ಆಹಾರ ವಸ್ತುಗಳ ಬೆಲೆ ವರ್ಷದಲ್ಲಿ ದುಪ್ಪಟ್ಟು…ಬಡವರಿಗೆ ಬರೆ
ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಗ್ರಾಮೀಣ ಭಾಗದ ಬಡಜನತೆ
Team Udayavani, Apr 21, 2022, 1:10 PM IST
ದಿನದಿಂದ ದಿನಕ್ಕೆ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಪ್ರತಿಯೊಂದೂ ವಸ್ತುವಿನ ಅದರಲ್ಲೂ ಆಹಾರ ಸಾಮಗ್ರಿ ಮತ್ತು ಉತ್ಪನ್ನಗಳ ಬೆಲೆ ಏರುಗತಿಯಲ್ಲಿಯೇ ಸಾಗಿರುವುದರಿಂದ ಜನಸಮಾನ್ಯರ ಬದುಕು ದುಸ್ತರವಾಗಿದೆ. ದಿನಕೂಲಿ ಕಾರ್ಮಿಕರಿಗಂತೂ ಒಂದು ಹೊತ್ತು ಉಣ್ಣಲೂ ಕಷ್ಟ ಎನ್ನುವ ಮಟ್ಟಿಗೆ ಬೆಲೆಏರಿಕೆ ಅವರನ್ನು ಬಾಧಿಸತೊಡಗಿದೆ.
ಗ್ರಾಮೀಣರಿಗೂ ತಟ್ಟಿದ ಬೆಲೆಏರಿಕೆ ಬಿಸಿ
ಬೆಲೆಏರಿಕೆಯ ಬಿಸಿ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳ ಜನರಿಗೂ ತಟ್ಟ ತೊಡಗಿದೆ. ಅಂತಾ ರಾಷ್ಟ್ರೀಯ ಮಾರು ಕಟ್ಟೆ ಯಲ್ಲಿ ಕಚ್ಚಾ ತೈಲದ ಬೆಲೆ ಒಂದೇ ಸಮನೆ ಹೆಚ್ಚುತ್ತಿರುವುದ ರಿಂದಾಗಿ ಆಹಾರ ಸಾಮಗ್ರಿಯ ಸಹಿತ ಎಲ್ಲ ವಸ್ತು ಗಳ ಬೆಲೆ ಏರು ಹಾದಿ ಯಲ್ಲಿದ್ದು ಗ್ರಾಮೀಣ ಜನತೆಯ ಮೇಲೆ ಇದು ಭಾರೀ ಪರಿ ಣಾಮ ವನ್ನು ಬೀರಿದೆ. ತೈಲ ಬೆಲೆ ಹೆಚ್ಚಳದಿಂದ ಸಾಗಾಟ ವೆಚ್ಚ ಅಧಿಕ ವಾಗಿರುವುದರಿಂದ ಇವೆಲ್ಲದರ ಹೊರೆ ಯನ್ನು ನೇರವಾಗಿ ಗ್ರಾಹಕರ ಮೇಲೆ ಹೇರಲಾಗುತ್ತಿದೆ.
ಹಣದುಬ್ಬರಕ್ಕೆ ಗರಿಷ್ಠ ಕೊಡುಗೆ
ಇತ್ತೀಚಿನ ತಿಂಗಳುಗಳಲ್ಲಿ ಆಹಾರ ವಸ್ತು ಗಳು ಮತ್ತು ಉತ್ಪನ್ನಗಳ ಬೆಲೆ ಏರಿಕೆಯು ದೇಶದಲ್ಲಿನ ಒಟ್ಟಾರೆ ಹಣ ದುಬ್ಬರದ ಹೆಚ್ಚಳಕ್ಕೆ ತನ್ನ ಗರಿಷ್ಠ ಕೊಡುಗೆ ಯನ್ನು ನೀಡುತ್ತಿದೆ. ಆಹಾರ ಬೆಲೆ ಗಳಲ್ಲಿನ ಹೆಚ್ಚಳ ದಿಂದಾಗಿ ಒಟ್ಟಾರೆ ಹಣ ದುಬ್ಬರವು ಈ ವರ್ಷದ ಫೆಬ್ರ ವರಿ ಯಲ್ಲಿ ಎಂಟು ತಿಂಗಳ ಗರಿಷ್ಠ ಮಟ್ಟ ವನ್ನು ತಲು ಪಿದೆ. 2021ರ ಇದೇ ಅವಧಿಗೆ ಹೋಲಿ ಸಿದರೆ 2022 ರ ಫೆಬ್ರ ವರಿ ಯಲ್ಲಿ ಆಹಾರದ ವಸ್ತು ಗಳ ಬೆಲೆ ಗಳು ಶೇ. 6.1ರಷ್ಟು ಏರಿಕೆಯಾಗಿದೆ.
