ಸ್ವಚ್ಛ ಸರ್ವೇಕ್ಷಣೆ ಸ್ಪರ್ಧೆಯಲ್ಲಿ ನಗರಸಭೆ


Team Udayavani, Apr 26, 2022, 9:41 AM IST

puttur

ಪುತ್ತೂರು: ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ ನಡೆಯುತ್ತಿದ್ದು 2021-22ನೇ ಸಾಲಿನ ಪ್ರಶಸ್ತಿಗಾಗಿ ಪ.ಪಂ., ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಪೌರಾಡಳಿತ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದು ಪುತ್ತೂರು ನಗರಸಭೆಯು ಅಖಾಡದಲ್ಲಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಖಾತೆ ಸಚಿವಾಲಯದ ನೇತೃತ್ವದಲ್ಲಿ ಈ ಸ್ಪರ್ಧೆ ಆಯೋಜನೆಗೊಂಡಿದೆ. ಈ ತನಕದ ಅಂಕಿ ಅಂಶದಲ್ಲಿ ದ.ಕ.ಜಿಲ್ಲೆಯಲ್ಲಿ ಪುತ್ತೂರು ನಗರಸಭೆ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಜನಮತ ಸಂಗ್ರಹದಲ್ಲಿ ಮಂಗಳೂರು ಮುಂಚೂಣಿಯಲ್ಲಿದ್ದು ಈ ಬಾರಿ ಪುತ್ತೂರಿಗೆ ಸ್ವಚ್ಛ ಸರ್ವೇಕ್ಷಣ-2022 ಪ್ರಶಸ್ತಿ ದೊರೆಯುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ.

ಅಭಿಯಾನದ ರೂಪ

ಸ್ವಚ್ಛ ಸರ್ವೇಕ್ಷಣೆ ಎಂಬುದು ವರ್ಷವಿಡೀ ನಡೆಯುವ ದಾಖಲೀಕರಣ. ಪ್ರತೀ ತಿಂಗಳು ಸರಕಾರ ಪೌರಾಡಳಿತ ಸಂಸ್ಥೆಗಳಿಂದ ಆನ್‌ ಲೈನ್ ವರದಿ ಪಡೆದುಕೊಳ್ಳುತ್ತದೆ. ಘನತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ಪ್ಲಾಸ್ಟಿಕ್‌ ನಿರ್ಮೂಲನೆ, ಕಾರ್ಯಕ್ರಮದ ವಿವರ ಪಡೆಯಲಾಗುತ್ತದೆ. ಜಾಗೃತಿ ಈ ವರದಿಯ ಹೊರತಾಗಿಯೂ ಸರಕಾರದ ಏಜೆನ್ಸಿಯಿಂದ ಪ್ರತ್ಯೇಕ ಕ್ಷೇತ್ರ ಕಾರ್ಯ ನಡೆಯುತ್ತದೆ. ಡಂಪಿಂಗ್‌ ಯಾರ್ಡ್‌, ತ್ಯಾಜ್ಯ ಸಂಗ್ರಹ, ತ್ಯಾಜ್ಯ ಸಂಸ್ಕರಣೆ, ಪ್ಲಾಸ್ಟಿಕ್‌ ನಿರ್ಮೂಲನೆ ಇತ್ಯಾದಿಗಳನ್ನು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಿದೆ.

ಜನಮತ ಸಂಗ್ರಹ

ಸಾರ್ವಜನಿಕರು ವೆಬ್‌ಸೈಟ್‌ ಪ್ರವೇಶಿಸಿ ಪುತ್ತೂರಿನ ಪ್ರಗತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ದಾಖಲಿಸಬಹುದು. ವೆಬ್‌ಸೈಟ್‌ನ ಆನ್‌ಲೈನ್‌ ಲಿಂಕ್‌ಗಳು, ಕ್ಯೂಆರ್‌ ಕೋಡ್‌ ಇದ್ದು ಸಾರ್ವಜನಿಕರು ಇದನ್ನು ಬಳಸಿ ಉತ್ತರ ದಾಖಲಿಸಲ ಅವಕಾಶ ಕಲ್ಪಿಸಲಾಗಿದೆ.

https://ss-cf.sbmurban. org/#/feedback ಇದು ವೆಬ್‌ ಸೈಟ್‌ ಆಗಿದೆ. ಮಾಸಿಕ ವರದಿ, ಕ್ಷೇತ್ರ ಕಾರ್ಯದ ವರದಿ ಮತ್ತು ಸಿಟಿಜನ್‌ ಫೀಡ್‌ಬ್ಯಾಕ್‌ ಈ ಮೂರು ಅಂಶಗಳನ್ನು ಕ್ರೋಢೀಕರಿಸಿದ ಬಳಿಕ ಕೇಂದ್ರ ಸರಕಾರ ಪ್ರಶಸ್ತಿ ಘೋಷಿಸಲಿದೆ.

