಂ ಸದಸ್ಯತ್ವ ಸಿಗಲಿದೆ. ಜ.11ರಂದು ಸಂಜೆ 6 ಗಂಟೆಯೊಳಗೆ ಗ್ರಾಹಕರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ, ಹೊಸ ಅಪ್ಲಿಕೇಶನ್ ಬಿಡುಗಡೆಯಾಗುವ ವೇಳೆ ಶೇ.30ರಷ್ಟು ಲಾಭಾಂಶ ಸಿಗಲಿದೆ ಎಂದು ಆರೋಪಿಗಳು ಗ್ರಾಹಕರಿಗೆ ಸಂದೇಶ ಕಳುಹಿಸಿ ನಂಬಿಸಿದ್ದರು.
ಇದನ್ನು ನಂಬಿ ನೂರಾರು ಗ್ರಾಹಕರು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಜ.19ರಂದು ಗ್ರಾಹಕರು ಶೇರ್‌ಹ್ಯಾಶ್ ಆ್ಯಪ್ ಲಾಗಿನ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಗೂಗಲ್ ಪ್ಲೇ ಸ್ಟೋರ್‌ನಿಂದ ಶೇರ್ ಹ್ಯಾಶ್ ಅಪ್ಲಿಕೇಶನ್ ತೆಗೆದು ಹಾಕಿರುವುದು ಗ್ರಾಹಕರ ಗಮನಕ್ಕೆ ಬಂದಿತ್ತು. ಆರೋಪಿಗಳು ಯಾವುದೇ ಲಾಭಾಂಶ ನೀಡದೇ, ಕ್ರಿಪ್ಟೋ ಮೈನಿಂಗ್ ಯಂತ್ರವನ್ನೂ ನೀಡದೇ ವಂಚಿಸಿರುವ ಬಗ್ಗೆ ಗ್ರಾಹಕರು ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.