ಹಗಲಲ್ಲೂ ರೈತರಿಗೆ 3 ಫೇಸ್ ವಿದ್ಯುತ್; ಈ ವರ್ಷ 937 ಮೆ.ವ್ಯಾ. ವಿದ್ಯುತ್ ಉತ್ಪಾದನೆ
Team Udayavani, Apr 21, 2022, 7:10 AM IST
ಬೆಂಗಳೂರು: ರೈತರ ಬಹು ದಿನಗಳ ಬೇಡಿಕೆ ಈಡೇರಿಸಲು ಸರಕಾರ ಮುಂದಾಗಿದ್ದು, ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ 3 ಫೇಸ್ ವಿದ್ಯುತ್ ನೀಡಲು “ಪಿಎಂ ಕುಸುಮ್ -ಸಿ’ ಯೋಜನೆಗೆ ಶೀಘ್ರವೇ ಚಾಲನೆ ನೀಡಲು ತೀರ್ಮಾ ನಿಸಿದೆ. ಬೆಸ್ಕಾಂ, ಹೆಸ್ಕಾಂ ಮತ್ತು ಚೆಸ್ಕಾಂ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸಲು ಇಂಧನ ಇಲಾಖೆ ಮುಂದಾಗಿದ್ದು, ಮೊದಲ ಹಂತದಲ್ಲಿ 937 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ನಿರ್ಧರಿಸಿದೆ.
ಸಾಂಪ್ರದಾಯಿಕವಾಗಿ ವಿದ್ಯುತ್ ಉತ್ಪಾ ದಿಸಿ ರೈತರಿಗೆ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಶ್ರಮಿಸುತ್ತಿದ್ದರೂ, ಬೇಸಗೆಯಲ್ಲಿ ರೈತರಿಗೆ ನಿರಂತರ 3 ಫೇಸ್ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ.
ಈಗ ಪಿಎಂ ಕುಸುಮ್-ಸಿ ಯೋಜನೆ ಅಡಿಯಲ್ಲಿ ಕನಿಷ್ಠ 5ರಿಂದ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಒಂದು ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಕೇಂದ್ರ ಸರಕಾರದ ಎಂಎನ್‌ಆರ್‌ಇಯಿಂದ ಪ್ರತೀ ಮೆ.ವ್ಯಾ.ವಿದ್ಯುತ್ ಉತ್ಪಾದನೆಗೆ 3.5 ಕೋಟಿ ರೂ. ದೊರೆಯಲಿದ್ದು, ಅದರಲ್ಲಿ ಶೇ.30 ಅಂದರೆ, 1.05 ಕೋಟಿ ರೂ. ಸಹಾಯಧನವಾಗಿ ಸಿಗಲಿದೆ.
ಪಿಎಂ- ಕುಸುಮ್ ಸಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 2021-22ರಲ್ಲಿ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ 937 ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಬೇಕಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 650 ಮೆ.ವ್ಯಾ., ಹೆಸ್ಕಾಂ ವ್ಯಾಪ್ತಿಯಲ್ಲಿ 243 ಮೆ.ವ್ಯಾ. ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ 44 ಮೆ.ವ್ಯಾ. ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ.
2.5 ಲಕ್ಷ ಪಂಪ್‌ಸೆಟ್‌ಗಳಿಗೆ ವಿದ್ಯುತ್
ಕುಸುಮ್ ಸಿ ಯೋಜನೆ ಮೂಲಕ ಉತ್ಪಾದನೆಯಾದ ವಿದ್ಯುತ್ತನ್ನು ಒಟ್ಟು 2.5 ಲಕ್ಷ ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲು ಇಲಾಖೆ ಯೋಜನೆ ರೂಪಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 1.75 ಲಕ್ಷ ಪಂಪ್‌ಸೆಟ್‌ಗಳು, ಹೆಸ್ಕಾಂ ವ್ಯಾಪ್ತಿಯಲ್ಲಿ 65 ಸಾವಿರ ಪಂಪ್‌ಸೆಟ್‌ಗಳು ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ 10 ಸಾವಿರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.
