ಓಷಿಯನ್ ಸ್ಪಾರ್ಕಲ್ ಕಂಪನಿ ಈಗ ಅದಾನಿ ಪಾಲು!
Team Udayavani, Apr 23, 2022, 8:00 AM IST
ನವದೆಹಲಿ: ಭಾರತದ ಅತಿದೊಡ್ಡ ನೌಕಾ ಸೇವೆಗಳ ಕಂಪನಿ ಓಷಿಯನ್ ಸ್ಪಾರ್ಕಲ್ ಲಿ. ಈಗ ಅದಾನಿ ಸಮೂಹದ ಪಾಲಾಗಿದೆ.
ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿ.(ಎಪಿಎಸ್ಇಝೆಡ್) ಕಂಪನಿಯು ತನ್ನ ಅಂಗಸಂಸ್ಥೆಯಾದ ಅದಾನಿ ಹಾರ್ಬರ್ ಸರ್ವೀಸಸ್ ಲಿ. ಮೂಲಕ ಓಷಿಯನ್ ಸ್ಪಾರ್ಕಲ್ ಕಂಪನಿ(ಒಎಸ್ಎಲ್)ಯ ಎಲ್ಲ ಶೇ.100ರಷ್ಟು ಷೇರುಗಳನ್ನು ಖರೀದಿಸಿದೆ.
ಒಎಸ್ಎಲ್ ಕಂಪನಿಯು ನೌಕಾ ಸೇವೆಗಳನ್ನು ಒದಗಿಸುವ ಕಂಪನಿಗಳ ಪೈಕಿ ಭಾರತದಲ್ಲಿ ಟಾಪ್ ಸ್ಥಾನ ಹೊಂದಿದ್ದರೆ, ಜಾಗತಿಕವಾಗಿ 11ನೇ ಸ್ಥಾನ ಹೊಂದಿದೆ.
ಯಾರೂ ಹಸಿದ ಹೊಟ್ಟೆಯಲ್ಲಿ ಮಲಗುವುದಿಲ್ಲ:
2050ರ ವೇಳೆಗೆ ಭಾರತವೇನಾದರೂ ಅಂದುಕೊಂಡಂತೆಯೇ 30 ಲಕ್ಷಕೋಟಿ ಡಾಲರ್ ಆರ್ಥಿಕತೆಯಾಗಿ ರೂಪುಗೊಂಡರೆ, ಹಸಿದ ಹೊಟ್ಟೆಯಲ್ಲಿ ನಿದ್ರಿಸುವಂಥ ಸ್ಥಿತಿ ಯಾರೊಬ್ಬರಿಗೂ ಬರುವುದಿಲ್ಲ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಹೇಳಿದ್ದಾರೆ.
ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ: ಎಂಟು ಮಂದಿಗೆ ಜಾಮೀನು ನಿರಾಕರಣೆ
2050ರಿಂದ ನಾವು 10 ಸಾವಿರ ದಿನಗಳಷ್ಟು ದೂರವಿದ್ದೇವೆ. ಆ ಸಮಯ ಬರುವ ವೇಳೆಗೆ ನಾವು 25 ಲಕ್ಷಕೋಟಿ ಡಾಲರ್ ಅನ್ನು ಆರ್ಥಿಕತೆಗೆ ಸೇರಿಸಿದರೆ, ದೇಶದ ಜಿಡಿಪಿಗೆ ವರ್ಷಕ್ಕೆ ಹೆಚ್ಚುವರಿಯಾಗಿ 2.5 ಲಕ್ಷಕೋಟಿ ಡಾಲರ್ ಸೇರ್ಪಡೆಯಾಗಲಿದೆ. ಹಾಗಾಗಿ, ಎಲ್ಲ ರೀತಿಯ ಬಡತನವೂ ನಿರ್ಮಾಲನೆಯಾಗಲಿದೆ ಎಂದೂ ಅದಾನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.