ಸಿದ್ದರಾಮಯ್ಯ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನ ಮಾಡಿದ್ದರು : ಹೆಚ್ ಡಿಕೆ
ಬೆಂಗಳೂರಿನ ಅಕ್ರಮ ಕಟ್ಟಡಗಳ ಮಾಹಿತಿ ನೀಡುತ್ತೇನೆ, ಬುಲ್ಡೋಜರ್ ಬಳಸಲಿ
Team Udayavani, Apr 21, 2022, 12:54 PM IST
ಮೈಸೂರು: ‘ಈಶ್ಚರಪ್ಪ ಬದಲು ಕುಮಾರಸ್ವಾಮಿಯನ್ನು ಬಂಧಿಸಬೇಕಾ’ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಮಹಾನ್ ನಾಯಕ ಸಿದ್ದರಾಮಯ್ಯ 12 ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣದ ಮೂಲಕ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳುಹಿಸಲು ಪ್ರಯತ್ನ ಮಾಡಿದ್ದರು. ನಾನು ಚಪಲಕ್ಕೋ ಅಥವಾ ಯಾರಿಗೋ ತೊಂದರೆ ಕೊಡಲು ಮಾತನಾಡುವುದಿಲ್ಲ’ ಎಂದು ‘ಸುಳ್ಳಿನ ರಾಮಯ್ಯ’ ಹೇಳಿಕೆ ಪುನರುಚ್ಚರಿಸಿದರು.
‘ನಾನು ಕೆ. ಎಸ್. ಈಶ್ವರಪ್ಪ ಲಾಯರ್ ಅಲ್ಲ. ಅವರ ಬಗ್ಗೆ ಯಾವ ಸಾಫ್ಟ್ ಕಾರ್ನರ್ ಸಹ ಇಲ್ಲ. ನಾನು ದಾಖಲೆಗಳ ಬಗ್ಗೆ ಮಾತನಾಡಿದ್ದೇನೆ. ಸಂತೋಷ್ ಅವರು ವಾಟ್ಸ್‌ಅಪ್ ಮೆಸೇಜ್ ಕಳುಹಿಸಿದ್ದಾರೆ. ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಈಶ್ವರಪ್ಪ ತಪ್ಪು ಮಾಡಿದ್ದರೆ ಅವರೇ ಕಾರಣಕರ್ತರಾಗಿದ್ದರೆ ಬಂಧಿಸಿ. ಈಶ್ವರಪ್ಪ ನನ್ನಿಂದ ಹಣ ಕೇಳಿಲ್ಲ ಅಂತಾ ಸಂತೋಷ್ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಅಂತಾ ಹೇಳಿದ್ದೇನೆ’ ಎಂದರು.
ನನ್ನ ಭಯ
‘ಸಿದ್ದರಾಮಯ್ಯಗೆ ನನ್ನ ಭಯ ಕಾಡುತ್ತಿದೆ. ಅದಕ್ಕೆ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಬಿಜೆಪಿ ಭಯ ಇಲ್ಲ. ಎಲ್ಲಿ ನಾನು ಅಧಿಕಾರಕ್ಕೆ ಬಂದು ಬಿಡುತ್ತೇನೆ ಅನ್ನೋ ಭಯ ಇದೆ. ಇದು 2006ರಿಂದಲೂ ಸಿದ್ದರಾಮಯ್ಯಗೆ ಭಯ ಶುರುವಾಗಿದೆ. ಎರಡು ಪಕ್ಷಗಳು 150 ಸೀಟ್ ಗೆದ್ದ ಮೇಲೆ ಮೈತ್ರಿ ಹೇಗೆ ಸಾಧ್ಯ. ಇವರಿಗೆ ಬಹುಮತ ಬಂದ ಮೇಲೆ ನನ್ನ ಯಾವೂರು ದಾಸಯ್ಯ ಕೇಳುತ್ತಾನೆ?’ ಎಂದರು.
