ಗುಜರಿಗೆ ಸೇರಿದ್ದ ಬೈಕನ್ನು ಕಡಿಮೆ ಖರ್ಚಿನಲ್ಲಿ ಚಾರ್ಜಿಂಗ್ ಬೈಕ್ ಆವಿಷ್ಕರಿಸಿದ ಮೆಕ್ಯಾನಿಕ್


Team Udayavani, Apr 20, 2022, 10:02 AM IST

3bike

ಬೀದರ: ಗಗನಕ್ಕೇರುತ್ತಿರುವ ಪೆಟ್ರೋಲ್‌ ಬೆಲೆಯಿಂದ ಬೇಸತ್ತಿರುವ ವಾಹನ ಸವಾರರು ಈಗ ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಅದರಂತೆ ಬೀದರನಲ್ಲೊಬ್ಬ ಎಲೆಕ್ಟ್ರಾನಿಕ್‌ ಮೆಕ್ಯಾನಿಕ್‌ವೊಬ್ಬರು ಗುಜರಿಗೆ ಹಾಕಿದ್ದ ದ್ವಿಚಕ್ರ ವಾಹನವನ್ನು ಚಾರ್ಜಿಂಗ್‌ (ಎಲೆಕ್ಟ್ರಾನಿಕ್‌) ಬೈಕ್‌ನ್ನಾಗಿ ಆವಿಷ್ಕರಿಸಿದ್ದು, ಜನರ ಗಮನ ಸೆಳೆಯುತ್ತಿದೆ.

ನಗರದಲ್ಲಿ ಸಂತೋಷ ಎಲೆಕ್ಟ್ರಿಕ್‌ ರಿಪೇರಿ ಶಾಪ್‌ ನಡೆಸುವ ಸಿದ್ರಾಮ್‌ ಅಂಬೆಸಿಂಗೆ ಚಾರ್ಜಿಂಗ್‌ ಬೈಕ್‌ನ್ನು ಆವಿಷ್ಕರಿಸಿದವರು. ಪೆಟ್ರೋಲ್‌ ಬೆಲೆ ಶತಕ ಬಾರಿಸುತ್ತಿದ್ದಂತೆ ಸಿದ್ರಾಮ್‌ ಅವರೂ ಎಲೆಕ್ಟ್ರಾನಿಕ್‌ ಬೈಕ್‌ ಖರೀದಿಸುವ ಯೋಚನೆ ಮಾಡಿದರು. ಆದರೆ, ತಾವೇ ಮೆಕ್ಯಾನಿಕ್‌ ಆಗಿರುವುದರಿಂದ ಖುದ್ದು ಬೈಕ್‌ನ್ನು ತಯಾರಿಸಲು ನಿರ್ಧರಿಸಿದರು. ಕೊನೆಗೆ ಗುಜರಿಗೆ ಸೇರಿದ್ದ ತಮ್ಮ ಬೈಕ್‌ನ್ನೇ ಅತಿ ಕಡಿಮೆ ಖರ್ಚಿನಲ್ಲಿ ಚಾರ್ಜಿಂಗ್‌ ಬೈಕ್‌ನ್ನಾಗಿ ಬದಲಾಯಿಸಿದ್ದಾರೆ.

ಈ ಹಿಂದೆ ಎರಡು ಬ್ಯಾಟರಿ ಚಾಲಿತ ಸೈಕಲ್‌ಗ‌ಳನ್ನು ತಯಾರಿಸಿದ್ದ ಅನುಭವ ಹಿನ್ನೆಲೆ ಸಿದ್ರಾಮ್‌ ಅವರಿಗೆ ಚಾರ್ಜಿಂಗ್‌ ಬೈಕ್‌ ಸಿದ್ಧಪಡಿಸಲು ಸುಲಭವಾಯಿತು. ತಮ್ಮ ಹೊಂಡಾ ಯುನಿಕಾರ್ನ್ ದ್ವಿಚಕ್ರ ವಾಹನಕ್ಕೆ 750 ವ್ಯಾಟ್‌ ಮೋಟಾರ್‌ ಮತ್ತು 12 ವೋಲ್ಟ್ ಒಟ್ಟು 4 ಬ್ಯಾಟರ್‌ಗಳನ್ನು ಅಳವಡಿಸಿದ್ದು, ಕನ್ವರ್ಟರ್‌ ಮತ್ತು ಎಕ್ಸ್‌ಲೆಟರ್‌ ಸೇರಿ ಇನ್ನಿತರ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಕೇವಲ ಮೂರ್‍ನಾಲ್ಕು ದಿನಗಳಲ್ಲಿ ಬೈಕ್‌ನ್ನು ತಯ್ನಾರಿಸಿದ್ದಾರೆ. ಇದಕ್ಕಾಗಿ 25 ಸಾವಿರ ರೂ. ವೆಚ್ಚ ಮಾಡಿದ್ದಾರೆ.

