ಪಿಎಸ್‌ಐ ನೇಮಕಾತಿ: ಸರ್ಕಾರ ನಿಷ್ಪಕ್ಷಪಾತವಾಗಿದೆ: ಆರಗ ಜ್ಞಾನೇಂದ್ರ
Team Udayavani, Apr 22, 2022, 10:45 PM IST
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರದಲ್ಲಿ ಸರ್ಕಾರದ ವೈಫಲ್ಯ ಇಲ್ಲ. ಪ್ರಕರಣದ ಮಾಹಿತಿ ಬರುತ್ತಿದ್ದಂತೆ ಸಿಐಡಿ ತನಿಖೆಗೆ ವಹಿಸಿ ಸರ್ಕಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣದಲ್ಲಿ ಯಾರೇ ಇದ್ದರೂ ಬಿಡುವುದಿಲ್ಲ. ಎಲ್ಲರನ್ನೂ ಬಂಧಿಸಲಾಗುವುದು. ಪ್ರಕರಣದ ಆರೋಪಿ ಕೋರ್ಟ್ ಗೆ ಹೋಗಿದ್ರು, ಜಾಮೀನು ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಸರ್ಕಾರದಲ್ಲಿ ಅವರಿಗೊಂದು ಇವರಿಗೊಂದು ಇಲ್ಲ, ನಮ್ಮ ಆಡಳಿತದಲ್ಲಿ ಕಾನೂನು ಎಲ್ಲಾರಿಗೂ ಒಂದೇ ಎಂದು ಹೇಳಿದರು.
ಹುಬ್ಬಳ್ಳಿ ಗಲಭೆಗೂ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಸಾಮ್ಯತೆ ಇದೆ. ಪೋಲಿಸರು ಸ್ವಲ್ಪ ವಿಕ್ ಆಗಿದ್ದರೆ ಹುಬ್ಬಳ್ಳಿ ಹತ್ತಿ ಉರಿಯುತ್ತಿತ್ತು. ಸಾಕಷ್ಟು ವಿಚಾರಣೆ ಆಗಬೇಕು. ಇದರ ಹಿಂದೆ ಇರುವ ದೇಶದ್ರೋಹಿ ಸಂಘಟನೆಗಳು ಹೊರಬರಬೇಕು ಎಂದು ತಿಳಿಸಿದರು.
ಇದನ್ನೂ ಓದಿ:ಡಿಕೆಶಿ ನಿಂದನೆ ಪ್ರಕರಣ: ಸುಳ್ಯ ನ್ಯಾಯಾಲಯ ವಿಧಿಸಿದ ಜೈಲು ತೀರ್ಪಿಗೆ ತಡೆ
ತಪ್ಪಿತಸ್ಥರು ಅಲ್ಲದೇ ಇರುವವರನ್ನು ಬಂಧನ ಮಾಡುವ ಅವಶ್ಯಕತೆ ಇಲ್ಲ.ನಮ್ಮ ಪೋಲೀಸರು ಸರಿ ದಾರಿಯಲ್ಲಿ ಹೋಗುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ. ಅಬ್ಬಯ್ಯ ಅವ್ರ ಓಟ್ ಬ್ಯಾಂಕ್ ರಾಜಕಾರಣಕ್ಕಿಂತ ರಾಜ್ಯದ ನೆಮ್ಮದಿ ಮುಖ್ಯ ಎಂದು ಹೇಳಿದರು.
ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಗೃಹ ಸಚಿವರಿಗೆ ಮಾಹಿತಿ ಕೊರತೆಯಿದೆ. ಅವರು ಗೃಹ ಸಚಿವರಾಗಲು ನಾಲಾಯಕ್. ನಮ್ಮ ಜಿಲ್ಲಾಧ್ಯಕ್ಷರಿಗೆ ಪೊಲೀಸ್ ಆಯುಕ್ತರೇ ಕರೆ ಮಾಡಿ ಕರೆಸಿದ್ದಾರೆ. ನಿಮ್ಮ ಸಮಾಜದವರನ್ನು ಶಾಂತಿಯಿಂದ ಇರುವಂತೆ ಮನವಿ ಮಾಡಿ ಎಂದು ಕರೆದಿದ್ದಾರೆ. ಗದ್ದಲ ಗಲಾಟೆಯಿಂದ ರಾಜಕೀಯ ಲಾಭ ಪಡೆಯುವುದು ಬಿಜೆಪಿ ತಂತ್ರ. ಎಸ್‌ಡಿಪಿಐ, ಪಿಎಫ್ಐ ನಿಷೇಧಿಸಿ ಎಂದು ನಾವು ಒತ್ತಾಯಿಸಿದರೂ ಬಿಜೆಪಿ ಕ್ರಮ ಕೈಗೊಳ್ಳುತ್ತಿಲ್ಲ.
-ಅಬ್ಬಯ್ಯ ಪ್ರಸಾದ್, ಕಾಂಗ್ರೆಸ್ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.