ಸಾಲ ಇರುವುದುದು ನಮ್ಮಿಂದ ಅಲ್ಲ,ಆರ್ಥಿಕ ಶಿಸ್ತು ತರುತ್ತಿದ್ದೇವೆ: ಸಿಎಂ ಬೊಮ್ಮಾಯಿ

ಸಂಪುಟ ವಿಚಾರದಲ್ಲಿ ಸರಿಯಾದ ನಿರ್ಧಾರ ಆಗುತ್ತದೆ

Team Udayavani, Apr 20, 2022, 1:56 PM IST

1-fdfsdf

ಶಿವಮೊಗ್ಗ :ರಾಜಕಾರಣದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಆಗುತ್ತದೆ, ಅದನ್ನು ನನಗೆ ಬಿಡಿ‌, ನಾವು ಮಾಡುತ್ತೇವೆ ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಕೋಮು ಭಾವನಾತ್ಮಕತೆ ಇತ್ತೀಚಿನ ದಿನಗಳಲ್ಲಿ ಸೆನ್ಸೆಷನಲ್ ಆಗಿದೆ. ವಾಟ್ಸಾಪ್, ಫೇಸ್ ಬುಕ್ ನಿಯಂತ್ರಣ ಮಾಡಬೇಕು ಎಂದು ಈ ಹಿಂದೆ ಬಹಳ ದೊಡ್ಡ ಚರ್ಚೆ ಆಗಿತ್ತು. ಸಮಾಜದಲ್ಲಿ ಸಂಯಮ‌ ಬಹಳ ಮುಖ್ಯ. ದುಷ್ಕೃತ್ಯ ಯಾರು ಮಾಡಿದರೂ ಅವರನ್ನು ದಂಡಿಸಬೇಕು, ಶಿಕ್ಷಿಸಬೇಕು ಅದನ್ನು ಮಾಡೋಣ.ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಾಲ ಇರುವುದುದು ನಮ್ಮಿಂದ ಅಲ್ಲ

ಬಜೆಟ್ ಆದೇಶ ಇದೇ ಮೊದಲ ಬಾರಿಗೆ ಮೊದಲ ತಿಂಗಳಿನಲ್ಲಿಯೇ ಆಗುತ್ತಿದೆ.3. ಲಕ್ಷ 80 ಕೋಟಿ ಸಾಲ ಇರುವುದುದು ನಮ್ಮಿಂದ ಅಲ್ಲ.ಆಗಸ್ಟ್ 2021 ರವರೆಗೆ ಕೋವಿಡ್ ಕಾರಣದಿಂದ ಆರ್ಥಿಕ ಸಂಗ್ರಹ ಕಡಿಮೆ ಇತ್ತು. ಈಗ ಆರ್ಥಿಕ ಸಂಗ್ರಹ ಹೆಚ್ಚು ಮಾಡಬೇಕು ಎಂದು ಸೂಚಿಸಿದ್ದೇನೆ. ಕಮರ್ಷಿಯಲ್ ಟ್ಯಾಕ್ಸ್ ವಿಭಾಗದಲ್ಲಿ ಹೆಚ್ಚು ಆರ್ಥಿಕ ಸಂಗ್ರಹವಾಗಿದೆ. ನಮ್ಮ ಟಾರ್ಗೆಟ್ ಮೀರಿ ಸಂಗ್ರಹವಾಗಿದೆ. ಕಳೆದ ವರ್ಷ ಬಜೆಟ್ ನಲ್ಲಿ 67,100 ಕೋಟಿ ಸಾಲ ಮಾಡುತ್ತೇವೆ ಅಂದಿದ್ದು, 63100 ಕೋಟಿ ಮಾತ್ರ ಸಾಲ ಮಾಡಿದ್ದೇವೆ. ಸಾಲವನ್ನು ಕಡಿಮೆ ಮಾಡುತ್ತಿದ್ದೇವೆ.ಆರ್ಥಿಕ ಶಿಸ್ತು ತರುತ್ತಿದ್ದೇವೆ. ನಾನ್ ಟ್ಯಾಕ್ಸ್ ರೆವಿನ್ಯೂ‌ ಹೆಚ್ಚು ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದ ಜಿಎಸ್ ಟಿ‌ ಸಂಗ್ರಹ ಹಣ ಕೇಂದ್ರದಿಂದ ಬಂದಿದೆ ಎಂದರು.

ಜಾತಿ ಗಣತಿ ವರದಿ ಪೂರ್ಣ ಪ್ರಮಾಣದಲ್ಲಿ ಮಂಡನೆ ಆಗಿಲ್ಲ. ಈಗಾಗಿ ಹಿಂದುಳಿದ ವರ್ಗದ ಆಯೋಗಕ್ಕೆ ಈ ಬಗ್ಗೆ ಪರಿಶೀಲನೆ ನಡೆಸಲು ಹೇಳಿದ್ದೇವೆ ಎಂದರು.

