ರಾವೂರಲ್ಲಿ ಕುಡಿಯುವ ನೀರೂ ಕೊಚ್ಚೆಯಲ್ಲಿ!


Team Udayavani, Apr 21, 2022, 9:46 AM IST

1water

ವಾಡಿ: ತಾಂತ್ರಿಕವಾಗಿ ದೇಶ ಎಷ್ಟೇ ಮುಂದುವರಿದರೂ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಅಕ್ಷರಶಃ ನರಳುತ್ತಿವೆ. ಶೌಚಾಲಯ, ಕುಡಿಯುವ ನೀರು, ಬೀದಿ ದೀಪಗಳಂತ ಸಣ್ಣ ಸಮಸ್ಯೆಗಳು ಈಡೇರದೇ ಜನತೆ ಗೋಳಾಡುವಂತ ಪರಿಸ್ಥಿತಿಯಿದೆ.

ಕಸ ವಿಲೇವಾರಿ ಸಮರ್ಪಕವಾಗಿರದೇ ಕುಡಿಯುವ ನೀರಿನ ಸಾರ್ವಜನಿಕ ತಾಣಗಳು ಶುಚಿತ್ವ ಕಾಣದೇ ರೋಗಪೀಡಿತ ಪ್ರದೇಶಗಳಾಗಿ ಗ್ರಾಮೀಣ ಜನರ ಜೀವಹಿಂಡುತ್ತಿವೆ. ಇದೀಗ ನೂತನ ಶಹಾಬಾದ ತಾಲೂಕಿಗೆ ಸೇರ್ಪಡೆಯಾಗಿರುವ ಚಿತ್ತಾಪುರ ವಿಧಾನಸಭೆ ಮತಕ್ಷೇತ್ರದ ರಾವೂರ ಗ್ರಾಮದಲ್ಲಿ ಅನಾಗರಿಕ ಬಯಲು ಶೌಚ ಪದ್ಧತಿ ಈಗಲೂ ಜೀವಂತವಿದೆ.

ಗ್ರಾಪಂ ಕೇಂದ್ರ ಸ್ಥಾನವಾದ ರಾವೂರಿನ ಈ ತೆರೆದ ಶೌಚಾಲಯಗಳು ಹಗಲು, ರಾತ್ರಿ ದುರ್ಗಂಧ ಹರಡುತ್ತ ಸ್ವತ್ಛ ಭಾರತ ಯೋಜನೆಗೆ ಸವಾಲೊಡ್ಡಿ ಬಳಕೆಯಾಗುತ್ತಿವೆ. ಗ್ರಾಮದ ಕನಕನಗರ ಮತ್ತು ದಲಿತರ ಬಡಾವಣೆ ಮಾರ್ಗದಲ್ಲಿ ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾದ ನಾಲ್ಕು ಕಾಂಪೌಂಡ್‌ ಗೋಡೆಗಳ ತೆರೆದ ಶೌಚಾಲಯಗಳನ್ನೇ ಮಹಿಳೆಯರು ಈಗಲೂ ಬಳಕೆ ಮಾಡುತ್ತಿದ್ದಾರೆ.

ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ವಿಶೇಷ ಅನುದಾನ ಮೀಸಲಿಟ್ಟರೂ ಸದ್ಭಳಕೆಯಾಗುತ್ತಿಲ್ಲ ಎಂಬುದಕ್ಕೆ ರಾವೂರು ಉತ್ತಮ ಉದಾಹರಣೆಯಾಗಿದೆ. ಸಮಾಜ ಸಾಕಷ್ಟು ಪರಿವರ್ತನೆ ಕಂಡಿದೆಯಾದರೂ ಮೂಲಭೂತ ಸೌಕರ್ಯ ವಿಷಯದಲ್ಲಿ ಇನ್ನೂ ನೆಲಕಚ್ಚಿದೆ.

