ದನದ ಜತೆ ಕೋಳಿ, ನಾಯಿಮರಿ ಕದ್ದೊಯ್ದ ದುರುಳರು!; ಕಾರ್ಕಳದಲ್ಲಿ ನಡೆದ ಘಟನೆ
Team Udayavani, Apr 21, 2022, 9:13 AM IST
ಕಾರ್ಕಳ: ನಗರದ ಹೊರವಲಯದ ಕರಿಯ ಕಲ್ಲು ಪಡ್ಡಾಯಿಬೆಟ್ಟು ನಿವಾಸಿ ಮೋಹಿನಿ ಮೂಲ್ಯ ಅವರ ಹಟ್ಟಿಯಿಂದ ಎ. 19ರ ರಾತ್ರಿ ಗೋ ಕಳ್ಳತನವಾಗಿದೆ. ಇತ್ತೀಚೆಗಷ್ಟೇ 25 ಸಾವಿರ ರೂ. ನೀಡಿ ಹಸು-ಕರು ಖರೀದಿಸಿ ತಂದಿದ್ದರು. ರಾತ್ರಿ ವೇಳೆ ಹಟ್ಟಿಗೆ ನುಗ್ಗಿದ ಕಳ್ಳರು ಕರುವನ್ನು ಬಿಟ್ಟು ದನವನ್ನು ಕದ್ದೊಯ್ದಿದ್ದಾರೆ.
ಮನೆಯ ಪಕ್ಕದಲ್ಲಿದ್ದ ಕೋಳಿ ಗೂಡಿನಿಂದ 6 ಕೋಳಿ, 2 ನಾಯಿ ಮರಿಗಳನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ ಎಂದು ಮನೆಯವರು ಮಾಹಿತಿ ನೀಡಿದ್ದು, ಇದು ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಮಾಂಸಕ್ಕಾಗಿ ಗೋವುಗಳನ್ನು ಕದ್ದೊಯ್ಯುವ ಪರಿಪಾಠ ಇದುವರೆಗೂ ನಡೆದಿತ್ತು. ಗೋಕಳ್ಳತನಕ್ಕೆ ಬಂದವರು ಈ ಬಾರಿ ಕೋಳಿ, ನಾಯಿ ಮರಿಗಳನ್ನು ಕದ್ದಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:ಫ್ರಾನ್ಸ್‌ನಲ್ಲೂ ಹಿಜಾಬ್, ಹಲಾಲ್ ನಿಷೇಧದ ಕೂಗು!
ಗುಜರಿ ವ್ಯಾಪಾರಿಗಳ ಮೇಲೆ ಸಂಶಯ: ಹಗಲಿನಲ್ಲಿ ಗುಜರಿ ಇನ್ನಿತರ ಸೊತ್ತುಗಳ ಮಾರಾಟ ನೆಪದಲ್ಲಿ ಬಂದವರೇ ಈ ಕೃತ್ಯ ನಡೆಸಿರುವುದು ಎನ್ನುವ ಸಂದೇಹವನ್ನು ಮೋಹಿನಿಯವರು ವ್ಯಕ್ತಪಡಿಸಿದ್ದಾರೆ. ಅವರ ಸಂದೇಹದ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆ ಬೆನ್ನಲ್ಲೇ ಹಿಂದೂ ಸಂಘಟನೆಗಳು ನೀಡಿದ ಮಾಹಿತಿಯಂತೆ ಮೂಡುಬಿದಿರೆ ಬಳಿ ದ್ವಿಚಕ್ರ ವಾಹನ ಸಮೇತ ಓರ್ವ ಗುಜರಿ ವ್ಯಾಪಾರಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.