ಸಂಘಟನೆ ಬಹಳ ಗಟ್ಟಿ; ಜೋಗ ಅಭಿವೃದ್ಧಿಗೆ ಕ್ರಮ

ಶಿವಮೊಗ್ಗ ಜಿಲ್ಲೆಯಲ್ಲಿ ಸಂಘಟನೆ ಬಹಳ ಗಟ್ಟಿಯಾಗಿದೆ. ಇನ್ನಷ್ಟು ಗಟ್ಟಿಗೊಳಿಸಲು ಸೂಚನೆ ಕೊಟ್ಟಿದ್ದೇವೆ. ಪ್ರಮುಖರ ಜೊತೆಗೆ ಚರ್ಚೆ ಮಾಡಿದ್ದೇವೆ. ಅಭಿವೃದ್ಧಿ ಕುರಿತ ವಿಚಾರದ ಬಗ್ಗೆ ಚರ್ಚೆ ಆಗಿದೆ. ಈಗ ನಡೆಯುತ್ತಿರುವ ಅಭಿವೃದ್ಧಿ ಚುರುಕುಗೊಳಿಸಬೇಕು ಎಂಬ ಚರ್ಚೆ ನಡೆದಿದೆ. ಅರಣ್ಯ ಕುರಿತಾದ ವಿಚಾರಗಳ ಬಗ್ಗೆ ಕಾನೂನಾತ್ಮಕವಾಗಿ ಸಲಹೆ ಪಡೆಯಬೇಕಿದೆ. ಮೇ ಮೊದಲ ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಸಭೆ ಕರೆಯುತ್ತಿದ್ದೇನೆ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ, ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡುತ್ತೇನೆ. ಜೋಗ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಬೇಕು ಎಂಬುದು ಹಲವರ ಕನಸಾಗಿದ್ದು, ಆ ಬಗ್ಗೆ ಸಹ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಗೆ ಅತಿ ಹೆಚ್ಚಿ‌ನ ಕೈಗಾರಿಕೆಗಳು ಬರುವ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.

ಬೆಂಗಳೂರು ಹೊರತುಪಡಿಸಿ ಐಟಿ ಡೆವಲಪ್ ಮೆಂಟ್ ಆಗಬೇಕು.ಶಿವಮೊಗ್ಗದಲ್ಲಿ ಸಹ ಐಟಿ ಅಭಿವೃದ್ಧಿ ಗೆ ಕ್ರಮ ವಹಿಸುತ್ತೇವೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗಬೇಕು. ಎಲ್ಲಾ ಕಡೆ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಅರಗ ಜ್ಞಾನೇಂದ್ರ, ಎಂಎಲ್ಸಿ ಅರುಣ್ ಭಾಗಿಯಾಗಿದ್ದರು.

ಟಾಪ್ ನ್ಯೂಸ್

Shabarimale

Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್‌ಲೈನ್‌ ನೋಂದಣಿ ಕಡ್ಡಾಯ

1-canda

Canada: ವೇಟರ್‌ ಕೆಲಸಕ್ಕೆ 3,000 ಭಾರತೀಯ ವಿದ್ಯಾರ್ಥಿಗಳ ಕ್ಯೂ!

Maldives Muizzu

Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ

water

Poison ಬೆರೆಸಿದ ಕಿಡಿ ಗೇಡಿಗಳು;ಸಾವಿರಾರು ಜನರ ಜೀವ ಉಳಿಸಿದ ವಾಟರ್‌ಮನ್‌!

imran-khan

Pakistan; ರಾಜಕೀಯ ಅಸ್ಥಿರತೆಯ ಬಿರುಗಾಳಿ: ಇಮ್ರಾನ್‌ ಪರ ಭಾರೀ ಪ್ರತಿಭಟನೆ,ಹಿಂಸೆ

police crime

Bhopal;1,800 ಕೋ.ರೂ. ಡ್ರಗ್ಸ್‌ ವಶ!; ದಿಲ್ಲಿಯಲ್ಲಿ ಕೊಕೇನ್‌ ಪತ್ತೆ ಬೆನ್ನಲ್ಲೇ ಘಟನೆ

HDK (3)

NDA ಅಭ್ಯರ್ಥಿ ಗೆಲ್ಲಿಸುವ ಮಾತು ಕೊಡಿ: ಎಚ್‌ಡಿಕೆ ಪರೋಕ್ಷ ಸುಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

water

Poison ಬೆರೆಸಿದ ಕಿಡಿ ಗೇಡಿಗಳು;ಸಾವಿರಾರು ಜನರ ಜೀವ ಉಳಿಸಿದ ವಾಟರ್‌ಮನ್‌!

HDK (3)

NDA ಅಭ್ಯರ್ಥಿ ಗೆಲ್ಲಿಸುವ ಮಾತು ಕೊಡಿ: ಎಚ್‌ಡಿಕೆ ಪರೋಕ್ಷ ಸುಳಿವು

1-sidd

Siddaramaiah; ಶೋಷಿತರ ಪರ ಇದ್ದಿದ್ದಕ್ಕೆ ಮಸಿ ಬಳಿಯುವ ಯತ್ನ

doctor

Doctor’s negligence?: ವೃಷಣ ಶಸ್ತ್ರಚಿಕಿತ್ಸೆ ವೇಳೆ ಬಾಲಕ ಸಾ*ವು

bk-Hari

Caste census ಕೂಗು ಮತ್ತಷ್ಟು ಜೋರು!: ಸರಕಾರ ಬಿದ್ದರೂ ಪರವಾಗಿಲ್ಲ, ಪ್ರಕಟಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shabarimale

Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್‌ಲೈನ್‌ ನೋಂದಣಿ ಕಡ್ಡಾಯ

1-canda

Canada: ವೇಟರ್‌ ಕೆಲಸಕ್ಕೆ 3,000 ಭಾರತೀಯ ವಿದ್ಯಾರ್ಥಿಗಳ ಕ್ಯೂ!

Maldives Muizzu

Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ

water

Poison ಬೆರೆಸಿದ ಕಿಡಿ ಗೇಡಿಗಳು;ಸಾವಿರಾರು ಜನರ ಜೀವ ಉಳಿಸಿದ ವಾಟರ್‌ಮನ್‌!

imran-khan

Pakistan; ರಾಜಕೀಯ ಅಸ್ಥಿರತೆಯ ಬಿರುಗಾಳಿ: ಇಮ್ರಾನ್‌ ಪರ ಭಾರೀ ಪ್ರತಿಭಟನೆ,ಹಿಂಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.