ವೃದ್ಧರು, ಹಿರಿಯರು, ಯುವತಿಯರು ಈ ತೆರೆದ ಶೌಚಾಲಯ ಬಳಕೆ ಮಾಡಲು ಮುಜುಗರ ಅನುಭವಿಸುತ್ತಿದ್ದಾರೆ. ಪರ್ಯಾಯ ವ್ಯವಸ್ಥೆಯಿಲ್ಲದೇ ಬಹಿರ್ದೆಸೆ ಪದ್ಧತಿ ಜೀವಂತವಿಟ್ಟುಕೊಂಡಿದ್ದಾರೆ. ಕುಡಿಯುವ ನೀರಿನ ಸಾರ್ವಜನಿಕ ಸ್ಥಳಗಳು ಕೊಚ್ಚೆಯಿಂದ ಕೂಡಿವೆ. ಜಲಮೂಲಗಳ ತಾಣಗಳು ಶುಚಿಯಾಗಿಡಬೇಕಾದ ಗ್ರಾಪಂ ಆಡಳಿತ ಕರ್ತವ್ಯ ಪ್ರಜ್ಞೆ ಮರೆತು ಜನರಿಗೆ ರೋಗ ಸರಬರಾಜು ಮಾಡುತ್ತಿದೆ.

ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ನೌಕರರೇ ಹೆಚ್ಚಿರುವ ಪ್ರಜ್ಞಾವಂತರ ಊರು ರಾವೂರಿನಲ್ಲಿ ಮಹಿಳೆಯರಿಗಾಗಿ ಉತ್ತಮ ಸಾರ್ವಜನಿಕ ಶೌಚಾಲಯ ಸೌಲಭ್ಯ ಒದಗಿಸದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ನಾವು ಸಣ್ಣವರಿದ್ದಾಗಿನಿಂದಲೂ ಇದೇ ನಾಲ್ಕು ಗೋಡೆಯ ಶೌಚಾಲಯ ಬಳಸುತ್ತಿದ್ದೇವೆ. ಹುಡುಗಿಯರು ನಾಚಿಕೆಪಡುತ್ತಾರೆ. ಪಂಚಾಯಿತಿಗೆ ಕೇಳಿದರೆ ಮನೆ-ಮನೆಗೆ ಶೌಚಾಲಯ ಕಟ್ಟಿಸಿಕೊಳ್ಳಲು ಹಣ ಕೊಡ್ತಿದ್ದೀವಿ. ಸಾರ್ವಜನಿಕ ಶೌಚಾಲಯ ಕಟ್ಟಲು ಅವಕಾಶ ಇಲ್ಲ ಅಂತಿದ್ದಾರೆ. ಮನೆಯಲ್ಲಿ ಜಾಗ ಇಲ್ಲದ ಬಡವರು ಏನು ಮಾಡಬೇಕು? ಹಳೆಯದ್ದನ್ನು ಕೆಡವಿ ಹೊಸ ಶೌಚಾಲಯದ ವ್ಯವಸ್ಥೆ ಮಾಡಬೇಕು. -ಮುತ್ತಮ್ಮ ಪೂಜಾರಿ, ಹಿರಿಯ ಮಹಿಳೆ, ಕನಕನಗರ

ಮನೆಗೊಂದು ಶೌಚಾಲಯ ನಿರ್ಮಾಣಕ್ಕೆ ನಾವು ಮೊದಲ ಆಧ್ಯತೆ ನೀಡುತ್ತಿದ್ದೇವೆ. ಆವಶ್ಯಕತೆ ಇದ್ದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲು ಪಿಡಿಒ ತೀರ್ಮಾನ ಕೈಗೊಳ್ಳುತ್ತಾರೆ. ಅಲ್ಲದೇ ಶಾಸಕ ಪ್ರಿಯಾಂಕ್‌ ಖರ್ಗೆ ತಾಲೂಕಿನ ಪ್ರತಿ ಗ್ರಾಪಂ ಕೇಂದ್ರಸ್ಥಾನಗಳಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ತಲಾ 25 ಲಕ್ಷ ರೂ. ಅನುದಾನ ಒದಗಿಸಿದ್ದಾರೆ. ರಾವೂರ ಗ್ರಾಮಕ್ಕೂ ಸೌಕರ್ಯ ಒದಗಲಿದೆ. -ನೀಲಗಂಗಾ ಬಬಲಾದ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಿತ್ತಾಪುರ

-ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.