ಪೈಪೋಟಿಯ ಭರದಲ್ಲಿ ಮಾಧ್ಯಮಗಳು ಹೊಣೆಗಾರಿಕೆ ಮರೆಯದಿರಲಿ


Team Udayavani, Apr 25, 2022, 6:00 AM IST

ಪೈಪೋಟಿಯ ಭರದಲ್ಲಿ ಮಾಧ್ಯಮಗಳು ಹೊಣೆಗಾರಿಕೆ ಮರೆಯದಿರಲಿ

ಹೊಸದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ, ರಷ್ಯಾ-ಉಕ್ರೇನ್‌ ಯುದ್ಧ ಸಹಿತ ವಿವಿಧ ಘಟನೆಗಳ ಸಂದರ್ಭದಲ್ಲಿ ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಕೆಲವು ಖಾಸಗಿ ಟಿ.ವಿ. ಚಾನೆಲ್‌ಗ‌ಳು ಪ್ರಚೋದನಕಾರಿ ಸುದ್ದಿಗಳನ್ನು ಬಿತ್ತರಿಸಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನಾವಳಿಗಳನ್ನು ವರದಿ ಮಾಡುವಾಗ ಮತ್ತು ಸುದ್ದಿಗಳನ್ನು ಬಿತ್ತರಿಸುವಾಗ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವಂತೆ ಖಾಸಗಿ ಟಿ.ವಿ. ಚಾನೆಲ್‌ಗ‌ಳಿಗೆ ಎಚ್ಚರಿಕೆಯ ಸಲಹೆಯನ್ನು ಸರಕಾರ ನೀಡಿದೆ.

ಕೋಮು ಹಿಂಸಾಚಾರದಂತಹ ಘಟನೆಗಳು ನಡೆದಾಗ ವದಂತಿಗಳನ್ನೇ ಸುದ್ದಿಗಳಾಗಿ ಬಿತ್ತರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬಾರದು. ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಅನಧಿಕೃತ ಮಾಹಿತಿ, ವೀಡಿಯೋ ತುಣುಕುಗಳನ್ನು ಕೆಲವು ಎಲೆಕ್ಟ್ರಾನಿಕ್‌ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಬಿತ್ತರಿಸುವುದು ಸಾಮಾನ್ಯವಾಗಿದೆ. ಈ ಮಾಹಿತಿಗಳು ಮತ್ತು ವೀಡಿಯೋ ತುಣುಕುಗಳ ನಿಖರತೆ ಮತ್ತು ವಾಸ್ತವಾಂಶಗಳ ಬಗೆಗೆ ಪರಿಶೀಲನೆ ನಡೆಸದೆ ಸುದ್ದಿ ನೀಡುವ ಪೈಪೋಟಿಯಲ್ಲಿ ಬೇಕಾಬಿಟ್ಟಿಯಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಸರಕಾರಕ್ಕೆ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾವುದೇ ದುರಂತ, ಹಿಂಸಾಚಾರ, ಕೋಮುದಳ್ಳುರಿಯಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಕೆಲವು ಮಾಧ್ಯಮಗಳ ಈ ರೀತಿಯ ವರ್ತನೆಯು ಪರಿಸ್ಥಿತಿ ಯನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತಿದೆ. ಇಂದಿನ ಪೈಪೋಟಿಯ ಕಾಲಘಟ್ಟದಲ್ಲಿ ಎಲ್ಲವೂ ಮೊದಲು ನಮ್ಮ ವಾಹಿನಿಯಲ್ಲೇ ಬಿತ್ತರಗೊಳ್ಳ ಬೇಕು ಎಂಬ ಧಾವಂತದಲ್ಲಿ ತಿರುಚಲ್ಪಟ್ಟ ಅಥವಾ ಯಾವುದೋ ಹಳೆಯ ವೀಡಿಯೋ ತುಣುಕುಗಳನ್ನು ಬಿತ್ತರಿಸುವ ಕಾರ್ಯ ಕೆಲವು ಆಧುನಿಕ ಮಾಧ್ಯಮಗಳಿಂದಾಗುತ್ತಿವೆ. ಈ ಕಾರಣದಿಂದಾಗಿಯೇ ಕೋಮು ಹಿಂಸಾಚಾರ, ದುರಂತಗಳು ನಡೆದ ಸಂದರ್ಭದಲ್ಲಿ ಇಂಟರ್‌ನೆಟ್‌ ಸಂಪರ್ಕ ಸ್ಥಗಿತ, ಕೇಬಲ್‌ ಕಡಿತದಂತಹ ಕಠಿನ ಮತ್ತು ಅನಿವಾರ್ಯ ಕ್ರಮಗಳನ್ನು ಸ್ಥಳೀಯಾಡಳಿತ ವ್ಯವಸ್ಥೆ ಕೈಗೊಂಡ ಉದಾಹರಣೆ ನಮ್ಮ ಮುಂದೆ ಸಾಕಷ್ಟಿವೆ. ಆದರೆ ಈ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸುವ ಇದೇ ಸಂಸ್ಥೆಗಳು ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸುವ ಸಂದರ್ಭದಲ್ಲಿ ಕಿಂಚಿತ್‌ ವಿವೇಚನೆಯನ್ನೂ ತೋರದಿರುವುದು ದುರಂತ ಎಂದರೆ ಅತಿಶಯೋಕ್ತಿಯಾಗಲಾರದು.