ಪಿಪಿಎ ಮಾದರಿಯಲ್ಲಿ ಸರಬರಾಜು
ಈ ಯೋಜನೆಗೆ ವಿದ್ಯುತ್ ಉತ್ಪಾದನೆ ಮಾಡುವ ಕಂಪೆನಿಗಳ ಜತೆಗೆ ಒಪ್ಪಂದ ಮಾಡಿಕೊಂಡು 9 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಲಾಗುವುದು. ಈ ಸಂಸ್ಥೆಗಳು ಉತ್ಪಾದಿಸಿದ ವಿದ್ಯುತ್‌ಗೆ ಕೆಇಆರ್‌ಸಿ ಮೂಲಕ ದರ ನಿಗದಿಪಡಿಸಲು ತೀರ್ಮಾನಿಸಲಾಗಿದೆ.
ಫೀಡರ್ ಮೂಲಕ ಸರಬರಾಜು
ಯೋಜನೆಯಡಿ ಉತ್ಪಾದನೆ ಯಾಗುವ ಸೋಲಾರ್ ವಿದ್ಯುತ್ತನ್ನು ಈಗಾಗಲೇ ಇರುವ ಫೀಡರ್ (ವಿದ್ಯುತ್ ಸರಬರಾಜು ಮಾರ್ಗ) ಮೂಲಕ ನೇರವಾಗಿ ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲಾಗುವುದು. ಈ ಯೋಜನೆ ಅಡಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ವ್ಯಾಪ್ತಿಯಲ್ಲಿ ಬರುವ ರೈತರು ಹಗಲು ಹೊತ್ತಿನಲ್ಲಿಯೇ ನೇರವಾಗಿ 3 ಫೇಸ್ ವಿದ್ಯುತ್ ಪಡೆದುಕೊಳ್ಳಬಹುದು. ಸೋಲಾರ್ ವಿದ್ಯುತ್ ಪಡೆಯಲು ರೈತರು ಸರಕಾರಕೆೆR ಯಾವುದೇ ಶುಲ್ಕ ಕಟ್ಟುವ ಅಗತ್ಯವಿಲ್ಲ.
ಎಲ್ಲಿ ಎಷ್ಟು ಉತ್ಪಾದನೆ
ಬೆಸ್ಕಾಂ – 650 ಮೆ.ವ್ಯಾ. 1.75 ಲಕ್ಷ ಪಂಪ್‌ಸೆಟ್
ಹೆಸ್ಕಾಂ- 243 ಮೆ.ವ್ಯಾ. 65000 ಪಂಪ್‌ಸೆಟ್
ಸೆಸ್ಕ್ – 44 ಮೆ.ವ್ಯಾ. 10000 ಪಂಪ್‌ಸೆಟ್
ಲೋಡ್‌ಶೆಡ್ಡಿಂಗ್ ಇಲ್ಲ
ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಪ್ರಸ್ತಾವನೆ ಇಲ್ಲ ಎಂದು ಇಂಧನ ಸಚಿವ ಸುನಿಲ್‌ಕುಮಾರ್ ತಿಳಿಸಿದ್ದಾರೆ. ಬೇಸಗೆ ಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂದು ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ರಾಜ್ಯ ದಲ್ಲಿ ಪ್ರತಿನಿತ್ಯ 7000 ಮೆಗಾ ವ್ಯಾಟ್ ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆ ಆಗುತ್ತಿದ್ದು, ವಿದ್ಯುತ್ ಕೊರತೆ ಅಥವಾ ಲೋಡ್ ಶೆಡ್ಡಿಂಗ್ ಉದ್ಭವಿಸದು ಎಂದರು.
ಪಿಎಂ ಕುಸುಮ್ ಸಿ ಯೋಜನೆ ಜಾರಿಗೆ ನಿಯಮಗಳನ್ನು ರೂಪಿಸಲಾಗುತ್ತಿದೆ. ಸೋಲಾರ್ ಮೂಲಕ ಈ ವರ್ಷ ಸುಮಾರು 1000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ ಇರಿಸಲಾಗಿದೆ. ಇದರಿಂದ ರೈತರಿಗೆ ಹಗಲು ಹೊತ್ತಿನಲ್ಲಿಯೇ 3 ಫೇಸ್ ವಿದ್ಯುತ್ ದೊರೆಯಲಿದೆ. ಇಲಾಖೆಗೂ ವಿದ್ಯುತ್ ಭಾರ ಕಡಿಮೆಯಾಗುತ್ತದೆ.
– ವಿ. ಸುನಿಲ್‌ಕುಮಾರ್, ಇಂಧನ ಸಚಿವ
- ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.