![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Apr 20, 2022, 2:03 PM IST
ಬೆಂಗಳೂರು: “ಹಲಾಲ್ ಕಟ್- ಜಟ್ಕಾಕಟ್’ ಗೊಂದಲ ತಿಳಿಗೊಂಡ ಬೆನ್ನಲ್ಲೇ ನಗರದಲ್ಲಿ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ತಕ್ಷಣ ಅಗತ್ಯ ದಾಖಲೆಗಳೊಂದಿಗೆ ಪರವಾನಗಿ ಪಡೆಯುವಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಹಲಾಲ್ ಕಟ್ ವಿರುದ್ಧ ನಡೆದಿದ್ದ ಪ್ರಚಾರದಲ್ಲಿ ಹಿಂದವೀ ಮೀಟ್ ಮಾರ್ಟ್ ಸಕ್ರಿಯವಾ ಗಿತ್ತು. ಆದರೆ, ವ್ಯಾಪಾರ ನಡೆಸಲು ಹಿಂದವೀ ಮೀಟ್ ಮಾರ್ಟ್‌ಗಳು ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ. ಹೀಗಾಗಿ, ಹಲವು ಅಂಶಗಳನ್ನು ಉಲ್ಲೇಖೀಸಿ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿದೆ.
ಪರವಾನಗಿ ಪಡೆಯಲು ವಾರದ ಗಡುವು ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಲೈಸೆನ್ಸ್ ಪಡೆಯದಿದ್ದರೆ, ವಹಿವಾಟು ಸ್ಥಗಿತಗೊಳಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜರಾಜೇಶ್ವರಿನಗರ ದಲ್ಲಿರುವ ಹಿಂದವೀ ಮಾರ್ಟ್ ಮಾಲೀಕರಿಗೆ ಆ ವಲಯ ಕಚೇರಿಯಿಂದ ಎಚ್ಚರಿಕೆ ನೀಡಲಾಗಿದೆ. ಕೇವಲ ಕೋಳಿ ಅಂಗಡಿಯಾದರೆ ವಾರ್ಷಿಕ ಪರವಾನಗಿ ಶುಲ್ಕ 2,500 ರೂ. ಆಗಿದೆ. ಕೋಳಿಯ ಜತೆಗೆ ಮಟನ್ ಮತ್ತು ಮೀನು ಮಾರಾಟ ಮಳಿಗೆ ನಡೆಸುವುದಿದ್ದರೆ, 10,500 ರೂ. ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿವರ್ಷ ಶುಲ್ಕ ಪಾವತಿಸಬೇಕು. ಮೊದಲ ಬಾರಿಗೆ ಪರವಾನಗಿ ಪಡೆಯಲು ಇದೇ ಮೊತ್ತದ ಶುಲ್ಕ ಅನ್ವಯವಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ದೂರುಗಳ ಹಿನ್ನೆಲೆ ನೋಟಿಸ್ : ಜಟ್ಕಾ ಕಟ್ ಮಾಂಸದ ಅಂಗಡಿಗಳು ಪಾಲಿಕೆ ನೀಡುವ ಪರವಾನಗಿ ಪಡೆದುಕೊಂಡಿಲ್ಲ. ಮಾಂಸ ಮಾರಾಟ ಮಾಡುವ ಮಳಿಗೆಯಲ್ಲಿಯೇ ಅನಧಿಕೃತ ಪ್ರಾಣಿವಧೆ, ಮಾಂಸದ ಮಳಿಗೆಯಲ್ಲಿ ಗ್ಲಾಸ್ ಅಳವಡಿಸದೆ ಇರುವುದು, ಮಾಂಸ ಕತ್ತರಿಸುವ ಉಪಕರಣ ಗಳನ್ನು ಸಮರ್ಪಕ ರೀತಿಯಲ್ಲಿ ಶುದ್ಧಗೊಳಿಸು ತ್ತಿಲ್ಲ. ಕೋಳಿ ಮಾರಾಟ ಮಳಿಗೆಯಲ್ಲಿ ಗಾಳಿ, ಬೆಳಕು, ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಮಾಂಸದ ಅಂಗಡಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವ್ಯವಸ್ಥಿತವಾಗಿ ವಿಲೇವಾರಿ ಮಾಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ.
ಸಿಬ್ಬಂದಿಯ ವಾರ್ಷಿಕ ಆರೋಗ್ಯ ತಪಾಸಣೆಯ ಪತ್ರ ಒದಗಿಸಿಲ್ಲ ಎಂದು ಪಾಲಿಕೆಯ ಜಂಟಿ ನಿರ್ದೇಶಕ ಡಾ.ಎಸ್.ಎಂ.ಮಂಜುನಾಥ್ ಶಿಂಧೆ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ ಉಲ್ಲಾಳ, ಜ್ಞಾನಭಾರತಿ, ಕಮ್ಮನಹಳ್ಳಿ, ಇಂದಿರಾನಗರ, ಹೊರಮಾವು, ಬನ್ನೇರುಘಟ್ಟ, ನೆಲಗದರನಹಳ್ಳಿಯಲ್ಲಿ ಹಿಂದವೀ ಮೀಟ್ ಮಾರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಿಬಿಎಂಪಿ ನಿಯಮಕ್ಕೆ ಅನುಗುಣವಾಗಿ ಲೈಸೆನ್ಸ್ ಪಡೆದು, ಎಲ್ಲ ನಿಯಮ ಪಾಲಿಸುತ್ತೇವೆ. -ಮುನೇಗೌಡ, ಹಿಂದವೀ ಮೀಟ್ ಮಾರ್ಟ್ ಮಾಲೀಕ
You seem to have an Ad Blocker on.
To continue reading, please turn it off or whitelist Udayavani.