ಏಷ್ಯನ್ ಕುಸ್ತಿ ಕೂಟ: ಭಾರತದ ರವಿ ದಹಿಯಾಗೆ ಚಿನ್ನ
Team Udayavani, Apr 23, 2022, 9:11 PM IST
ಉಲ್ಲಾನ್ಬಾತರ್: ತಮ್ಮ ದೈಹಿಕ ಸಾಮರ್ಥ್ಯ ಮತ್ತು ಅದ್ಭುತ ತಂತ್ರಗಾರಿಕೆಯ ಆಟದಿಂದ ಭಾರತದ ರವಿ ದಹಿಯಾ ಅವರು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದೇ ವೇಳೆ ಬಜರಂಗ್ ಪುನಿಯ ಮತ್ತು ಗೌರವ್ ಬಲಿಯನ್ ಬೆಳ್ಳಿಯ ಪದಕ ಗೆಲ್ಲುಯಲ್ಲಿ ಯಶಸ್ವಿಯಾಗಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನ ಬೆಳ್ಳಿಯ ಪದಕ ವಿಜೇತ ರವಿ ದಹಿಯಾ ಅವರು 57 ಕೆ.ಜಿ. ವಿಭಾಗದಲ್ಲಿ ಪ್ರಾಬಲ್ಯ ಸ್ಥಾಪಿಸಿ ತನ್ನ ಎದುರಾಳಿಯನ್ನು ಕೆಡಹಿ ಚಿನ್ನ ಗೆದ್ದರು. ಅವರು ಏಷ್ಯನ್ ಕುಸ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಚಿನ್ನ ಜಯಿಸಿದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದಾರೆ.
79 ಕೆ.ಜಿ. ವಿಭಾಗದಲ್ಲಿ ಗೌರವ್ ಬಲಿಯನ್ ಅಮೋಘ ನಿರ್ವಹಣೆ ನೀಡಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿದರು. ಸ್ಪರ್ಧೆಗೆ ಮರಳಿದ ಬಜರಂಗ್ ಉತ್ತಮ ನಿರ್ವಹಣೆ ನೀಡಲು ವಿಫಲರಾದರೂ ಬೆಳ್ಳಿ ಗೆಲ್ಲಲು ಯಶಸ್ವಿಯಾದರು. ಸೀನಿಯರ್ ಮಟ್ಟಕ್ಕೆ ಪದಾರ್ಪಣೆಗೈದ ನವೀನ್ (70 ಕೆ.ಜಿ.) ಮತ್ತು ಸತ್ಯವರ್ತ್ ಕದಿಯನ್ (97 ಕೆ.ಜಿ.) ಕಂಚಿನ ಪದಕ ಪಡೆದರು.
ಇದರಿಂದಾಗಿ ಶನಿವಾರ ಸ್ಪರ್ಧೆಗೆ ಇಳಿದ ಭಾರತದ ಐವರು ಕುಸ್ತಿಪಟುಗಳು ಪದಕ ಗೆದ್ದ ಸಾಧನೆ ಮಾಡಿದರು. 24ರ ಹರೆಯದ ರವಿ ದಹಿಯಾ ಅದ್ಭುತ ಹೋರಾಟ ನಡೆಸಿ ಕಝಕ್ಸ್ತಾನದ ರಖತ್ ಕಲ್ಜಾನ್ ಅವರನ್ನು ಉರುಳಿಸಿದರು. ಇದು ಈ ಕೂಟದಲ್ಲಿ ಭಾರತ ಗೆದ್ದ ಮೊದಲ ಚಿನ್ನದ ಪದಕವಾಗಿದೆ. ಭಾರತ ಈ ಸ್ಪರ್ಧೆಯಲ್ಲಿ ಒಟ್ಟಾರೆ ಒಂದು ಚಿನ್ನ, 4 ಬೆಳ್ಳಿ ಸಹಿತ 15 ಪದಕ ಗೆದ್ದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.