ಅವತಾರದಲ್ಲಿ ತಾರಾ ದಂಡು
Team Udayavani, Apr 27, 2022, 1:20 PM IST
ಶರಣ್ ನಾಯಕರಾಗಿರುವ, ಸುನಿ ನಿರ್ದೇಶನದ “ಅವತಾರ್ ಪುರುಷ’ ಚಿತ್ರ ಮೇ 6ರಂದು ಬಿಡುಗಡೆಯಾಗುತ್ತಿದೆ.
ಈಗಾಗಲೇ ಪುಷ್ಕರ್ ತಮ್ಮ ಅನೇಕ ಸ್ನೇಹಿತರಿಗೆ ಸಿನಿಮಾ ತೋರಿಸಿದ್ದು, ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ನಿರ್ಮಾಪಕ ಪುಷ್ಕರ್ ಮೊಗದಲ್ಲಿ ನಗು ಮೂಡಿದೆ. ಇನ್ನು “ಅವತಾರ್ ಪುರುಷ’ ಚಿತ್ರದ ತಾರಾಬಳಗ ಕೂಡಾ ದೊಡ್ಡದಾಗಿದೆ. ಶರಣ್, ಆಶಿಕಾ,ಸಾಯಿ ಕುಮಾರ್, ಆಶುತೋಷ್ ರಾಣಾ, ಸುಧಾರಾಣಿ ಮುಂತಾದ ಕಲಾವಿದರ ಬಳಗ ಈ ಚಿತ್ರದಲ್ಲಿದೆ. ಪ್ರತಿಯೊಬ್ಬರ ಪಾತ್ರಕ್ಕೂ ಮಹತ್ವವಿದೆ ಯಂತೆ. ಇನ್ನು, ಈ ಚಿತ್ರ ಎರಡು ಪಾರ್ಟ್‌ಗಳಲ್ಲಿ ಮೂಡಿಬಂದಿದೆ.
ತಮ್ಮ ಹೊಸಚಿತ್ರದ ಬಗ್ಗೆ ಮಾತನಾಡುವ ನಟ ಶರಣ್, “ಇಲ್ಲಿಯವರೆಗೆ ನೀವು ನೋಡಿರದ ಹೊಸ ಶರಣ್‌ನನ್ನು ಈ ಚಿತ್ರದಲ್ಲಿ ನೋಡುತ್ತೀರಿ. ನನ್ನ ಹಿಂದಿನ ಚಿತ್ರಗಳಂತೆ ಇದು ಕೂಡ ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಪುಷ್ಕರ್ ಸ್ಟೈಲ್, ಶರಣ್ ಮ್ಯಾನರಿಸಂ, ಸುನಿ ಫ್ಲೇವರ್ ಕಾಣಬಹುದು. ಚಿತ್ರದಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅದೇನು ಅಂತ ಈಗಲೇ ಹೇಳಿದ್ರೆ ಅದರ ಸ್ವಾರಸ್ಯ ಕಡಿಮೆಯಾಗಬಹುದು. ಹಾಗಾಗಿ ಆ ಗುಟ್ಟು ಮಾತ್ರ ಬಿಟ್ಟು ಕೊಡಲಾರೆ. ಒಟ್ಟಾರೆ ಇದರಲ್ಲಿ ಕಾಮಿಡಿ, ರೊಮ್ಯಾನ್ಸ್ ಸೇರಿದಂತೆ ಮನರಂಜಿಸಲು ಬೇಕಾದ ಅಂಶಗಳಿಗಂತೂ ಕೊರತೆ ಇಲ್ಲ. ನಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ಇದು ಭಿನ್ನವಾದ ಚಿತ್ರ. ನೋಡುಗರಿಗೂ ಈ ಕಾನ್ಸೆಪ್ಟ್ ಇಷ್ಟವಾಗುವುದೆಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಶರಣ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.