12 ದಿನವೂ KGF 2 ದಾಖಲೆ ಕಲೆಕ್ಷನ್: ರಾಜಮೌಳಿಯ ಬಾಹುಬಲಿ 2, ದಂಗಲ್ ದಾಖಲೆ ಮೀರಿಸಲಿದೆಯೇ?

ಕೆಜಿಎಫ್ ಚಾಪ್ಟರ್ 2 ಕನ್ನಡ ಸಿನಿಮಾ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿಗೆ ಡಬ್ ಮಾಡಲಾಗಿತ್ತು.

Team Udayavani, Apr 27, 2022, 11:08 AM IST

thumb 7

ನವದೆಹಲಿ: ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ನಿರೀಕ್ಷೆಗೂ ಮೀರಿ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನದ ಓಟವನ್ನು ಮುಂದುವರಿಸಿದೆ. ಮಾಸ್ ಎಂಟರ್ ಟೈನರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುತ್ತಿದ್ದು, ಇದೀಗ ಅಮೀರ್ ಖಾನ್ ಅಭಿನಯದ ದಂಗಲ್  ಹಾಗೂ ಬಾಹುಬಲಿ 2 ಸಿನಿಮಾದ ದಾಖಲೆಯನ್ನು ಮುರಿಯಲು ಸಜ್ಜಾಗುತ್ತಿದೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರು, ಅಭಿಮಾನಿಗಳು ವೀಕ್ಷಿಸುವ ಮೂಲಕ ಭರ್ಜರಿ ಯಶಸ್ಸು ಕಾಣಲಿದೆ ಎಂದು ಹಲವಾರು ಟ್ರೇಡ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಸಿನಿಮಾ ಮಾರುಕಟ್ಟೆ ವಿಶ್ಲೇಷಕ ಮನೋಬಲ ವಿಜಯ್ ಬಾಲನ್ ಅವರು ಕೆಜಿಎಫ್ ಚಾಪ್ಟರ್ 2 ಕೇವಲ 12 ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ 900 ಕೋಟಿ ರೂಪಾಯಿ ಗಳಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

2016ರಲ್ಲಿ ಬಾಲಿವುಡ್ ನಲ್ಲಿ ತೆರೆ ಕಂಡಿದ್ದ ದಂಗಲ್ ಸಿನಿಮಾ ಜಾಗತಿಕವಾಗಿ ಅಂದಾಜು ಒಟ್ಟು 2,036 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. 2017ರಲ್ಲಿ ತೆರೆಕಂಡಿದ್ದ ಬಾಹುಬಲಿ 2 ವಿಶ್ವಾದ್ಯಂತ ಒಟ್ಟು 1,810 ಕೋಟಿ ರೂಪಾಯಿ, RRR 1114 ಕೋಟಿ ರೂ. ಗಳಿಸಿತ್ತು. ಕೆಜಿಎಫ್ ಚಾಪ್ಟರ್ 2 ಸಿನಿಮಾ ಇನ್ನೂ ಕೆಲವು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ದಂಗಲ್ (ಬಾಲಿವುಡ್ ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ 2ನೇ ಹಿಂದಿ ಸಿನಿಮಾ), ಟೈಗರ್ ಜಿಂದಾ ಹೈ (ಹೆಚ್ಚು ಗಳಿಕೆ ಕಂಡ 5ನೇ ಸಿನಿಮಾ), ಪಿಕೆ (ಹೆಚ್ಚು ಗಳಿಕೆ ಕಂಡ 4ನೇ ಸಿನಿಮಾ) ಮತ್ತು ಸಂಜು (ಹೆಚ್ಚು ಗಳಿಕೆ ಕಂಡ ಮೂರನೇ ಸಿನಿಮಾ) ಚಿತ್ರದ ದಾಖಲೆಯನ್ನು ಮೀರಿಸಲಿದೆ. ಈವರೆಗೆ ಕೆಜಿಎಫ್ ಚಾಪ್ಟರ್ 2 ಹಿಂದಿಯಲ್ಲಿ 329.40 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ನಲ್ಲಿ ವಿವರಿಸಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಕನ್ನಡ ಸಿನಿಮಾ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿಗೆ ಡಬ್ ಮಾಡಲಾಗಿತ್ತು. ಇದೀಗ ಪ್ಯಾನ್ ಇಂಡಿಯಾ ನೆಲೆಯಲ್ಲಿ ತೆರೆ ಕಂಡ ಈ ಸಿನಿಮಾ ಎಲ್ಲಾ ದಾಖಲೆಯನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಬಾಲಕೃಷ್ಣ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾ ನಿರ್ದೇಶಿಸಿದ್ದು, ವಿಜಯ್ ಕಿರುಗುಂದೂರ್ ಚಿತ್ರದ ನಿರ್ಮಾಪಕ.

ಟಾಪ್ ನ್ಯೂಸ್

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.