ಈ ಎಲೆಕ್ಟ್ರಿಕ್‌ ವಾಹನ ಒಮ್ಮೆ (2ರಿಂದ 3 ಗಂಟೆ) ಚಾರ್ಜ್‌ ಮಾಡಿದರೆ ಸಾಕು 60 ರಿಂದ 70 ಕಿಮೀ ಓಡಬಲ್ಲ ಸಾಮರ್ಥ್ಯ ಹೊಂದಿದ್ದು, ಒಮ್ಮೆ ಚಾರ್ಜ್‌ಗೆ ಕೇವಲ 10-15 ರೂ. ಖರ್ಚು ತಗುಲಿದಂತಾಗುತ್ತಿದೆ. ಇನ್ನೂ ಪೆಟ್ರೋಲ್‌ಗೆ ಗುಡ್‌ ಬೈ ಹೇಳಿರುವುದರಿಂದ ದಿನಾಲೂ 100 ರೂ. ಉಳಿತಾಯ ಮಾಡುತ್ತಿದ್ದಾರೆ ಎನ್ನುತ್ತಾರೆ ಮೆಕ್ಯಾನಿಕ್‌ ಸಿದ್ರಾಮ್‌.

ಸದಾ ಹೊಸತನದ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳುವ ಮೆಕ್ಯಾನಿಕ್‌ ಸಿದ್ರಾಮ್‌ ಅವರ ಚಾರ್ಜಿಂಗ್‌ ದ್ವಿಚಕ್ರ ವಾಹನ ಈಗ ಜನಾಕರ್ಷಣೆ ಆಗಿದ್ದು, ಬೈಕ್‌ನ್ನು ನೋಡಲು ಜನ ಮುಗಿಬಿಳುತ್ತಿದ್ದಾರೆ. ಹಳೆಯ ಬೈಕ್‌ ಗುಜರಿಗೆ ಕೊಡುವ ಬದಲು ಅದನ್ನೇ ಎಲೆಕ್ಟ್ರಿಕ್‌ ಬೈಕ್‌ನ್ನಾಗಿ ಬದಲಾಯಿಸಲು ಮನಸ್ಸು ಮಾಡುತ್ತಿರುವ ಸವಾರರು, ನಮಗೂ ಈ ರೀತಿ ಒಂದು ಚಾರ್ಜಿಂಗ್‌ ಬೈಕ್‌ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದಾರೆ.

ಪೆಟ್ರೋಲ್‌ ದುಬಾರಿ ದರದಿಂದ ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆ ಆಗುತ್ತಿದೆ. ನಾನು ತಯಾರಿಸಿದ ಚಾರ್ಜಿಂಗ್‌ ವಾಹನ ಬಳಕೆಯಿಂದ ಹೊರೆ ಕೊಂಚ ಇಳಿಕೆಯಾಗಬಹುದು. ಹಾಗಾಗಿ ಜನರ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಕೆಲಸದ ಬಿಡುವಿನ ಸಮಯದಲ್ಲಿ ಇತರರಿಗೂ ಬೈಕ್‌ ತಯಾರಿಸಿ ಕೊಡುತ್ತೇನೆ ಎಂದು ಹೇಳುತ್ತಾರೆ ಸಿದ್ರಾಮ್‌.

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.