ಕಾಲ್ ರೆಕಾರ್ಡಿಂಗ್ಗಿಲ್ಲ ಅವಕಾಶ! ; ಗೂಗಲ್ ಸಂಸ್ಥೆಯಿಂದ ಹೊಸ ಕ್ರಮ
Team Udayavani, Apr 21, 2022, 10:00 PM IST
ನವದೆಹಲಿ: ನೀವು ಆ್ಯಂಡ್ರಾಯ್ಡ ಫೋನ್ ಬಳಕೆದಾರರಾಗಿದ್ದು, ಕಾಲ್ ರೆಕಾರ್ಡಿಂಗ್ ಮಾಡಿಕೊಳ್ಳಲೆಂದು ಗೂಗಲ್ ಪ್ಲೇ ಸ್ಟೋರ್ನಿಂದ ಯಾವುದಾದರೂ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದರೆ, ಇನ್ನು ಮುಂದೆ ಅದಕ್ಕೆ ಅವಕಾಶವಿರುವುದಿಲ್ಲ.
ಗೂಗಲ್ ಸಂಸ್ಥೆಯು ಪ್ಲೇ ಸ್ಟೋರ್ನಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಿದ್ದು, ಅದರಲ್ಲಿ ಕಾಲ್ ರೆಕಾರ್ಡಿಂಗ್ ಆ್ಯಪ್ಗಳನ್ನು ತೆಗೆದುಹಾಕುವುದೂ ಒಂದಾಗಿದೆ.
ಕ್ಸಿಯೋಮಿ, ಸ್ಯಾಮ್ಸಂಗ್ನಂತಹ ಕೆಲವು ಸಂಸ್ಥೆಗಳು ಮೊಬೈಲ್ನಲ್ಲೇ ರೆಕಾರ್ಡಿಂಗ್ ಆಯ್ಕೆಯನ್ನು ಕೊಟ್ಟಿವೆ. ಆದರೆ ಕೆಲವು ಸಂಸ್ಥೆಯ ಆ್ಯಂಡ್ರಾಯ್ಡ ಫೋನ್ಗಳಲ್ಲಿ ರೆಕಾರ್ಡಿಂಗ್ ಆಯ್ಕೆಯಿಲ್ಲ. ಅಂತವರು ಪ್ಲೇ ಸ್ಟೋರ್ನಿಂದ ಕಾಲ್ ರೆಕಾರ್ಡಿಂಗ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ.
ಇದೀಗ ಅಂತಹ ಎಲ್ಲ ಥರ್ಡ್ ಪಾರ್ಟಿ ಆ್ಯಪ್ಗ್ಳನ್ನು ತೆಗೆದುಹಾಕಲು ಗೂಗಲ್ ಮುಂದಾಗಿದೆ. ಮೇ 11ರಿಂದ ಈ ರೀತಿಯ ಯಾವುದೇ ರೆಕಾರ್ಡಿಂಗ್ ಆ್ಯಪ್ಗ್ಳು ಕೆಲಸ ಮಾಡುವುದಿಲ್ಲ ಎಂದು ಗೂಗಲ್ ಸಂಸ್ಥೆಯು “ಗೂಗಲ್ ಪ್ಲೇ ಪಾಲಿಸಿ ಅಪ್ಡೇಟ್ಸ್’ ವೆಬಿನಾರ್ನಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.