ನವೀಕರಣ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ; ಬಂದೋಬಸ್ತ್: ಎನ್. ಶಶಿಕುಮಾರ್
ಮಸೀದಿ ಸ್ಥಳದಲ್ಲಿ ದೇವಸ್ಥಾನ ಹೋಲುವ ರಚನೆ ಪತ್ತೆ ಪ್ರಕರಣ
Team Udayavani, Apr 23, 2022, 7:53 AM IST
ಮಂಗಳೂರು: ಗಂಜೀಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಪೇಟೆಯ ಮಸೀದಿ ಸ್ಥಳದಲ್ಲಿ ದೇವಸ್ಥಾನದ ಮಾದರಿಯನ್ನು ಹೋಲುವ ರಚನೆ ಕಾಣಿಸಿದ್ದರಿಂದ ಜಿಲ್ಲಾಧಿಕಾರಿ ಸೂಚನೆಯಂತೆ ಅಲ್ಲಿ ನಡೆಯುತ್ತಿದ್ದ ನವೀಕರಣ ಕಾರ್ಯವನ್ನು ಒಂದು ವಾರ ಕಾಲ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಗೊಂದಲ ಬಗೆಹರಿಯುವವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಾಗದಂತೆ ಶಾಂತಿ ಕಾಪಾಡಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರಿಸಿದ್ದಾರೆ. ಇದೇ ವೇಳೆ ಮಂಗಳೂರಿನ ನ್ಯಾಯಾಲಯ ಕೂಡ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಹಳೆಯ ಕಟ್ಟಡವನ್ನು ಕೆಡವಿದಾಗ ಅಲ್ಲಿ ಮರದ ರಚನೆಯೊಂದು ಕಂಡು ಬಂದಿದೆ. ಇದು ನೋಡಲು ದೇವಸ್ಥಾನದ ರೀತಿ ಇದೆ ಎಂದು ಕೆಡವದಂತೆ ಕೆಲವರು ಆಗ್ರಹಿಸಿ ಅಲ್ಲಿ ಮಸೀದಿ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಇತ್ತಂಡಗಳ ಜತೆ ಮಾತನಾಡಿ ದಾಖಲೆ ಮೂಲಕ ಪರಿಶೀ ಲಿಸಿ ಪ್ರಕರಣವನ್ನು ಸೌಹಾರ್ದದಿಂದ ಬಗೆಹರಿಸುವುದಾಗಿ ಹೇಳಿದ್ದಾರೆ.
ಅಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದು, ಅಲ್ಲಿನ ಪರಿಶೀಲನೆಯಲ್ಲಿ ಕಂಡು ಬರುವ ಸತ್ಯಾಸತ್ಯತೆಗೆ ಬದ್ಧರಾಗಿ ರುವುದಾಗಿ ಸ್ಥಳೀಯರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನವೀ ಕರಣ ಕಾರ್ಯವನ್ನು ಒಂದು ವಾರ ಕಾಲ ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ತಾತ್ಕಾಲಿಕ ತಡೆಯಾಜ್ಞೆ
ಧನಂಜಯ ಅವರು ದಾಖಲಿಸಿದ ಖಾಸಗಿ ಧಾವೆಯನ್ನನುಸರಿಸಿ ಪತ್ತೆಯಾದ ದೇವಸ್ಥಾನವನ್ನು ಹೋಲುವ ರಚನೆಯನ್ನು ಮುಂದಿನ ವಿಚಾರಣೆಯ ತನಕ ಕೆಡಹು ವುದರ ವಿರುದ್ಧ ಅಥವಾ ಅದಕ್ಕೆ ಹಾನಿ ಎಸಗುವುದರ ವಿರುದ್ಧ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ. ಮುಂದಿನ ವಿಚಾರಣೆ 2022 ಜೂನ್ 3ರಂದು ನಡೆಯಲಿದೆ. ದಾವೆದಾರರ ಪರವಾಗಿ ವಕೀಲರಾದ ಚಿದಾನಂದ ಕೆದಿಲಾಯ, ಕೀರ್ತನ್ ಮತ್ತು ರವಿಚಂದ್ರ ವಾದಿಸಿದ್ದರು.
ಪುರಾತತ್ವ ಇಲಾಖೆಯಿಂದ
ತನಿಖೆ ನಡೆಯಲಿ
ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ ಎಂದು ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ. ಮಸೀದಿ ಸ್ಥಳದಲ್ಲಿ ಕಾಣಿಸಿರುವ ದೇವಸ್ಥಾನದ ಮಾದರಿಯನ್ನು ಹೋಲುವ ರಚನೆ ಬಗ್ಗೆ ಪುರಾತತ್ವ ಇಲಾಖೆಯಿಂದ ಅಧ್ಯಯನ ನಡೆಸಿ ಸತ್ಯಾಂಶವನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಗಂಜಿಮಠ ಗ್ರಾ.ಪಂ. ನೊಟೀಸು
ಬಜಪೆ: ಮಸೀದಿ ನವೀಕರಣ ಸಂದರ್ಭ ದೇವಸ್ಥಾನ ಅಥವಾ ಬಸದಿಯ ಮಾದರಿಯನ್ನು ಹೋಲುವ ರಚನೆ ಕಂಡುಬಂದಿರುವ ಹಾಗೂ ಅದಕ್ಕೆ ಸಂಬಂಧಿಸಿ ದೂರು ಅರ್ಜಿ ನೀಡಿದ ಹಿನ್ನೆಲೆಯಲ್ಲಿ ಗಂಜಿಮಠ ಗ್ರಾ.ಪಂ. ಮೇಲಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ಮುಂದಿನ ಆದೇಶ ಬರುವ ತನಕ ಕಟ್ಟಡದ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಪಾಡುವಂತೆ ಗ್ರಾ.ಪಂ.ನಿಂದ ಶುಕ್ರವಾರ ನೊಟೀಸು ನೀಡಲಾಗಿದೆ. ಕಟ್ಟಡದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.