ಕಾಂಗ್ರೆಸ್ ನವರಿಂದ ಕಾಂಪಿಟೇಷನ್‌ನಲ್ಲಿ ಹಣದ ನೆರವು ನೀಡಲಾಗುತ್ತಿದೆ. ಮೃತ ಸಂತೋಷ್ ಕುಟುಂಬಕ್ಕೆ ಸಹಾಯಕ್ಕೆ ಅಭಿನಂದನೆ. ಸಿದ್ದರಾಮಯ್ಯ ಎರಡು ದಿನ ವಿಧಾನಸಭೆಯಲ್ಲಿ ಮಾತನಾಡುತ್ತಾರೆ. ಸಾವಿಗೆ ಈಶ್ವರಪ್ಪ ನೇರ ಕಾರಣ ಅನ್ನೋ ದಾಖಲೆ ಕೊಟ್ಟು ಒತ್ತಾಯಿಸಿ. ಕಲ್ಲಪ್ಪ ಹಂಡಿಭಾಗ್ ಮೃತಪಟ್ಟಾಗ ನಾನು ಆತನ ಪರ ಹೋರಾಟ ಮಾಡಿದೆ. ಆಗ ನಾನು ರಾಜಕೀಯ ಮಾಡಲಿಲ್ಲ. ಅದು ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಅಲ್ಲವಾ.? ಕಲ್ಲಪ್ಪ ಹಂಡಿಭಾಗ ಸಾಯಲು ಬಿಜೆಪಿ ಕಾರಣ. ಡಿವೈಎಸ್‌ಪಿ ಆತ್ಮಹತ್ಯೆ ಆದಾಗ ಸಿದ್ದರಾಮಯ್ಯ ಅರೆಸ್ಟ್ ಮಾಡಿ ಅಂದೆವ? ಎಲ್ಲದರಲ್ಲೂ ರಾಜಕಾರಣ ಮಾಡಬಾರದು. ದ್ವೇಷವಿದ್ದರೆ ಅದು ಬೇರೆ. ಒಂದು ವೇಳೆ ಜೈಲಿಗೆ ಹೋಗಿ ಬಂದ ಮೇಲೆ ನಿರಪರಾಧಿ ಅಂದರೆ ಏನು ಮಾಡುವುದು. ದಾಖಲೆ ಇದ್ದರೆ ಜೈಲಿಗೆ ಕಳುಹಿಸಲಿ ಎಂದರು.
ಕಾಂಗ್ರೆಸ್‌ನವರದ್ದು ವೈಯಕ್ತಿಕವಾದ ಹೋರಾಟ.ಸರ್ಕಾರ ಐದು ನಿಮಿಷದಲ್ಲಿ ಇದನ್ನು ಕ್ಲಿಯರ್ ಮಾಡಬಹುದು. ಪಾರದರ್ಶಕತೆ ಇದ್ದರೆ ಎಲ್ಲವನ್ನು ಜನರ ಮುಂದೆ ಇಡಬಹುದು ಎಂದರು.
ನನ್ನ ಹೋರಾಟದಿಂದ ಯಡಿಯೂರಪ್ಪ ಬಿಜೆಪಿ ಬಿಟ್ಟರು
ನಿಮ್ಮ ನಾಲಿಗೆಯಲ್ಲಿ ಮೂಳೆ ಇದೆಯಾ? 10 ನಿಮಿಷದಲ್ಲಿ ಸತ್ಯವನ್ನು ಜನರ ಮುಂದೆ ಇಡಬಹುದು. ಬಿಜೆಪಿ ಸರ್ಕಾರಕ್ಕೆ ನಾನೇನು ಸರ್ಟಿಫಿಕೇಟ್ ಕೊಟ್ಟಿದ್ದೀನಾ? ನಾನು ದಾಖಲೆ ಇಟ್ಟುಕೊಂಡು ಮಾತನಾಡುವವನು. ನನ್ನ ಹೋರಾಟದಿಂದ ಯಡಿಯೂರಪ್ಪ ಬಿಜೆಪಿ ಬಿಟ್ಟರು. ಅದರ ಲಾಭದಿಂದ ಅವರು ಸಂತೆ ಭಾಷಣ ಮಾಡಿ ಸಿದ್ದರಾಮಯ್ಯ ಸಿಎಂ ಆದರು. ಈ ಬಾರಿಯೂ ಅದೇ ರೀತಿ ಮಾಡಬೇಕಾ? ಎಂದರು.
