ರಾಜ್ಯದಲ್ಲೂ ಬುಲ್ಡೋಜರ್ ಪ್ರಯೋಗಕ್ಕೆ ಸಿಎಂ ಜೊತೆ ಚರ್ಚೆ: ಸಚಿವ ಅಶೋಕ್
Team Udayavani, Apr 23, 2022, 2:25 PM IST
ಬೆಂಗಳೂರು: ರಾಜ್ಯದಲ್ಲಿ ಬುಲ್ಡೋಜರ್ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಸಿಎಂ ಬಸವರಾಜ್ ಬೊಮ್ಮಾಯಿ ಜತೆ ಚರ್ಚೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಸೃಷ್ಟಿಕರ್ತರು ಕಾಂಗ್ರೆಸ್ನವರು. ಹೊಡೆದವರು, ಏಟು ತಿಂದವರು ಕಾಂಗ್ರೆಸ್ ನವರು. ಈಗ ಹುಬ್ಬಳ್ಳಿ ಘಟನೆಯಾಗಿದೆ. ಮೊದಲು ಅಮಾಯಕರ ಬಂಧನ ಆಗುತ್ತಿದೆಯೆಂದು ರೋಷಾವೇಶ ತೋರಿದ್ದರು. ಈಗ ಕಾಂಗ್ರೆಸ್ ನವರ ಬಂಧನ ಆಗುತ್ತಿದ್ದು ರೋಷಾವೇಷ ಇಳಿದಿದೆ. ಪಿಎಸ್ಐ ನೇಮಕಾತಿಯಲ್ಲೂ ಕಾಂಗ್ರೆಸ್ ಮುಖಂಡರ ಬಂಧನವಾಗಿದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಪ್ರಿಯಾಂಕ್ ಖರ್ಗೆ ಆಡಿಯೋದಲ್ಲಿ ಬಾಂಬ್ ಇಲ್ಲ, ಏನೂ ಇಲ್ಲ: ಸಿಎಂ
ಹುಬ್ಬಳ್ಳಿ ದಾಂಧಲೆಕೋರರ ಜತೆ ವಿದೇಶಿಗರ ಜತೆ ನಂಟಿರಬಹುದು. ಹಿಜಾಬ್ ವಿಚಾರವೂ ಮೊದಲು ವಿದೇಶಿ ಚಾನಲ್ ಗಳಲ್ಲಿ ಪ್ರಸಾರ ಆಯಿತು. ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬುಲ್ಡೋಜರ್ ಪ್ರಯೋಗ ಜಾರಿಗೆ ಬರಬೇಕು. ಐಎಸ್ಐ ಸಂಪರ್ಕ, ಪಾಕ್ ಪರ ಜೈ ಅನ್ನುವವರು ಇದ್ದಾರೆ. ತುಂಬಾ ಜನ ಒಳ್ಳೆಯವರಿದ್ದಾರೆ. ದಂಗೆಕೋರರಿಗೆ ಮನೆನೂ ಸಿಗಬಾರದು, ಆ ತರಹ ಮಾಡಬೇಕು. ಬುಲ್ಡೋಜರ್ ಪ್ರಯೋಗದ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.