![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 21, 2022, 1:04 PM IST
ಪಡುಬಿದ್ರಿ: ಸುಮಾರು ಇನ್ನೂರು ವರ್ಷ ಬಾಳಿದ ಪಡುಬಿದ್ರಿ ಹಳೆ ಎಂಬಿಸಿ ಸಂಪರ್ಕ ರಸ್ತೆ ಸಂಧಿಸುವ ಸ್ಥಳದಲ್ಲಿದ್ದ ಬೃಹತ್ ಮಾವಿನ ಮರ ಮಂಗಳವಾರ ಸುಮಾರು 3 ಗಂಟೆಗಳ ಕಾರ್ಯಾಚರಣೆ ಬಳಿಕ ನೆಲಕ್ಕೆ ಉರುಳಿತು. ಇದುವರೆಗೆ ನೆರಳನ್ನೀಯುತ್ತಿದ್ದ ವೃಕ್ಷವಿನ್ನು ಅಭಿವೃದ್ಧಿಯ ಹೆಸರಲ್ಲಿ ಇಲ್ಲವಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಹೊಂದಿಕೊಂಡು ಪಡುಬಿದ್ರಿ ಕೆಳಗಿನ ಪೇಟೆ ಸಂಪರ್ಕಿಸುವ ಸ್ಥಳದಲ್ಲಿ ನಿರ್ಮಾಣವಾಗಬೇಕಿರುವ ಸರ್ವಿಸ್ ರಸ್ತೆ ಕಾಮಗಾರಿಗೆ ಈ ಮರ ಅಡ್ಡಿಯಾಗಿತ್ತೆಂದು ಅಧಿಕಾರಿಗಳು ಹೇಳಿದ್ದಾರೆ. ಮಾವಿನ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಸುಪರ್ದಿಯಲ್ಲಿ, ಮೆಸ್ಕಾಂ, ದೂರಸಂಪರ್ಕ, ಪೊಲೀಸ್, ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿ ಸಂಯುಕ್ತವಾಗಿ ಕಾರ್ಯಾಚರಿಸಿದವು.
ಮರ ತೆರವು ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೂ, ಇದೇ ಪ್ರದೇಶದಲ್ಲಿ ಮೆಸ್ಕಾಂ ಟ್ರಾನ್ಸ್ ಫಾರ್ಮರ್ ಕೂಡ ಇತ್ತು. ಇದರ ಸ್ಥಳಾಂತರವೂ ಆಗಬೇಕಿದ್ದುದರಿಂದ ಒಟ್ಟಾರೆಯಾಗಿ ಮರದ ‘ಮಾರಣ’ವು ವಿಳಂಬವಾಗಿತ್ತು. ಇದರ ಪರಿಣಾಮವಾಗಿ ಸರ್ವಿಸ್ ರಸ್ತೆ, ಚರಂಡಿ ನಿರ್ಮಾಣವಾಗದೆ ಉಳಿದಿತ್ತು. ಸಾರ್ವಜನಿಕರೂ ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಕೊನೆಗೂ ಶತಮಾನದಾಚೆಗಿನ ಮಾವಿನ ಮರ ತೆರವುಗೊಂಡಿದೆ. ಜನತೆಗಾಗಿ ಅಭಿವೃದ್ಧಿಯ ಹೆಸರಲ್ಲಿ ಸರ್ವಿಸ್ ರಸ್ತೆ ನಿರ್ಮಾಣವೂ ಮೇ ಅಂತ್ಯದೊಳಗಾಗಿ ಆಗಲಿದೆ ಎಂದು ನವಯುಗ ಕಂಪೆನಿಯು ಉಸುರಿದೆ. ಇತ್ತೀಚಿಗೆ ಸಿಎಂ ಉಡುಪಿಗೆ ಬಂದಾಗಲೂ ರಸ್ತೆ ಕಾಮಗಾರಿ ನಡೆಸುವಾಗ ಮರವೊಂದು ಉರುಳಿತ್ತು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.