ಕೈಗೆ ಬೇಕು ಪುನರ್‌ಜನ್ಮ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರಸ್ತಾವ
Team Udayavani, Apr 22, 2022, 8:30 AM IST
ಹೊಸದಿಲ್ಲಿ: ಕೇಂದ್ರದಲ್ಲಿ ಮತ್ತೂಮ್ಮೆ ಅಧಿಕಾರ ಗದ್ದುಗೆಯೇರುವ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಖ್ಯಾತ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್, ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಅವಲೋಕಿಸಿ, ತಾವು ಕಂಡುಕೊಂಡ ಅಂಶಗಳನ್ನು ಕ್ರೋಢೀಕರಿಸಿ ಈ ಸಲಹೆಗಳನ್ನು ಅವರು ನೀಡಿದ್ದಾರೆ.
ಸಪ್ತ ಸಲಹೆಗಳೇನು? :
- ಯುಪಿಎ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಯಲಿ. ಅತ್ತ ರಾಹುಲ್ ಗಾಂಧಿಯವರೂ ಸಂಸತ್ತಿನಲ್ಲಿ ಕಾಂಗ್ರೆಸ್ಸನ್ನು ಮುನ್ನಡೆಸಲಿ. ಆದರೆ, ಕಾಂಗ್ರೆಸ್‌ನ ಪಕ್ಷ ಒಬ್ಬ ಶಕ್ತಿಶಾಲಿ ಅಧ್ಯಕ್ಷನನ್ನು ಆರಿಸಲೇಬೇಕು ಹಾಗೂ ಆತ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯಾಗಿರಬೇಕು.
- ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸದಸ್ಯತ್ವದ ಅಭಿಯಾನ ಆಗಬೇಕು. ಈ ಮೂಲಕ ಒಂದು ಕೋಟಿ ಕಾರ್ಯಕರ್ತರು ಸೃಷ್ಟಿಯಾಗಬೇಕು.
- ಆಧುನಿಕ ಕಾಲಘಟ್ಟದ ಡಿಜಿಟಲ್ ಯೋಧರ ಪಡೆಯೊಂದು ನಿರ್ಮಾಣವಾಗಬೇಕು.
4.ಹೊಸದಾಗಿ ರೂಪುಗೊಳ್ಳುವ ಡಿಜಿಟಲ್ ಪಡೆ, ಪಕ್ಷದ ಸಂವಹನಕ್ಕಾಗಿಯೇ ನೇಮಕ ವಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಯೊಬ್ಬರ ಅವಗಾಹನೆಯಲ್ಲಿ ಕೆಲಸ ಮಾಡಬೇಕು.
- “ಯುಪಿಎ- 3′ ಸರಕಾರ ರಚನೆಗೆ ಯೋಜನೆ ರೂಪಿಸುವುದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ ಪ್ಲಸ್ ರೀತಿಯ ಮೈತ್ರಿ ಆಗಲಿ.
- ಮುಂದಿನ ಚುನಾವಣೆ ಹೊತ್ತಿಗೆ 30 ಕೋಟಿ ಮತದಾರರನ್ನು ಗಾಂಧಿ ಮತ್ತು ಗೋಡ್ಸೆ ವಿಚಾರದಡಿ ಮುಟ್ಟಬೇಕು.
7.ಸಾಂಪ್ರದಾಯಿಕ ಸಂವಹನ ತಂತ್ರಗಾರಿಕೆಯನ್ನು ಆಮೂಲಾಗ್ರವಾಗಿ ಬದಲಾಯಿಸಿ ನವ ಮಾಧ್ಯಮ ಆಧಾರಿತ ಸಂವಹನ ಕಾರ್ಯತಂತ್ರಗಳನ್ನು ಅಳವಡಿಸಿ ಅನುಷ್ಠಾನಗೊಳಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.