ನೈಸ್ ಕಂಪನಿಗೆ 100 ಕೋಟಿ
ಬೆಂಗಳೂರಿನ ಅಕ್ರಮ ಕಟ್ಟಡಗಳ ಮಾಹಿತಿ ನೀಡುತ್ತೇನೆ. ಬಿಜೆಪಿಯ ನಾಯಕರು, ಮೋದಿ ಅವರು ಅದನ್ನು ತೆರವುಗೊಳಿಸಲು ಸಿದ್ದರಿದ್ದೀರಾ? ಮೈಸೂರಿನಲ್ಲೂ ಮಾಹಿತಿ ಕೊಡುತ್ತೇನೆ. ನೈಸ್‌ಗೆ ರೆಡ್ ಕಾರ್ಪೆಟ್ ಹಾಕಿ ಭೂಮಿ ನೀಡಿದ್ದೀರಾ. ಸರ್ಕಾರದ ಭೂಮಿಗೆ ನೈಸ್ ಕಂಪನಿಗೆ 100 ಕೋಟಿ ಕೊಟ್ಟು ಖರೀದಿ ಮಾಡಲಾಗಿದೆ ಎಂದು ನೇರ ಆರೋಪ ಮಾಡಿದರು.
ಗಲಭೆ ಮಾಡಿದವರ ಆಸ್ತಿ ಪಡೆಯಲು ಬುಲ್ಡೋಜರ್ ಬಳಕೆ ಮಾಡಬೇಡಿ. ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ.ಬುಲ್ಡೋಜರ್ ಬಳಕೆ ಮಾಡಿದರೆ ಯಾರಿಗೂ ಲಾಭ ಇಲ್ಲ. ಸಂಪತ್ತು ಲೂಟಿ ಮಾಡಿರುವವರ ಬೆಂಕಿ ಹಚ್ಚುವವರ ವಿರುದ್ದ ಕಾರ್ಯಾಚರಣೆ ಮಾಡಿ ಎಂದರು.
ಬಿಜೆಪಿ ಸರ್ಕಾರವೇ ಅಸಮರ್ಥ ಸರ್ಕಾರ. ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯವಾಗದ ಸರ್ಕಾರ. ಸಿಎಂ ಬರಿ ಬಾಯಿ ಮಾತಿನಲ್ಲಿ ಹೇಳುತ್ತಾರೆ. ದೆಹಲಿ ಆರ್ ಎಸ್ ಎಸ್ ಮುಖಂಡರಿಗೆ ತೋರಿಸುವುದಲ್ಲ.ನೀವು ಯಾರನ್ನೋ ಮೆಚ್ಚಿಸಲು ಸಿಎಂ ಅಲ್ಲ. ಜನರನ್ನು ಮೆಚ್ಚಿಸಲು ನೀವು ಅಧಿಕಾರ ಮಾಡಿ ಎಂದರು.
ಆಜಾನ್ ಡೆಡ್‌ಲೈನ್ ವಿಚಾರ,ಅವರ ನಿರ್ದೇಶನದಂತೆ ನೀವು ಅಧಿಕಾರ ಮಾಡುತ್ತಿದ್ದೀರಾ. ನನಗೆ ಈ ಬಗ್ಗೆ ಮಾತನಾಡಬೇಡಿ ಅಂತ ಹೇಳಿದ್ದಾರೆ. ಆದರೆ ನಾನು ಈ ವಿಚಾರವಾಗಿ ಮಾತನಾಡಿಯೇ ತೀರುತ್ತೇನೆ. ನನಗೆ ಚುನಾವಣೆ ಮುಖ್ಯವಲ್ಲ ಜನರ ಹಿತ ಮುಖ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.