![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 22, 2022, 8:25 AM IST
ಸುರತ್ಕಲ್: ನಗರ ವ್ಯಾಪ್ತಿಯಲ್ಲಿ 5ರಿಂದ 10 ಕಿ.ಮೀ. ಮತ್ತು ಹೊರಗೆ 60 ಕಿ.ಮೀ. ಅಂತರದೊಳಗೆ ಇರುವ ಟೋಲ್ ಕೇಂದ್ರಗಳು ಕಾನೂನುಬಾಹಿರ ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಈಗ ಹೆದ್ದಾರಿ ಇಲಾಖೆಯು ಇಂತಹ 181 ಟೋಲ್ ಕೇಂದ್ರಗಳ ಪಟ್ಟಿ ಸಿದ್ಧಪಡಿಸಿ ಸಚಿವಾಲಯಕ್ಕೆ ರವಾನಿಸಿದೆ.
ಕರ್ನಾಟಕದಲ್ಲೇ ಒಟ್ಟು 19 ಟೋಲ್ ಕೇಂದ್ರಗಳನ್ನು ಹೆದ್ದಾರಿ ಟೋಲ್ ನಿಯಮ 8ನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ. ಇದರಲ್ಲಿ 10 ಟೋಲ್ ಕೇಂದ್ರಗಳು ಸರಿಸುಮಾರು 50ರಿಂದ 59 ಕಿ.ಮೀ. ಅಂತರ ದಲ್ಲಿ ನಿರ್ಮಾಣವಾಗಿದ್ದರೆ, ಉಳಿದ 9 ಟೋಲ್ ಗೇಟ್‌ಗಳು ಕನಿಷ್ಠ 11ರಿಂದ 35 ಕಿ.ಮೀ. ಅಂತರದಲ್ಲಿ ನಿರ್ಮಾಣವಾಗಿವೆ.
ಇದರಲ್ಲಿ ಸುರತ್ಕಲ್ ಹೆಜಮಾಡಿ ಟೋಲ್ ಗೇಟ್ 11 ಕಿ.ಮೀ., ಕುಲುಮೆ ಪಾಳ್ಯ-ಬೆಂಗಳೂರು 12 ಕಿ.ಮೀ., ತಲಪಾಡಿ -ಸುರತ್ಕಲ್ 32 ಕಿ.ಮೀ., ಹೆಜಮಾಡಿ -ಗುಂಡ್ಮಿ 49 ಕಿ.ಮೀ., ಹೊಳೆಗದ್ದೆ-ಬೆಳಕೇರಿ 49 ಕಿ.ಮೀ., ಸಾಸ್ತಾನ- ಶಿರೂರು ನಡುವೆ 59 ಕಿ.ಮೀ. ನಡುವೆ ನಿರ್ಮಾಣವಾಗಿದೆ.
ಇದನ್ನೂ ಓದಿ:ಕೆಲಸ ಬಿಟ್ಟ 6 ತಿಂಗಳು ಪ್ರತಿಸ್ಪರ್ಧಿ ಕಂಪೆನಿ ಸೇರಲು ಇನ್ಫೋಸಿಸ್ ನಿರ್ಬಂಧ
ತಲಪಾಡಿ – ಹೆಜಮಾಡಿ ನಡುವೆ ಕೇವಲ 43 ಕಿ.ಮೀ. ಅಂತರವಿದೆ. ನವಯುಗ ಸಂಸ್ಥೆಯು ಹೆದ್ದಾರಿ 66ರಲ್ಲಿ ನಿರ್ಮಾಣ ಮಾಡಿರುವ ಟೋಲ್‌ಗೇಟ್‌ಗಳು ಹೆಚ್ಚಿನ ಅಂತರ ಕಾಯ್ದುಕೊಂಡಿಲ್ಲ. ನಿಯಮ ಉಲ್ಲಂಘಿಸಿದ ಅತೀ ಹೆಚ್ಚು, 23 ಟೋಲ್ ಕೇಂದ್ರಗಳು ಉತ್ತರ ಪ್ರದೇಶದಲ್ಲಿದ್ದರೆ, ಕರ್ನಾಟಕ ಅನಂತರದ ಸ್ಥಾನದಲ್ಲಿದೆ.
You seem to have an Ad Blocker on.
To continue reading, please turn it off or whitelist Udayavani.