“ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ 53 5ಜಿ’ ಬಿಡುಗಡೆ
ಸ್ಟೋರೇಜ್ ಅನ್ನು 1ಟೆರಾ ಬೈಟ್‌ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
Team Udayavani, Apr 25, 2022, 4:55 PM IST
ನವದೆಹಲಿ: ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಾಕ್ಸಿ ಎಂ53 5ಜಿ ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನು 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ನಾಲ್ಕು ಕ್ಯಾಮೆರಾಗಳಿರುವ ಫೋನಿನಲ್ಲಿ 108ಎಂಪಿ ಪ್ರೈಮರಿ ಕ್ಯಾಮೆರಾ ವಿದ್ದರೆ, 32ಎಂಪಿ ಸೆಲ್ಫಿ ಕ್ಯಾಮೆರಾವಿದೆ.
5000 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದ್ದು, 25 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. 6ಜಿಬಿ ರ್ಯಾಮ್ ಜತೆ 128ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 23,999 ರೂ. ಆಗಿದ್ದರೆ, 8 ಜಿಬಿ ರ್ಯಾಮ್ ಜತೆ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 25,999 ರೂ. ಆಗಿದೆ. ಮೆಮೋರಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು 1ಟೆರಾ ಬೈಟ್‌ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ಇವಿ ಓಲಾ ಸ್ಕೂಟರ್ ವಾಪಸ್
ವಿದ್ಯುಚ್ಚಾಲಿತ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಕಾರಣ ಓಲಾ ಎಲೆಕ್ಟ್ರಿಕ್ ಕಂಪನಿ, ಮಾರುಕಟ್ಟೆಯಲ್ಲಿದ್ದ 1,441 ಸ್ಕೂಟರ್‌ಗಳನ್ನು ಹಿಂಪಡೆ ಯಲು ತೀರ್ಮಾನಿಸಿದೆ. ಮಾರ್ಚ್ 26ರಂದು ಪುಣೆಯಲ್ಲಿ ಓಲಾ ಸ್ಕೂಟರ್ ಅಗ್ನಿ ಸ್ಫೋಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಕಂಪನಿ ಈ ನಿಲುವು ತಾಳಿದೆ.
“ಸರ್ವೀಸ್ ಎಂಜಿನಿಯರ್‌ಗಳು 1,441 ಓಲಾ ಸ್ಕೂಟರ್‌ಗಳನ್ನು ಮರು ತಪಾಸಣೆಗೆ ಒಳಪಡಿಸಲಿದ್ದಾರೆ. ಬ್ಯಾಟರಿ ವ್ಯವಸ್ಥೆ ಸೇರಿದಂತೆ ಸ್ಕೂಟರ್‌ನ ಎಲ್ಲ ಪ್ರತ್ಯೇಕ
ಭಾಗಗಳನ್ನೂ ಪರೀ ಕ್ಷಿಸಲಿದ್ದಾರೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಇತ್ತೀಚೆಗಷ್ಟೇ ಒಕಿನಾವಾ ಆಟೋ ಟೆಕ್ 3000 ಸ್ಕೂಟರ್‌ಗಳನ್ನು, ಪ್ಯೂರ್‌ಇವಿ 2000 ಸ್ಕೂಟರ್ ಗಳನ್ನು ವಾಪಸ್ ಪಡೆದು, ಪರೀಕ್ಷೆಗೊಳಪಡಿಸಿದ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ ಈ ನಿರ್ಧಾರ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.