ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ
ರೈತರಿಗೆ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಯಾವೊಬ್ಬ ರೈತರು ಕೃಷಿ ವಿಜ್ಞಾನಿಗಳನ್ನು ನೋಡಿಲ್ಲ
Team Udayavani, Apr 20, 2022, 5:55 PM IST
ಕುರುಗೋಡು: ಭತ್ತ ಖರೀದಿ ಕೇಂದ್ರ ಹಾಗೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಮಾಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ರೈತರು ಎಪಿಎಂಸಿ ಮುಂದುಗಡೆಯಿಂದ ಮುಖ್ಯ ವೃತ್ತದವರೆಗೆ ಬಂಡಿ, ಟ್ರ್ಯಾಕ್ಟರ್ ಮೂಲಕ ಆಗಮಿಸಿ ಮುಖ್ಯ ವೃತ್ತದಲ್ಲಿ ರಸ್ತೆಗೆ ಭತ್ತ ಸುರಿದು ಪ್ರತಿಭಟಿಸಿದರು.
ರಾಜ್ಯ ಸಮಿತಿ ಅಧ್ಯಕ್ಷರಾದ ಶರಣಪ್ಪ ಹಾಗೂ ಉಪಾಧ್ಯಕ್ಷ ಅಮರೇಶ ಮಾತನಾಡಿ, ರಾಜ್ಯ ಸರ್ಕಾರವು ಬೆಲೆ ನಿಗದಿ ಮಾಡುವಂತೆ ನಾವುಗಳು ಕೂಡಾ ಬೆಲೆ ನಿಗದಿ ಕಾರ್ಯ ಮಾಡುತ್ತೇವೆ. ಬ್ಯಾಂಕ್ ಕೊಟ್ಟ ಸಾಲಕ್ಕೆ ಬೆಳೆದ ಬೆಳೆಯನ್ನು ಬ್ಯಾಂಕ್ ಮುಂದೆ ಹಾಕುವ ಕೆಲಸ ಮಾಡುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಕೃಷಿ ವಿಜ್ಞಾನಿಗಳಿದ್ದು, ಈ ತಿಂಗಳಲ್ಲಿ ಬಿತ್ತನೆ ಮಾಡಬೇಕು, ಈ ಔಷ ಧಿಯನ್ನು ಸಿಂಪಡಿಸಬೇಕೆಂದು ಹೇಳುತ್ತಾರೆ ಹೊರತು ಯಾವುದೇ ರೀತಿಯಿಂದ ರೈತರಿಗೆ ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಯಾವೊಬ್ಬ ರೈತರು ಕೃಷಿ ವಿಜ್ಞಾನಿಗಳನ್ನು ನೋಡಿಲ್ಲ. ವಿಜ್ಞಾನಿಗಳು ಸಂಬಳ ತೆಗೆದುಕೊಂಡು ರೈತರಿಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಎಸಿ ರೂಂನಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಸಮಿತಿ ಅಧ್ಯಕ್ಷ ಕೆ. ಕಲ್ಗುಡೆಪ್ಪ ಮಾತನಾಡಿ, ಕುರುಗೋಡಿನಲ್ಲಿ ಆದಷ್ಟು ಬೇಗನೆ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕೆಂದರು.
ಪ್ರತಿಭಟನೆಯಲ್ಲಿ ನವಕರ್ನಾಟಕ ಯುವಶಕ್ತಿಯ ವಿರುಪಾಕ್ಷಿ, ನಾರಾಯಣಿ ಯಡಿಗಿರಿ, ಕುರುಗೋಡಿನ ಮುಖಂಡ ಚಾನಾಳ್ ಅಮರೇಶ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ರಾಮಚಂದ್ರ, ಹನುಮಂತಪ್ಪ ನಾಯಕ, ತಾಲೂಕು ಸಮಿತಿ ಉಪ ಗೌರವಾಧ್ಯಕ್ಷರಾದ ಪಿ.ಮರಿಬಸಪ್ಪ, ಉಪಾಧ್ಯಕ್ಷ ಎಸ್. ಗುರು, ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ್ ಗೌಡ, ಸಹಕಾರ್ಯದರ್ಶಿ ಎ. ಕರಿಬಸಪ್ಪ, ಖಜಾಂಚಿ ಎಂ. ಗಾದಿಲಿಂಗಪ್ಪ, ಕುರುಗೋಡು ತಾಲೂಕು ಯುವ ಘಟಕದ ಅಧ್ಯಕ್ಷ ಎಚ್. ಬಸವರಾಜ, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಎಸ್.ದೇವೇಂದ್ರಪ್ಪ, ವದ್ದಟ್ಟಿ ಗ್ರಾಮ ಘಟಕದ ಅಧ್ಯಕ್ಷ ಎಂ. ರಾಜಶೇಖರ, ಉಪಾಧ್ಯಕ್ಷರಾದ ಜಿ.ನಾಗರಾಜ, ಬಾದನಹಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಕುಮಾರಗೌಡ, ಉಪಾಧ್ಯಕ್ಷರಾದ ಚಿದಾನಂದ, ಕಾರ್ಯದರ್ಶಿ ಜೀರು ಮಲ್ಲಪ್ಪ, ಸಹಕಾರ್ಯದರ್ಶಿ ನಾಯಕರ ರುದ್ರಪ್ಪ, ಸದಸ್ಯರಾದ ಎಸ್.ಬಸವ, ಎ. ಚಿದಾನಂದ, ಗೂಳ್ಯದ ಶಿವರಾಜ, ವಿಘ್ನೇಶ್ವರ, ಸೋಮೇಶ, ಹೂಗಾರ್ ತಿಮ್ಮಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.