ಮುಳ್ಳಿಕಟ್ಟೆ: ಇನ್ನೂ ತೆರೆಯದ ಟ್ರಕ್‌ ಬೇ ವಿಶ್ರಾಂತಿ ಕೊಠಡಿ-ಸ್ನಾನಗೃಹ

ಪೂರ್ಣಗೊಂಡು ವರ್ಷ ಕಳೆದರೂ ಸಾರ್ವಜನಿಕರಿಗಿಲ್ಲ ಪ್ರಯೋಜನ

Team Udayavani, Apr 21, 2022, 11:23 AM IST

wash-room

ಮುಳ್ಳಿಕಟ್ಟೆ: ಬೈಂದೂರು- ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯಲ್ಲಿ ಲಾರಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರಿಗಾಗಿ ನಿರ್ಮಿಸಿದ ಟ್ರಕ್‌ ಬೇ ವಿಶ್ರಾಂತಿ ಕೊಠಡಿ, ಶೌಚಾಲಯದ ಕಾರ್ಯ ಪೂರ್ಣಗೊಂಡು ಒಂದು ವರ್ಷ ಕಳೆದಿದೆ. ಇನ್ನೂ ಇದರ ಪ್ರಯೋಜನ ಲಾರಿ ಚಾಲಕ, ನಿರ್ವಾಹಕರಿಗೆ ಆಗಲಿ ಅಥವಾ ಸಾರ್ವಜನಿಕರಿಗೆ ಆಗಲಿ ಸಿಕ್ಕಿಲ್ಲ. ಈಗಲೂ ಮುಚ್ಚಿದ ಸ್ಥಿತಿಯಲ್ಲಿಯೇ ಇದೆ.

ಮುಳ್ಳಿಕಟ್ಟೆ – ತ್ರಾಸಿ ನಡುವಿನ ಮೊವಾಡಿ ಕ್ರಾಸ್‌ ಬಳಿಯಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆಯವರು ಘನ ವಾಹನ ಸವಾರರು, ಸರಕು ಸಾಗಾಟದ ಲಾರಿ ಹಾಗೂ ಇನ್ನಿತರ ವಾಹನಗಳ ಚಾಲಕರು, ನಿರ್ವಾಹಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಟ್ರಕ್‌ ಬೇ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ. ಇಲ್ಲಿಯೇ ಒಂದು ಬದಿ ವಿಶ್ರಾಂತಿ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.

ಎದ್ದು ಹೋದ ಟೈಲ್ಸ್‌

ಇದೇ ಕಟ್ಟಡದ ಒಂದು ಬದಿಯಲ್ಲಿ ಸಣ್ಣ ವಿಶ್ರಾಂತಿ ಗೃಹವಿದೆ. ಸರಿಯಾದ ನಿರ್ವಹಣೆಯಿಲ್ಲದ ಕಾರಣ ಅದಕ್ಕೆ ಹಾಕಿರುವ ಟೈಲ್ಸ್‌ ಒಂದೇ ವರ್ಷದಲ್ಲಿ ಅಲ್ಲಲ್ಲಿ ಎದ್ದು ಹೋಗಿದೆ.

ಪ್ರಯೋಜನವಾಗಲಿ

ದೂರ-ದೂರದ ಊರುಗಳಿಂದ ಸರಕು ಸಾಗಾಟ ಮಾಡುವ ಲಾರಿ ಚಾಲಕ, ನಿರ್ವಾಹಕರ ಅನುಕೂಲಕ್ಕಾಗಿ ಮಾಡಲಾದ ಈ ವ್ಯವಸ್ಥೆಯು ಈವರೆಗೆ ಪ್ರಯೋಜನವಾಗದೇ ನಿಷ್ಪ್ರಯೋಜಕವಾಗಿದೆ. ಇನ್ನಾದರೂ ಅದನ್ನು ಕೂಡಲೇ ಸರಿಪಡಿಸಿ, ಲಾರಿ ಚಾಲಕ, ನಿರ್ವಾಹಕರು, ಇತರ ವಾಹನ ಚಾಲಕರಿಗೆ ಪ್ರಯೋಜನವಾಗುವಂತಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಬೀಚ್‌ ಬಳಿಯೇ ನಿಲುಗಡೆ

