ಹಳ್ಳಿಗಳ ವಿಂಗಡಣೆ: ಹೋರಾಟ ಮುಂದುವರಿಕೆ

ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಬರುವಂತೆ ಹಳ್ಳಿಗಳ ವಿಂಗಡಣೆ ಮಾಡಿ 

Team Udayavani, Apr 26, 2022, 3:30 PM IST

18

ತೇರದಾಳ: ತಾಲೂಕಿಗೆ ಹಳ್ಳಿಗಳ ವಿಂಗಡಣೆ ಕುರಿತು ಪಟ್ಟಣದ ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಪಟ್ಟಣದ ವ್ಯಾಪಾರಸ್ಥರು, ಸಂಘ ಸಂಸ್ಥೆಯವರು ಹಾಗೂ ಪ್ರಮುಖರ ಸಭೆ ಜರುಗಿತು.

ತೇರದಾಳ ಹೊಸ ತಾಲೂಕಿಗೆ ಹೋಬಳಿಯ ಅರ್ಧ ಹಳ್ಳಿಗಳನ್ನು ಅಥವಾ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಬರುವಂತೆ ಆಗ್ರಹಿಸಿ, ಜಾತಿ-ಪಕ್ಷಭೇದ ಬಿಟ್ಟು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸುವುದನ್ನು ಠರಾಯಿಸಲಾಯಿತು.

ಸಭೆಯಲ್ಲಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಮಾತನಾಡಿ, ಕಳೆದ 5 ದಶಕಗಳಿಂದ ನಡೆದು ಬಂದ ಹೋರಾಟದ ಕುರಿತು ಹಾಗೂ ತಾಲೂಕು ಎಂದು ಘೋಷಣೆಗೊಂಡರೂ ಪಟ್ಟಣಕ್ಕೆ ಕಳೆದ 3 ವರ್ಷಗಳಿಂದ ಹಳ್ಳಿಗಳ ವಿಂಗಡಣೆ ಮಾಡದೆ ವ್ಯವಸ್ಥಿತವಾಗಿ ಅನ್ಯಾಯವಾಗುತ್ತಿದೆ. ಈಗ ತೇರದಾಳ ಹೋಬಳಿಯ 32 ಹಳ್ಳಿಗಳಲ್ಲಿ ಪಟ್ಟಣ ಹಾಗೂ ಕಲ್ಲಟ್ಟಿ ಭಾಗ ಸೇರಿದಂತೆ ಕೇವಲ 9 ಊರುಗಳನ್ನು ಮಾತ್ರ ತೇರದಾಳ ತಾಲೂಕಿಗೆ ಜೋಡಿಸುವ ಮೂಲಕ ಚಿಕ್ಕ ತಾಲೂಕಾಗಿಸಲು ಕೆಲ ಕಾಣದ ಕೈಗಳು ಪ್ರಯತ್ನಿಸುತ್ತಿವೆ ಎಂದರು.

ಈಗ ಐದು ಗ್ರಾಪಂ ವ್ಯಾಪ್ತಿಯ ಏಳು ಹಳ್ಳಿಗಳನ್ನು ಮಾತ್ರ ಸೇರ್ಪಡೆ ಮಾಡಲು ಮುಂದಾಗಿದ್ದಾರೆ. ಇದು ತೇರದಾಳ ಜನತೆಗೆ ಮಾಡುತ್ತಿರುವ ಅನ್ಯಾಯ. ಆದ್ದರಿಂದ ಸರಕಾರದ ನಿಯಮಾನುಸಾರ ಒಂದು ಲಕ್ಷ ಜನಸಂಖ್ಯೆ ಹೊಂದುವ ಹಾಗೆ ಹಳ್ಳಿಗಳ ವಿಂಗಡಣೆ ಮಾಡಬೇಕು. ನಮ್ಮ ಹೋಬಳಿಯಲ್ಲಿನ ಅರ್ಧ ಹಳ್ಳಿಗಳನ್ನು ಹಾಗೂ ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಕೊಡುವಂತೆ ಪ್ರಯತ್ನ ಮಾಡಬೇಕಾಗಿದೆ. ಮತ್ತೆ ಇನ್ನೊಂದು ತಾಲೂಕು ಆದರೆ ಆಗ ನಿಯಮಾನುಸಾರ ಮತ್ತೇ ಹಳ್ಳಿಗಳ ವಿಂಗಡಣೆ ಮಾಡಲು ಬರುತ್ತದೆ. ಅದಕ್ಕಾಗಿ ಮುಂದೆ ಪಟ್ಟಣದ ಜನತೆ ಹೋರಾಟ ಮಾಡಬೇಕೋ, ಬೇಡವೋ ಎಂಬುದನ್ನು ಚರ್ಚಿಸೋಣ ಎಂದರು.

ಡಾ| ಎಂ.ಎಸ್‌. ದಾನಿಗೊಂಡ, ಪ್ರವೀಣ ನಾಡಗೌಡ, ಪ್ರಭು ಗಸ್ತಿ, ಪಿ.ಎಸ್‌. ಮಾಸ್ತಿ, ನೇಮಣ್ಣ ಸಾವಂತನವರ, ಮಾಶೂಮ್‌ ಇನಾಮ್‌ದಾರ್‌, ಶೆಟ್ಟೆಪ್ಪ ಸುಣಗಾರ, ಯಾಶೀನ ಸಾತಬಚ್ಚೆ, ರವಿ, ಸಲಬನ್ನವರ, ಪ್ರಕಾಶ ಧುಪದಾಳ, ಉಸ್ಮಾನ ಮುಜಾವರ, ಸಿದ್ದು ದೊಡಮನಿ, ಎಂ.ಸಿ. ತೆಳಗಿನಮನಿ ಮಾತನಾಡಿದರು.

ಹೋರಾಟ ಸಮಿತಿಯ ಅಧ್ಯಕ್ಷ ಭುಜಬಲಿ ಕೆಂಗಾಲಿ, ಭೀಮಗೊಂಡ ಸದಲಗಿ, ಸುರೇಶ ಕಬಾಡಗಿ, ಮಾರುತಿ ಗುರವ, ಮಲ್ಲಿನಾಥ ಬೊಳಗೊಂಡ, ತುಳಜಪ್ಪ ಅಥಣಿ, ರಾಯಪ್ಪಣ್ಣ ಕುಂಬಾರ, ತಿಮ್ಮಣ್ಣ ಗಾಡಿವಡ್ಡರ, ಎಸ್‌.ವ್ಹಿ. ಗೋಠೆಕರ, ನಾರಾಯಣ ಪತ್ತಾರ, ದಯಾನಂದ ಕಾಳೆ, ಸಮಾಜಗಳ ಮುಖಂಡರು, ಹೋರಾಟ ಸಮಿತಿಯವರು, ಯುವಕರು ಉಪಸ್ಥಿತರಿದ್ದರು.

ತೇರದಾಳ ಹೊಸ ತಾಲೂಕಿಗೆ ಹೋಬಳಿಯ ಅರ್ಧ ಹಳ್ಳಿಗಳನ್ನು ಅಥವಾ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಬರುವಂತೆ ಆಗ್ರಹಿಸಿ, ಜಾತಿ-ಪಕ್ಷಭೇದ ಬಿಟ್ಟು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಾಗುವುದು ಎಂದು ಬಸವರಾಜ ಬಾಳಿಕಾಯಿ ಘೋಷಿಸಿದರು.

ಟಾಪ್ ನ್ಯೂಸ್

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.