ಆನೇಕಲ್: ಪತ್ನಿ ಕೊಲೆಗೈದು ಪೊಲೀಸರಿಗೆ ಶರಣಾದ ಪತಿ
Team Udayavani, Apr 20, 2022, 3:24 PM IST
ಆನೇಕಲ್: ಪತ್ನಿಯನ್ನು ಚಾಕುನಿಂದ ಇರಿದು ಪತಿ ಕೊಲೆ ಮಾಡಿರುವ ಘಟನೆ ಆನೇಕಲ್ ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯ ರಸ್ತೆಯಲ್ಲಿನ ಮನೆಯೊಂದರಲ್ಲಿ ನಡೆದಿದೆ.
ಸರಸ್ವತಿ(35)ಕೊಲೆಯಾದ ಮಹಿಳೆ. ಮಲ್ಲೇಶ್ ಪತ್ನಿಯನ್ನು ಕೊಲೆ ಮಾಡಿದ ಪತಿ. ಸೋಮವಾರ ತಡರಾತ್ರಿ ಘಟನೆ ನಡೆದಿದ್ದು, ಮಪ್ಲರ್ ಮೂಲಕ ಕತ್ತು ಬಿಗಿದು, ಬಳಿಕ ಚಾಕುನಿಂದ ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿ ಬಳಿಕ ಆನೇಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿ ಮಲ್ಲೇಶ್ ಶರಣಾಗಿದ್ದಾನೆ.
ವೃತ್ತಿಯಲ್ಲಿ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದ ಮಲ್ಲೇಶ್ ಸಾಕಷ್ಟು ಹಣ ಸಂಪಾದನೆ ಮಾಡಿ ಪತ್ನಿ, ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದ. ನನ್ನನ್ನು ಯಾರೋ ಕೊಲೆ ಮಾಡುತ್ತಾರೆಂದು ಮನೆಯವರ ಬಳಿ ಹೇಳುತ್ತಿದ್ದ. ಇದೇ ವಿಚಾರವನ್ನು ಫೇಸ್ ಬುಕ್‌ನಲ್ಲಿಯೂ ಹಾಕಿದ ಕಾರಣದಿಂದ ಪೊಲೀಸರು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳಿಸಿದ್ದರು.
ಅಲ್ಲದೆ, ಆಗಾಗ್ಗೆ ಹೆಂಡತಿ ಸರಸ್ವತಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ ಮಲ್ಲೇಶ್, ಮನೆಯಲ್ಲಿ ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದ. ಈ ಎಲ್ಲ ವಿಚಾರಗಳಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಸೋಮವಾರ ರಾತ್ರಿ ಮನೆಗೆ ಮಧ್ಯವನ್ನು ತಂದು ಕುಡಿಯುತ್ತ ಕುಳಿತಿದ್ದಾಗ ಮಲ್ಲೇಶ್ ಹಾಗೂ ಪತ್ನಿ ಸರಸ್ವತಿ ನಡುವೆ ಜಗಳವಾಗಿದೆ. ಈ ವೇಳೆ ಮನೆಯಲ್ಲಿದ್ದ ಚಾಕುನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ಆನೇಕಲ್ ಪೊಲೀಸರು ದೂರು ದಾಖಲಿಸಿಕೊಂಡು ಯಾವ ವಿಚಾರಕ್ಕೆ ಕೊಲೆ ನಡೆದಿದೆ ಎನ್ನುವ ಬಗ್ಗೆ ತನಿಖೆಯನ್ನ ನಡೆಸುತ್ತಿದ್ದಾರೆ.
ಮನೆಯಿಂದ ಓಡಿ ಹೋಗಿದ್ದರು: ಸೋಮವಾರ ರಾತ್ರಿ ಮನೆಯಲ್ಲಿ ಮಲ್ಲೇಶ್ ಹಾಗೂ ಪತ್ನಿ ಸರಸ್ವತಿ ಹಾಗೂ ತಾಯಿ ಜೊತೆ ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಹಾಗೂ ಪತ್ನಿ ಮೇಲೆ ಹಲ್ಲೆ ನಡೆಸಿದ ಈ ಸಂದರ್ಭದಲ್ಲಿ ಎರಡು ಮಕ್ಕಳನ್ನು ಕರೆದುಕೊಂಡು ಮಲ್ಲೇಶ್ ತಾಯಿ ಮನೆಯಿಂದ ಪಕ್ಕದಲ್ಲೇ ಇದ್ದ ಶೆಡ್ ವೊಂದರಲ್ಲಿ ಹೋಗಿ ರಾತ್ರಿ ಉಳಿದುಕೊಂಡಿದ್ದರು.
ಅನುಮಾನವೇ ಕೊಲೆಗೆ ಕಾರಣ ಆಯ್ತಾ: ಮಲ್ಲೇಶ್ ಹಾಗೂ ಪತ್ನಿ ಸರಸ್ವತಿ ಅನೊನ್ಯವಾಗಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಮಲ್ಲೇಶ ಹಾಗೂ ಸರಸ್ವತಿ ನಡುವೆ ಕಿತ್ತಾಟ ಪ್ರಾರಂಭವಾಗಿತ್ತು. ಸರಸ್ವತಿ ಬಗ್ಗೆ ಅನುಮಾನ ಮೂಡಿದ್ದ ಕಾರಣ ಪದೇ ಪದೆ ಇದೇ ವಿಚಾರಕ್ಕೆ ಕಿತ್ತಾಟ ನಡೆದು ಕೊಲೆಯಾಗಿರುವ ಸಾಧ್ಯತೆ ಇದೆ.
ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ಮಲ್ಲೇಶ ಕಳೆದ ಒಂದು ವಾರದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಮನೆಯಲ್ಲಿ ಪದೇ ಪದೆ ಗಲಾಟೆ ಮಾಡುತ್ತಿದ್ದ. ನನ್ನನ್ನು ಯಾರೋ ಕೊಲೆ ಮಾಡಲು ಬರುತ್ತಾರೆ ಎಂದು ಹೇಳುತ್ತಿದ್ದ, ಎರಡು ದಿನದ ಹಿಂದೆ ಪೊಲೀಸ್ ಠಾಣೆಗೆ ಹೋದಾಗಲೂ ಕೂಡಲೇ ಈತನನ್ನು ಚಿಕಿತ್ಸೆ ನೀಡುವಂತೆ ಪೊಲೀಸರು ಕೂಡ ಸೂಚನೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.