![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 26, 2022, 7:15 AM IST
ಬೆಂಗಳೂರು: ದೇಶದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಲ್ಲಿ ಮುಂದಿರುವ ಕರ್ನಾಟಕವು, ಶಾಲಾ ಶಿಕ್ಷಣ ದಲ್ಲಿ ಈ ವರ್ಷವೇ ನೀತಿಯನ್ನು ನಿಗದಿತ ಸಮಯದಲ್ಲಿ ಅನುಷ್ಠಾನ ಮಾಡುವುದು ಸಂಶಯ.
ಎನ್‌ಇಪಿ ಜಾರಿಗೆ ಅಗತ್ಯವಿರುವ ಪಠ್ಯ ಕ್ರಮ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯ ಕ್ರಮ ಇನ್ನೂ ಪ್ರಗತಿಯಲ್ಲಿದೆ. ಹೀಗಾಗಿ ಜೂ.1ರಿಂದಲೇ ಪೂರ್ವ ಪ್ರಾಥಮಿಕ ಹಂತದ ಮಕ್ಕಳಿಗೆ ಎನ್‌ಇಪಿ ಆರಂಭಿಸುವುದು ಕಷ್ಟಸಾಧ್ಯವಾಗಿದೆ. ಒಂದು ವೇಳೆ ಆರಂಭವಾದರೂ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಸಿಗಬೇಕಿ ರುವ ಶಿಕ್ಷಣ ನೀಡಲು ವಿಳಂಬವಾಗ ಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
3ರಿಂದ 5 ವರ್ಷದೊಳಗಿನ ಮಕ್ಕಳಿಗೆ “ಚಿಲಿಪಿಲಿ’ ಹೆಸರಿನಲ್ಲಿ “ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣ ಕಲಿಕೆ’ ನೀಡುವುದಾಗಿ ಸರಕಾರ ಈಗಾಗಲೇ ಘೋಷಿಸಿದ್ದು, ಇದಕ್ಕಾಗಿ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ.
ಮಕ್ಕಳಿಗೆ ಏನೇನು ಕಲಿಸ ಬೇಕು ಎಂಬುದನ್ನು ಅಂಗನವಾಡಿ ಕಾರ್ಯ ಕರ್ತೆಯರಿಗೆ ತಿಳಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಸಮಿತಿ ನೀಡುವ ವರದಿ ಆಧಾರದಲ್ಲಿ ಅಂಗನವಾಡಿ ಕಾರ್ಯ ಕರ್ತೆಯರಿಗೆ ತರಬೇತಿ ನೀಡಲಾಗುತ್ತದೆ. ಅದಾದ ಬಳಿಕ ಎನ್‌ಇಪಿ ಜಾರಿಗೆ ಕ್ರಮ ಕೈಗೊಳ್ಳ ಲಾಗುತ್ತದೆ. 7ನೇ ತರಗತಿ, ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಓದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತ್ಯೇಕವಾಗಿ ತರಬೇತಿ ನೀಡಬೇಕಾಗುತ್ತದೆ.
ಪಠ್ಯಕ್ರಮ ವಿನ್ಯಾಸಕ್ಕೆ ಸಮಿತಿ ರಚನೆ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 3ರಿಂದ 8 ವರ್ಷದ ಮಕ್ಕಳಿಗೆ ಮೊದಲ ಹಂತದಲ್ಲಿ ಶಿಕ್ಷಣ ನೀಡಲಾಗುತ್ತದೆ. (ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣ) 3ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿ ಹಾಗೂ 1 ಮತ್ತು 2ನೇ ತರಗತಿ ಶಿಕ್ಷಣವನ್ನು ಶಾಲೆಗಳಲ್ಲಿ ನೀಡಲಿದೆ. ಈ ಮಕ್ಕಳಿಗೆ ಏನನ್ನು ಬೋಧಿಸಬೇಕು ಎಂಬ ಪಠ್ಯಕ್ರಮ ವಿನ್ಯಾಸಗೊಳಿಸುವುದಕ್ಕಾಗಿ 6 ಉಪ ಸಮಿತಿಗಳನ್ನು ರಚಿಸಿ ಎ.19ರಂದು ಆದೇಶ ಹೊರಡಿಸಿದೆ.