ಪ್ರಶ್ನಾವಳಿಗಳಿಗೆ ಉತ್ತರಿಸಿ

ಕ್ಯೂಆರ್‌ ಕೋಡ್‌ಗೆ ಮೊಬೈಲ್‌ ಕೆಮರಾದ ಮೂಲಕ ವೆಬ್‌ ಪೇಜ್‌ ತೆರೆದುಕೊಳ್ಳುತ್ತದೆ. ಇದರಲ್ಲಿ ರಾಜ್ಯ, ಜಿಲ್ಲೆ ಪೌರಾಡಳಿತ ಸಂಸ್ಥೆ ಆಯ್ಕೆ ಮಾಡಿಕೊಂಡು ಬಳಿಕ ಸ್ವವಿವರ ದಾಖಲಿಸಿ, ಪ್ರಶ್ನಾವಳಿಗಳಿಗೆ ಉತ್ತರಿಸಿ, ಒಟಿಪಿ ನಮೂದಿಸಬೇಕು. ಅಲ್ಲಿಗೆ ಸಿಟಿಜನ್‌ ಫೀಡ್‌ಬ್ಯಾಕ್‌ ಪೂರ್ಣಗೊಳ್ಳುತ್ತದೆ. ವೋಟಿಂಗ್‌ ಮಾಡಲು ಎ.30 ಕೊನೆಯ ದಿನವಾಗಿದೆ.

ಅಭಿಪ್ರಾಯ ದಾಖಲಿಸಬಹುದು

ಸ್ವಚ್ಛ ಪುತ್ತೂರು ನಿರ್ಮಾಣಕ್ಕಾಗಿ ನಗರಸಭೆ ಮೂಲಕ ಹಲವು ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರವು ಅತ್ಯಗತ್ಯ. ಈಗಾಗಲೇ ಶಾಶ್ವತ ಕ್ರಮಗಳ ಅನುಷ್ಠಾನ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ. ಸ್ವಚ್ಛ ಸರ್ವೇಕ್ಷಣ ಮೂಲಕ ಜನರಿಗೆ ಅಭಿಪ್ರಾಯ ದಾಖಲಿಸಬಹುದು. – ಜೀವಂಧರ್‌ ಜೈನ್‌, ಅಧ್ಯಕ್ಷ, ನಗರಸಭೆ ಪುತ್ತೂರು

ದ್ವಿತೀಯ ಸ್ಥಾನದಲ್ಲಿದೆ

ಸ್ವಚ್ಛ ಸರ್ವೇಕ್ಷಣ 2022 ರ ಆಯ್ಕೆಗಾಗಿ ನಗರದಲ್ಲಿ ಆನ್‌ಲೈನ್‌ ಜನಮತ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕಾಗಿ ಕ್ಯೂಆರ್‌ ಕೋಡ್‌ ಕೂಡ ಇದೆ. ಕೆಲವು ದಿನಗಳ ಹಿಂದಿನ ಅಂಕಿ ಅಂಶದ ಪ್ರಕಾರ ಪುತ್ತೂರು ನಗರಸಭೆ ದ್ವಿತೀಯ ಸ್ಥಾನದಲ್ಲಿದೆ. ಎ.30 ರ ತನಕ ವೋಟಿಂಗ್‌ ಮಾಡಲು ಅವಕಾಶ ಇದೆ. – ಮಧು ಎಸ್‌. ಮನೋಹರ್‌, ಪೌರಾಯುಕ್ತ ನಗರಸಭೆ ಪುತ್ತೂರು

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwala: ಶರಣ್ ಪಂಪುವೆಲ್ ಗೆ ಸವಾಲು ಹಾಕಿದ ಶರೀಫ್: ಬಂಟ್ವಾಳದಲ್ಲಿ ಬಿಗುವಿನ ವಾತಾವರಣ

Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ

police

Eid Milad: ರ್‍ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ

Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ

ಸುಳ್ಯ: ಬೈಕ್‌ ಗಳ ನಡುವೆ ಅಪಘಾತ

Sullia: ಬೈಕ್‌ ಗಳ ನಡುವೆ ಅಪಘಾತ

Arack

ವಿಟ್ಲ: ಅಡಿಕೆ ಸುಲಿಯುವ ಯಂತ್ರ ಕಂಡು ಹಿಡಿದ ನರಸಿಂಹ ಭಟ್‌ ವಿಧಿವಶ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.