ಯಾವ್ಯಾವುದಕ್ಕೆ ಹೆಚ್ಚಳ
ಖಾದ್ಯ ತೈಲ, ಕೊಬ್ಬು, ತರಕಾರಿ, ಮಾಂಸ ಮತ್ತು ಮೀನಿನ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ಖಾದ್ಯ ತೈಲ ಮತ್ತು ಕೊಬ್ಬಿನ ಬೆಲೆ ಶೇ.18.79ರಷ್ಟು ಹೆಚ್ಚಾಗಿದೆ. ಇದು ಆಹಾರ ಹಣದುಬ್ಬರ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಹೆಚ್ಚಲು ಪ್ರಮುಖ ಕಾರಣವಾಗಿದೆ. ಇನ್ನು ತರಕಾರಿಗಳ ಬೆಲೆ ಶೇ.11.64 ಹಾಗೂ ಮಾಂಸ ಮತ್ತು ಮೀನು ಬೆಲೆ ಶೇ.9.63ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಚಿಲ್ಲರೆ ಹಣದುಬ್ಬರವನ್ನು ಪ್ರತಿನಿಧಿಸುವ ಸಿಪಿಐ ಫೆಬ್ರವರಿಯಲ್ಲಿ ಶೇ. 5.85ರಿಂದ ಮಾರ್ಚ್ 2022 ರಲ್ಲಿ ಶೇ. 6.95 ಕ್ಕೆ ಏರಿದೆ. ಅಲ್ಲದೆ ಇಂಧನ ಮತ್ತು ವಿದ್ಯುತ್ ದರದಲ್ಲಿ ಶೇ. 7.52ರಷ್ಟು, ಬಟ್ಟೆ ಮತ್ತು ಪಾದರಕ್ಷೆ ಶೇ.9.40, ವಸತಿ ಶೇ. 3.38, ಮತ್ತು ಪಾನ್, ತಂಬಾಕು ಮತ್ತು ಅಮಲು ಪದಾರ್ಥಗಳ ಬೆಲೆ ಶೇ. 2.98ರಷ್ಟು ಹೆಚ್ಚಳವಾಗಿದೆ.
ಬಡವರಿಗೆ ಬರೆ
ಆರ್ಥಿಕ ತಜ್ಞರ ಪ್ರಕಾರ ಆಹಾರ ಬೆಲೆಗಳಲ್ಲಿ ಪ್ರತೀ ಶೇಕಡಾ ವಾರು ಹೆಚ್ಚಳಕ್ಕೆ ಒಂದು ಕೋಟಿ ಜನರನ್ನು ತೀವ್ರ ಬಡತನಕ್ಕೆ ತಳ್ಳಲ್ಪಡುತ್ತದೆ. ಆಹಾರ ಹಣ ದುಬ್ಬರವು ಶ್ರೀಮಂತರ ಖರೀದಿ ಸಾಮರ್ಥ್ಯ ವನ್ನು ಕುಗ್ಗಿಸು ತ್ತದೆ ಯಾದರೂ ಅವರ ದೈನಂದಿನ ಜೀವನದ ಮೇಲೆ ಅಷ್ಟೊಂದು ಗಂಭೀರ ಪರಿಣಾಮ ಬೀರಲಾರದು. ಆದರೆ ಬಡವರು ಈ ಭಾರೀ ಹೊಡೆತವನ್ನು ತಾಳಿಕೊಳ್ಳಲು ಸಾಧ್ಯ ವಿಲ್ಲ. ಇದರ ಪರಿಣಾಮ ಸಹಜವಾಗಿಯೇ ಅಪೌಷ್ಟಿಕತೆ ಹೆಚ್ಚಾಗಲಿದ್ದು ಮಕ್ಕಳು ಇದರ ಗಂಭೀರ ಪರಿ ಣಾಮ ಗಳನ್ನು ಎದುರಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಗೊಳ್ಳುತ್ತದೆ ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯ.