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮ ರಂಗ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ತಂತ್ರಜ್ಞಾನ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವಂತೆಯೇ ಇದರ ಅಡ್ಡ ಪರಿ ಣಾಮಗಳ ಕರಿಛಾಯೆ ನೇರವಾಗಿ ಜನಸಾಮಾನ್ಯರ ಮೇಲೂ ಬೀಳ ತೊಡಗಿದೆ. ತಂತ್ರಜ್ಞಾನದ ಅಭೂತಪೂರ್ವ ಬೆಳವಣಿಗೆಯಿಂದಾಗಿ ಕ್ಷಣಮಾತ್ರದಲ್ಲಿ ವಿಶ್ವದ ಯಾವುದೇ ಒಂದು ಮೂಲೆಯಲ್ಲಿ ಒಂದು ದುರಂತ ಸಂಭವಿಸಿದರೂ ಅದು ಕ್ಷಣ ಮಾತ್ರದಲ್ಲಿ ಜನರನ್ನು ತಲುಪುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಬಿತ್ತರಿಸಲಾಗುವ ಸುದ್ದಿಯ ಖಚಿತತೆ ಮತ್ತವುಗಳು ಜನರ ಮೇಲೆ ಬೀರುವ ಪರಿಣಾಮವನ್ನೂ ಮೊದಲೇ ಗ್ರಹಿಸುವುದು ಜವಾಬ್ದಾರಿ ಯುತ ಮಾಧ್ಯಮ ಸಂಸ್ಥೆಯ ಕರ್ತವ್ಯವೂ ಹೌದು. ಇದನ್ನು ಮರೆತು ವದಂತಿ, ಪುಕಾರುಗಳನ್ನು ಪ್ರಸಾರ ಮಾಡುವುದು ಸರ್ವಥಾ ಸರಿಯಲ್ಲ.

ಟಾಪ್ ನ್ಯೂಸ್

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

Ballary-Suside

Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ

1-army

Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ

BBK11:‌ ಕೋಪದಿಂದ ಅರ್ಧದಲ್ಲೇ ಬಿಗ್‌ ಬಾಸ್‌ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್

BBK11:‌ ಕೋಪದಿಂದ ಅರ್ಧದಲ್ಲೇ ಬಿಗ್‌ ಬಾಸ್‌ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-editorial

Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ

8

Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Fraud case: ಸಚಿತಾ ರೈ ವಿರುದ್ಧ ಇನ್ನೊಂದು ಕೇಸು ದಾಖಲು

Kasargod: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ ಸಹೋದರಿಯ ಪತಿ ಪೋಕ್ಸೋ ಪ್ರಕಾರ ಬಂಧನ

Kasargod: ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ ಸಹೋದರಿಯ ಪತಿ ಪೋಕ್ಸೋ ಪ್ರಕಾರ ಬಂಧನ

Kasargod: ಹೊಳೆಯಲ್ಲಿ ನೀಲೇಶ್ವರ ನಗರಸಭಾ ಅಧ್ಯಕ್ಷೆಯ ಪತಿಯ ಮೃತದೇಹ ಪತ್ತೆ

Kasargod: ಹೊಳೆಯಲ್ಲಿ ನೀಲೇಶ್ವರ ನಗರಸಭಾ ಅಧ್ಯಕ್ಷೆಯ ಪತಿಯ ಮೃತದೇಹ ಪತ್ತೆ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.