ಕಿಮ್ಸ್ ಅಭಿವೃದ್ಧಿ ಪ್ರಸ್ತಾವನೆಗೆ ಸಿಗದ ಸ್ಪಂದನೆ
ಉತ್ತಮ ಚಿಕಿತ್ಸೆ ನೀಡುವ ತಜ್ಞರಿದ್ದರೂ ಸೌಲಭ್ಯಗಳ ಕೊರತೆ
Team Udayavani, Apr 26, 2022, 9:18 AM IST
ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳ ಬಡವರು, ಮಧ್ಯಮ ವರ್ಗದವರಿಗೆ ಪ್ರಮುಖ ಆರೋಗ್ಯಧಾಮವಾಗಿರುವ ಕಿಮ್ಸ್ ಅಭಿವೃದ್ಧಿ ಹಾಗೂ ಹೆಚ್ಚಿನ ಸೌಲಭ್ಯಗಳ ದೃಷ್ಟಿಯಿಂದ ಸಲ್ಲಿಸಲಾಗಿದ್ದ ಅಂದಾಜು 400-500 ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಜಯದೇವ ಆಸ್ಪತ್ರೆ ಶಾಖೆ ಆರಂಭಕ್ಕೆ ಕ್ರಮ ಬಿಟ್ಟರೆ ಸರಕಾರದಿಂದ ಹೆಚ್ಚಿನ ಸ್ಪಂದನೆ ಇಲ್ಲವಾಗಿದೆ. ಜನರಿಗೆ ಚಿಕಿತ್ಸೆ, ಉತ್ತಮ ಆರೋಗ್ಯ ಸೌಲಭ್ಯ ನೀಡುವ ತಜ್ಞರು ಇದ್ದರೂ, ಸೌಲಭ್ಯಗಳ ಕೊರತೆ ಕಾಡುವಂತಾಗಿದೆ.
ಆರೋಗ್ಯ ಸಮಸ್ಯೆಯಿಂದ ಬಳಲುವ ಬಡವರು, ದುಬಾರಿ ವೈದ್ಯಕೀಯ ವೆಚ್ಚ ಭರಿಸಲಾಗದೆ ಪರಿತಪಿಸುವವರಿಗೆ ಕಿಮ್ಸ್ ಮಹತ್ವದ ಆಸರೆಯಾಗಿದೆ. ನಿತ್ಯವೂ 1,000-1200 ಜನ ಹೊರರೋಗಿಗಳು ವೈದ್ಯಕೀಯ ಸೇವೆ ಪಡೆದರೆ, ನೂರಾರು ಜನ ಒಳ ರೋಗಿಗಳಿಗೆ ವಿವಿಧ ರೀತಿಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಕಡು ಬಡವರಿಗೆ ಉಚಿತ ಹಾಗೂ ಆರ್ಥಿಕ ದುರ್ಬಲರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸೌಲಭ್ಯ ದೊರೆಯುತ್ತಿದ್ದು, ಕಿಮ್ಸ್‌ಗೆ ಹೆಚ್ಚು ಹೆಚ್ಚು ಸೌಲಭ್ಯ ದೊರೆಯಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ನಿರೀಕ್ಷಿತ ನೆರವು ದೊರೆತಿಲ್ಲ ಎನ್ನಬಹುದು.
ಅನೇಕ ಆಕ್ಷೇಪ, ಲೋಪ, ರೋಗಿಗಳ ಬಗ್ಗೆ ಉದಾಸೀನತೆ, ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಸೇವೆಗೆ ಆದ್ಯತೆ ನೀಡುತ್ತಾರೆ, ಸ್ವತ್ಛತೆಯ ಸಮಸ್ಯೆ ಇದೆ ಎಂಬ ಏನೆಲ್ಲ ಆರೋಪಗಳ ನಡುವೆಯೂ ಕಿಮ್ಸ್ ಸಾವಿರಾರು ಜನರಿಗೆ ಆರೋಗ್ಯದ ತಾಣವಾಗಿದೆ. ಅನೇಕ ತಜ್ಞ ವೈದ್ಯರಿಂದ ಉಚಿತ ಇಲ್ಲವೆ ಕಡಿಮೆ ವೆಚ್ಚದಲ್ಲಿಯೇ ವೈದ್ಯಕೀಯ ಸೌಲಭ್ಯ ದೊರೆಯುತ್ತಿದೆ.
ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ವಿಜಯಪುರ ಇನ್ನಿತರ ಜಿಲ್ಲೆಗಳ ಬಡ ಜನರ ಪಾಲಿಗೆ ಕಿಮ್ಸ್ ಮಹತ್ವದ ಆರೋಗ್ಯಧಾಮವಾಗಿದೆ. ಕೋವಿಡ್ ಸಂದರ್ಭದಲ್ಲಂತೂ ಇಡೀ ಉತ್ತರ ಕರ್ನಾಟಕ ಪಾಲಿಗೆ ಕಿಮ್ಸ್ ಒಂದು ರೀತಿಯಲ್ಲಿ ಸಂಜೀವಿನಿ ಪಾತ್ರ ವಹಿಸಿತ್ತು. ಸಾವಿರಾರು ಜನ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವ ಕಾರ್ಯ ಮಾಡಿತ್ತು ಇದೀಗ ಸರಕಾರ ಕಿಡ್ನಿ ಕಸಿಗೆ ಅನುಮತಿ ನೀಡಿದ್ದರಿಂದ ಬಡತನ ರೇಖೆಗಿಂತ ಕಡಿಮೆ ಇರುವ ಬಾಗಲಕೋಟೆ ಜಿಲ್ಲೆಯ ಯುವಕನೊಬ್ಬನಿಗೆ ಉಚಿತವಾಗಿ ಕಿಡ್ನಿ ಕಸಿ ಮಾಡಲಾಗಿದೆ. ಇದೇ ಖಾಸಗಿ ಆಸ್ಪತ್ರೆಯಲ್ಲಾಗಿದ್ದರೆ ಐದಾರು ಲಕ್ಷ ರೂ. ವೆಚ್ಚ ಭರಿಸಬೇಕಾಗಿತ್ತು. ಕಿಡ್ನಿ ಕಸಿ ಮಾಡಿದ ರಾಜ್ಯದ ಮೊದಲ ಸರಕಾರಿ ವೈದ್ಯಕೀಯ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಹೃದ್ರೋಗ ಇನ್ನಿತರ ವ್ಯಾಧಿಗಳಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಬಡವರ ಪಾಲಿಕೆಗೆ ಮಹತ್ವದ ಆಸರೆಯಾಗಿದೆ.
ಪ್ರಸ್ತಾವನೆ ಬಗ್ಗೆ ಸರಕಾರ ಮೌನ? ಕಿಮ್ಸ್‌ಗೆ ವಿಶೇಷ ಪ್ಯಾಕೇಜ್ ನೀಡಬೇಕು, ಆರೋಗ್ಯ ಚಿಕಿತ್ಸೆ ಬಯಸಿ ಬರುವ ರೋಗಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುವಂತಾಗಬೇಕೆಂಬ ಬೇಡಿಕೆ ಅನೇಕ ದಶಕಗಳಿಂದ ಇದೆ. ಕಿಮ್ಸ್ ಹೆಚ್ಚಿನ ವಿಭಾಗಗಳ ಆರಂಭ, ಮತ್ತಷ್ಟು ಸೌಲಭ್ಯಗಳ ನೀಡಿಕೆ ದೃಷ್ಟಿಯಿಂದ ಅಂದಾಜು 400-500 ಕೋಟಿ ರೂ.ಗಳ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಕಿಮ್ಸ್‌ಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಕಿಮ್ಸ್ ಅಭಿವೃದ್ಧಿಗೆ ಸರಕಾರ ಗಮನ ನೀಡಲಿದ್ದು, ಈ ಕುರಿತು ಸಭೆ ನಡೆಸಿ ವಿಶೇಷ ನೆರವು ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಇದಕ್ಕೆ ಪೂರಕ ಎನ್ನುವಂತೆ ಕಿಮ್ಸ್‌ನಲ್ಲಿ ಕೈಗೊಳ್ಳಬಹುದಾದ ವಿಭಾಗ, ಹೆಚ್ಚಿನ ಸೌಲಭ್ಯಗಳ ನಿಟ್ಟಿನಲ್ಲಿ ಅಂದಾಜು 400-500 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆ ಆಗಿದ್ದು, ಇದರಲ್ಲಿ ಕಿಮ್ಸ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪ್ರತ್ಯೇಕ ವಿಭಾಗ ಸ್ಥಾಪನೆ, ಚಿಕ್ಕಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಿಭಾಗ ಇನ್ನಿತರ ಸೌಲಭ್ಯಗಳ ಉದ್ದೇಶವನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಿಮ್ಸ್‌ನಲ್ಲಿ ಹೆರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದ್ದು, ಚಿಕ್ಕಮಕ್ಕಳ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯ ಹಾಗೂ ಪತ್ಯೇಕ ವಿಭಾಗದ ಅವಶ್ಯಕತೆ ಇದೆ. ಇದರಿಂದ ನವಜಾತ ಶಿಶುಗಳಲ್ಲಿ ಕಂಡು ಬರುವ ಅನಾರೋಗ್ಯ, ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಸಹಕಾರಿ ಆಗಲಿದೆ. ಅದೇ ರೀತಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವಿಭಾಗದ ಚಿಂತನೆ ಇತ್ತಾದರೂ, ಕ್ಯಾನ್ಸರ್ ಚಿಕಿತ್ಸೆ ವಿಭಾಗವನ್ನು ಬೆಳಗಾವಿಗೆ ನೀಡಿರುವ ಸರಕಾರ ಕಿಮ್ಸ್‌ಅನ್ನು ಕಡೆಗಣಿಸಿದೆ ಎಂದೆನಿಸುತ್ತದೆ.