ಆಹಾರ ಸಾಮಗ್ರಿ ಬೆಲೆ ಶೇ.100 ಹೆಚ್ಚಳ
ಕಳೆದೊಂದು ವರ್ಷದ ಅವಧಿಯಲ್ಲಿನ ಮಾರುಕಟ್ಟೆಯ ಅಂಕಿಅಂಶಗಳನ್ನು ಗಮನಿಸಿದಾಗ ಆಹಾರ ಸಾಮಗ್ರಿ ಮತ್ತು ಉತ್ಪನ್ನಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿದೆ. ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ ಬಿಡುಗಡೆ ಮಾಡಿದ ಅಖೀಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಪ್ರಕಾರ ಆಹಾರ ಹಣದುಬ್ಬರ ದರವು 2021ರ ಮಾರ್ಚ್‌ನಿಂದ ಈ ವರ್ಷದ ಮಾರ್ಚ್ ನಡುವೆ ಶೇ.100 ಹೆಚ್ಚಳ ದಾಖಲಿಸಿದೆ.
2021ರ ಮಾರ್ಚ್‌ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಆಹಾರ ಹಣದುಬ್ಬರವು ಶೇ.3.94ರಷ್ಟಾಗಿದ್ದರೆ, ಇದು 2022ರ ಮಾರ್ಚ್ ವೇಳೆಗೆ ಶೇ.8.04ಕ್ಕೆ ಏರಿಕೆಯಾಗಿದೆ. ಹಾಗೆಯೇ ಇದೇ ಅವಧಿಯಲ್ಲಿ ಗ್ರಾಮೀಣ ಭಾರತದ ಸಿಪಿಐ ಕೂಡ ಶೇ.4.61ರಿಂದ ಶೇ.7.66ಕ್ಕೆ ಜಿಗಿದಿದೆ.
ಇದೇ ವೇಳೆ ಈ ವರ್ಷದ ಫೆಬ್ರವರಿಗೆ ಹೋಲಿಸಿದಲ್ಲಿ ಮಾರ್ಚ್‌ನಲ್ಲಿ ಗ್ರಾಮೀಣ ಭಾಗದ ಆಹಾರ ಹಣದುಬ್ಬರದಲ್ಲಿ ಭಾರೀ ಹೆಚ್ಚಳ ದಾಖಲಾಗಿದ್ದು ಶೇ.5.81ರಿಂದ ಶೇ.8.04ಕ್ಕೆ ಹೆಚ್ಚಾಗಿದೆ. ಒಟ್ಟಾರೆ ದೇಶದಲ್ಲಿ ಆಹಾರ ಹಣದುಬ್ಬರವು(ಗ್ರಾಮೀಣ ಮತ್ತು ನಗರ ಸೇರಿದಂತೆ) 2021ರ ಮಾರ್ಚ್‌ನಲ್ಲಿ ಶೇ.4.87 ಆಗಿದ್ದರೆ 2022ರ ಮಾರ್ಚ್‌ನಲ್ಲಿ ಇದು ಶೇ. 7.68 ಕ್ಕೆ ಏರಿಕೆಯಾಗಿದೆ. ಅಷ್ಟು ಮಾತ್ರವಲ್ಲದೆ ಈ ವರ್ಷದ ಫೆಬ್ರವರಿಯಲ್ಲಿ ಆಹಾರ ಹಣದುಬ್ಬರವು ಶೇ.5.85ರಷ್ಟಾಗಿದ್ದರೆ ಮಾರ್ಚ್ ವೇಳೆಗೆ ಇದು ಶೇ.6.95 ತಲುಪಿದೆ. ಇದು ಕಳೆದ 16 ತಿಂಗಳುಗಳಲ್ಲಿಯೇ ಇದು ಅತ್ಯಧಿಕವಾದುದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.