ಈ ಸಮಿತಿಗಳು 45 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಪಠ್ಯಕ್ರಮ ವಿನ್ಯಾಸ, ಬೋಧನೆ ಮತ್ತು ಕಲಿಕಾ ಸಾಮಗ್ರಿ ಗಳು, ಮೌಲ್ಯಮಾಪನ, ಮಕ್ಕಳ ಸಾಮರ್ಥ್ಯ ಅಭಿವೃದ್ಧಿ, ಶಿಕ್ಷಣವು ಸಮುದಾಯ ತಲುಪು ವಿಕೆ, ಮಗುವಿನ ಆರಂಭಿಕ ಉತ್ತೇಜನ, ಮೇಲ್ವಿಚಾರಣೆ ಮತ್ತು ಉಸ್ತುವಾರಿ ವಿಷಯ ಗಳನ್ನು ಕುರಿತು ಉಪ ಸಮಿತಿಗಳು ವರದಿ ನೀಡಲಿವೆ. ಇದಾದ ಬಳಿಕ ಪಠ್ಯಕ್ರಮವು ರಚನೆಯಾಗಲಿದೆ.
ಸಮಿತಿಯ ಕರ್ತವ್ಯಗಳೇನು?
ಈ ಉಪ ಸಮಿತಿಗಳು ಬಾಲ್ಯಾವಸ್ಥೆ ಯಲ್ಲಿ ಮಕ್ಕಳ ಸಂರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಭದ್ರ ಬುನಾದಿ ಕಲ್ಪಿಸುವುದು. ಮಕ್ಕಳಲ್ಲಿ ಕುತೂಹಲವನ್ನು ಉಂಟುಮಾಡುವ ಅಕ್ಷರಮಾಲೆ, ಭಾಷೆಗಳು, ಅಂಕಿಗಳು, ಎಣಿಕೆ, ಬಣ್ಣಗಳು, ಒಳಾಂಗಣ ಮತ್ತು ಹೊರಾಂಗಣ ಆಟಗಳು, ಚಿತ್ರ ಬರೆಯು ವುದು, ನಾಟಕ, ಗೊಂಬೆಯಾಟ ಗಳನ್ನು ಹೊಂದಿರುತ್ತದೆ.
ಸರಕಾರವು ಈಗಾಗಲೇ ಘೋಷಿಸಿರುವಂತೆ ಎನ್‌ಇಪಿ ಜಾರಿ ಮಾಡ ಲಿದೆ. ಅಂಗನವಾಡಿ ಕಾರ್ಯ ಕರ್ತೆಯ ರಿಗೆ ತರಬೇತಿ ಸಹಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
– ಎಸ್. ಸೆಲ್ವಕುಮಾರ್, ಪ್ರಧಾನ ಕಾರ್ಯದರ್ಶಿ, ಪ್ರಾ.ಮತ್ತು ಪ್ರೌಢಶಿಕ್ಷಣ ಇಲಾಖೆ
ಹತ್ತು ದಿನಗಳ ತರಬೇತಿಯಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಹೇಳಿಕೊಡುವಂತೆ ತಿಳಿಸಿದ್ದಾರೆ. ನಿಖರವಾಗಿ ಏನು ಹೇಳಿಕೊಡ ಬೇಕು ಎಂಬ ಬಗ್ಗೆ ಪಠ್ಯಕ್ರಮ ಬರಲಿದೆ. ಅನಂತರ ಅದನ್ನು ಮತ್ತೂಮ್ಮೆ ತರಬೇತಿ ನೀಡಿ ತಿಳಿಸಿಕೊಡಲಾಗುವುದು ಎನ್ನಲಾಗಿದೆ. ಮತ್ತಷ್ಟು ತರಬೇತಿ ನೀಡಿದ್ದರೆ ಒಳ್ಳೆಯದಿತ್ತು.
– ಹೆಸರು ಹೇಳದ ಅಂಗನವಾಡಿ ಕಾರ್ಯಕರ್ತೆ
- ಎನ್.ಎಲ್. ಶಿವಮಾದು
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.