ಕಿಮ್ಸ್‌ನಿಂದ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ಜಯದೇವ ಆಸ್ಪತ್ರೆ ಶಾಖೆಯನ್ನು ಅಂದಾಜು 250 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಗೆ ಮುಂದಾಗಿರುವುದು ಸರಕಾರದ ಉತ್ತಮ ನಡೆಯಾಗಿದೆ. ಇದರಿಂದ ಉತ್ತರ ಕರ್ನಾಟಕದ ಅನೇಕ ಹೃದ್ರೋಗಿಗಳಿಗೆ ಉತ್ತಮ ನೆರವು ದೊರೆತಂತಾಗಿದೆ. ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ಕಿಮ್ಸ್‌ಗೆ ವಿಶೇಷ ಸೌಲಭ್ಯ ನೀಡಿಕೆ ನಿಟ್ಟಿನಲ್ಲಿ ಸರಕಾರ ಉದಾಸೀನ ತೋರದೆ ಸೂಕ್ತ ಸ್ಪಂದನೆ ತೋರಬೇಕಿದೆ.
ಅನುದಾನ ನೀಡಿಕೆಯಲ್ಲಿ ತೋರಬೇಕಿದೆ ಉದಾರತೆ: ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯ ತೋರದೆ ಕಿಮ್ಸ್ ವಿಚಾರದಲ್ಲಿ ಸರಕಾರ ಉದಾರತೆ ತೋರಬೇಕಾಗಿದೆ. ನೀಡುವ ಅನುದಾನದಲ್ಲಿ ಕಡಿಮೆ ಹಾಗೂ ವಿಳಂಬ ನೀತಿ ತೋರಿದರೆ ಸೌಲಭ್ಯ, ವೆಚ್ಚಗಳ ನಿರ್ವಹಣೆ ಸಮಸ್ಯೆ ಆಗಲಿದೆ. ಮೈಸೂರು, ಬೆಂಗಳೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಹಾಗೂ ಕಿಮ್ಸ್‌ಗೆ ನೀಡುವ ಅನುದಾನ ಗಮನಿಸಿದರೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಆರ್ಥಿಕ ಸೌಲಭ್ಯ 103 ಅಡಿಯಲ್ಲಿ ಮೈಸೂರು, ಬೆಂಗಳೂರಿಗೆ ವಾರ್ಷಿಕ 30-40 ಕೋಟಿ ರೂ. ಅನುದಾನ ದೊರೆತರೆ ಕಿಮ್ಸ್‌ಗೆ ವಾರ್ಷಿಕ 23 ಕೋಟಿ ರೂ. ಅನುದಾನ ದೊರೆಯುತ್ತಿದೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದ ಸುಮಾರು ಏಳೆಂಟು ಜಿಲ್ಲೆಗಳ ಬಡವರು, ಮಧ್ಯಮ ವರ್ಗದವರಿಗೆ ಆರೋಗ್ಯ ಚಿಕಿತ್ಸೆ ಧಾಮವಾಗಿರುವ ಕಿಮ್ಸ್ ಬಗ್ಗೆ ಸರಕಾರ ಉದಾರತೆ ತೋರಬೇಕಾಗಿದೆ. ಕಾಲೇಜು, ಆಸ್ಪತ್ರೆ ನಿರ್ವಹಣೆಗೆ ಹೆಚ್ಚಿನ ಅಥವಾ ಸಮಾನ ಅನುದಾನ ನೀಡಿಕೆಗೆ ಮುಂದಾಗಬೇಕಾಗಿದೆ.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.