23ರಿಂದ ಬೃಹತ್ ಉದ್ಯೋಗ ಮೇಳ-ಚರ್ಚೆ
Team Udayavani, Apr 19, 2022, 5:14 PM IST
ಲಕ್ಷ್ಮೇಶ್ವರ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಏ.23 ಮತ್ತು 24 ರಂದು ಹರಿಹರ ಪೀಠದ ಬೃಹತ್ ಉದ್ಯೋಗ ಮೇಳ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿ ವಿವಿಧ ಚರ್ಚೆ ನಡೆಯಲಿವೆ ಮತ್ತು ವಚನಾನಂದ ಶ್ರೀಗಳ ಚತುರ್ಥ ವಾರ್ಷಿಕ ಪೀಠಾರೋಹಣ ಸಮಾರಂಭ ಜರುಗಲಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಸ್ಸೆಸ್ಸೆಲ್ಸಿಯಿಂದ ವಿವಿಧ ಪದವಿ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆಯಬಹುದು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ. ಹೊಸ ಶಿಕ್ಷಣ ನೀತಿಯ ಸವಾಲುಗಳು, ಅದರ ಉಪಯೋಗಗಳು, ಉದ್ಯೋಗ ಅವಕಾಶಗಳ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚೆ ನಡೆಯಲಿದೆ ಎಂದರು.
ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಮೈಲಾರ ಮಹಾದೇವಪ್ಪ, ಕೆಳದಿ ಚೆನ್ನಪ್ಪ, ಕಂಬಳಿ ಸಿದ್ದಪ್ಪ, ಅರಠಾಳ್ ರುದ್ರುಗೌಡ್ರು, ಹದರಗುಂಚಿ ಶಂಕರ್ ಗೌಡ್ರು ಹೀಗೆ ಹಲವು ಪಂಚಮಸಾಲಿ ಮಹನೀಯರ ಸಾಧನೆಗೆ ಗೌರವ ನೀಡುವ ಕಾರ್ಯಕ್ರಮವಿದೆ.
ಹರ ಜಾತ್ರೆ ಕಾನ್ಸೆಪ್ಟ್ ಬದಲಾಯಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಲ್ಪನೆಯಲ್ಲಿ ಹರಜಾತ್ರೆ ಗಮನ ಸೆಳೆಯಲಿದೆ. ಕೆಲವು ಮಹಾನ್ ವ್ಯಕ್ತಿಗಳ ಸಾಕ್ಷ್ಯ ಚಿತ್ರದ ವರ್ಣಚಿತ್ರಗಳ ಪ್ರದರ್ಶನವಿದೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, ಐಟಿ ಬಿಟಿ ಸಚಿವಾಲಯ ಆಗಮಿಸುವ ಕಾರ್ಯಕ್ರಮದಲ್ಲಿ ಬೃಹತ್ ಕಂಪನಿಗಳು, ಬೃಹತ್ ಕೈಗಾರಿಕೆ ಇಲಾಖೆ ಐಎಎಸ್-ಕೆಎಎಸ್ ಅಧಿಕಾರಿಗಳು ಇದರ ನೇತೃತ್ವ ವಹಿಸಲಿದ್ದಾರೆ. ಪಂಚಮಸಾಲಿ ಸಮಾಜದ ಗುರುಪೀಠ ಹರಿಹರದಲ್ಲಿ ತ್ರಿವಿಧ ದಾಸೋಹದ ಜತೆಗೆ ಆರೋಗ್ಯ, ಅಧ್ಯಾತ್ಮ ದಾಸೋಹಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.
ಈ ವೇಳೆ ಪದಾಧಿಕಾರಿಗಳಾದ ರಮೇಶ ಹಾಳದೋಟದ, ರುದ್ರಪ್ಪ ಉಮಚಗಿ, ಮಂಜುನಾಥ ಕಣವಿ, ಈರಣ್ಣ ಕಟಗಿ, ಜುಂಜುನಗೌಡ ನರಸಮ್ಮನವರ, ಫಕ್ಕಿರೇಶ ಕವಲೂರ, ಸಂತೋಷ ಜಾವೂರ, ಪ್ರವೀಣ ಬಾಳಿಕಾಯಿ, ಮಂಜುನಾಥ ಗೌರಿ, ಮಂಜುನಾಥಗೌಡ ಕರೆಗೌಡ್ರ, ಶಿವಾನಂದ ಬನ್ನಿಮಟ್ಟಿ, ರವೀಂದ್ರ ಯಲಿಗಾರ, ಪ್ರಕಾಶ ಜಾವೂರ, ಮಂಜುನಾಥ ಬನ್ನಿಕೊಪ್ಪ, ಗಂಗಾಧರ ಮೆಣಸಿನಕಾಯಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.