ತ್ರಾಸಿ, ಮರವಂತೆ ಕಡಲ ತೀರದಲ್ಲಿ ಲಾರಿ, ಟ್ರಕ್‌ಗಳನ್ನು ನಿಲ್ಲಿಸಿ, ಇಲ್ಲಿಗೆ ಬರುವ ಪ್ರವಾಸಿಗರಿಗೆ ತೊಂದರೆ ಕೊಡಬಾರದು ಎನ್ನುವ ನಿಟ್ಟಿನಲ್ಲಿ ಲಾರಿ, ಟ್ರಕ್‌ ಚಾಲಕರು, ನಿರ್ವಾಹಕರಿಗೆ ಅನುಕೂಲವಾಗುವಂತೆ ಮುಳ್ಳಿಕಟ್ಟೆಯಲ್ಲಿ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆಗೆ ಇಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ನಾನಗೃಹದ ಕೊಠಡಿಯನ್ನು ನಿರ್ಮಿಸುವಂತೆ ಸೂಚಿಸಲಾಗಿತ್ತು. ಅದರಂತೆ ಕಳೆದ ವರ್ಷದ ಜೂನ್‌ನಲ್ಲಿ ಇದರ ಕಾಮಗಾರಿ ಪೂರ್ಣಗೊಂಡು, ಒಂದಷ್ಟು ದಿನ ತೆರೆದುಕೊಂಡಿತ್ತು. ಆದರೆ ಅದಕ್ಕೆ ಶೌಚಾಲಯ, ಸ್ನಾನಗೃಹಕ್ಕೆ ಬಳಸಲು ನೀರಿನ ಸಂಪರ್ಕವನ್ನೇ ಇನ್ನೂ ಕಲ್ಪಿಸದ ಕಾರಣ, ಗಬ್ಬೆದ್ದು, ದುರ್ನಾತ ಬೀರುವಂತಾಗಿತ್ತು. ಇದಾದ 15 ದಿನಗಳಲ್ಲೇ ಮುಚ್ಚಲಾಗಿತ್ತು. ಅಲ್ಲಿಂದ ಈವರೆಗೆ ಬಾಗಿಲು ತೆರೆದೇ ಇಲ್ಲ. ಇದರಿಂದಾಗಿ ಸರಕು ಲಾರಿಗಳನ್ನು ಚಾಲಕರು ಮರವಂತೆ ಬೀಚ್‌ ಬಳಿಯೇ ಸಾಲುಗಟ್ಟಿ ನಿಲ್ಲಿಸುತ್ತಿದ್ದಾರೆ. ಇದರಿಂದ ಪ್ರವಾಸಿಗರಿಗೂ ಬೀಚ್‌ ವೀಕ್ಷಣೆಗೆ ಅಡ್ಡಿಯಾಗುತ್ತಿದೆ.

ತಿಳಿದು, ಕ್ರಮಕೈಗೊಳ್ಳುವೆ

ಮುಳ್ಳಿಕಟ್ಟೆಯ ಟ್ರಕ್‌ ಬೇ ಶೌಚಾಲಯ, ಸ್ನಾನಗೃಹ ತೆರೆಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಈ ಬಗ್ಗೆ ಆದಷ್ಟು ಬೇಗ ತಿಳಿದುಕೊಂಡು, ಅಗತ್ಯ ಕ್ರಮಕೈಗೊಳ್ಳಲಾಗುವುದು. – ನಿಂಗೇಗೌಡ, ಪಿಡಿ, ಹೆದ್ದಾರಿ ಪ್ರಾಧಿಕಾರ ಮಂಗಳೂರು

ಪ್ರಶಾಂತ್ ಪಾದೆ

ಟಾಪ್ ನ್ಯೂಸ್

Mohua Moitra

NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ

Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Manipal: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Manipal: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mohua Moitra

NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್

National Highway ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಟ್ರ್ಯಾಕ್ ಅಳವಡಿಕೆ

National Highway ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಟ್ರ್ಯಾಕ್ ಅಳವಡಿಕೆ

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

Leopard Attack; ದಾಳಿ ಮಾಡಿದ್ದ ಚಿರತೆಯನ್ನೇ ಕೊಂದ ಗ್ರಾಮಸ್ಥರು

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.