ರಷ್ಯಾ ಬದಲು ಭಾರತದ ಸಖ್ಯ: ಇ.ಯು. ಚಿಂತನೆ
Team Udayavani, Apr 26, 2022, 7:50 AM IST
ಲಂಡನ್: ರಷ್ಯಾದೊಂದಿಗೆ ವ್ಯಾಪಾರ, ವಹಿವಾಟು ಮುರಿದುಕೊಂಡಿರುವ ಐರೋಪ್ಯ ರಾಷ್ಟ್ರಗಳ ಒಕ್ಕೂಟ (ಇ.ಯು.), ಭಾರತದೊಂದಿಗೆ ತಾನು ಹೊಂದಿರುವ ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಉನ್ನತೀಕರಿಸಲು ನಿರ್ಧರಿಸಿದೆ.
ಭಾರತ ಭೇಟಿಯಲ್ಲಿರುವ ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವೋನ್ ಡೆರ್ ಲೆಯೆನ್ ಈ ವಿಚಾರ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ರಷ್ಯಾ ಬದಲಿಗೆ ಭಾರತವನ್ನೇ ತನ್ನ ಆದ್ಯತೆಯ ರಾಷ್ಟ್ರವನ್ನಾಗಿಸಲು ಇ.ಯು. ಚಿಂತನೆ ನಡೆಸಿದೆ. ಭಾರತದ ಜತೆಗೆ ಮುಂದೆ ಹೊಂದಬಹುದಾದ ಅಗಾಧ ವಾಣಿಜ್ಯ ಅವಕಾಶಗಳ ಬಗ್ಗೆ ಸೂಕ್ತ ಅಧ್ಯಯನ ಮಾಡಲೆಂದೇ ವಿಶೇಷ ತಂತ್ರಜ್ಞರ ನಿಯೋಗವೊಂದನ್ನು ರಚಿಸಲು ಇ.ಯು. ನಿರ್ಧರಿಸಿದೆ. ಸಾಮಾನ್ಯ ದತ್ತಾಂಶ ಸಂರಕ್ಷಣೆ, ಸಾಮಾಜಿಕ ಜಾಲತಾಣಗಳ ಅಭಿವೃದ್ಧಿ ಸೇರಿದಂತೆ ಹಲವು ಅವಕಾಶಗಳ ಕುರಿತು ಇಯು ಪ್ರತಿನಿಧಿಗಳು, ಭಾರತದೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದೂ ಲೆಯೆನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.