ಕೊರಟಗೆರೆಯಿಂದ ಸುಧಾಕರ ಲಾಲ್ ರನ್ನು ಮತ್ತೆ ಗೆಲ್ಲಿಸಿ : ಹೆಚ್ ಡಿಡಿ ಕರೆ
Team Udayavani, Apr 27, 2022, 5:32 PM IST
ಕೊರಟಗೆರೆ : ರಾಜ್ಯದಲ್ಲಿನ ರೈತರಿಗೆ ಮತ್ತು ಜನತೆಗೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನನ್ನ ರಾಜಕೀಯ ಜೀವನದ 60 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದು ಜನತಾ ಜಲಧಾರೆ ಮುಖಾಂತರ ಇನ್ನಷ್ಟು ಯೋಜನೆಗಳನ್ನು ತರಲು ಪಣ ತೋಟ್ಟಿರುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.
ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳನ್ನು ನನ್ನ ಅಧಿಕಾರ ಅವಧಿಯಲಿ ಜಾರಿಗೊಳಿಸಲಾಗಿದೆ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಡಳಿತದಲ್ಲಿ ಈ ಯೋಜನೆಗಳಿಗೆ ಸಹಕಾರ ಸಿಗಲಿಲ್ಲ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಜನರು ತರಬೇಕಿದ್ದು ಈ ನಿಟ್ಟಿನಲ್ಲಿ ಕೊರಟಗೆರೆ ಕ್ಷೇತ್ರದಿಂದ ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್ ರವರನ್ನು ಮತ್ತೆ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬದವರಿಂದ ತುಮಕೂರು ಜಿಲ್ಲೆಗೆ ಯಾವುದೇ ರೀತಿ ನೀರಾವರಿ ಯೋಜನೆಯಲ್ಲಿ ಅನ್ಯಾಯವಾಗಿಲ್ಲ, ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ನಮ್ಮ ಮೇಲೆ ವೃತಾ ಆರೋಪ ಮಾಡುತ್ತಿದ್ದಾರೆ, 1962 ರಲ್ಲಿ ಪಕ್ಷೇತರ ಶಾಸಕರಾಗಿ ರಾಜಕೀಯಕ್ಕೆ ಬಂದ ದೇವೇಗೌಡರ ನೀರಾವರಿ ಹೋರಾಟದಿಂದ ತುಮಕೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನುಕೂಲವಾಗಿದೆ, ಇವರ ಹೋರಾಟದ ಫಲದಿಂದ ನಿರ್ಮಾಣವಾದ ಹೇಮಾವತಿ ಮತ್ತು ಹಾರಂಗಿ ಜಲಾಶಯದಿಂದ ಹಾಸನ ಜಿಲ್ಲೆಗೆ 1 ಲಕ್ಷ 25 ಸಾವಿರ ಹೆಕ್ಟೇರ್ ಭೂಮಿಯೂ ನೀರಾವರಿಯಾದರೆ ತುಮಕೂರು ಜಿಲ್ಲೆಗೆ 3.25 ಸಾವಿರ ಹೆಕ್ಟೇರ್ ಭೂಮಿಯು ನೀರಾವರಿಯಾಗಿದೆ. ಎತ್ತಿನಹೋಳೆ ಯೋಜನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ಹಣವನ್ನು ಲೂಟಿ ಮಾಡುವ ಕೆಲಸ ಮಾಡಿದೆಯೇ ಹೊರತು ರೈತರ ಭೂಮಿಗೆ ಹಣ ನೀಡಲಿಲ್ಲ, ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಕೊರಟಗೆರೆ ಕ್ಷೇತ್ರದ ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಜನೆಯಲ್ಲಿ ಸಮಾನ ಹಣ ನೀಡಬೇಕೆಂದು ತೀರ್ಮಾನಿಸಿದರೂ ಕಾಂಗ್ರೆಸ್ ಪಕ್ಷದವರು ಹಣ ನೀಡಲು ಪಟ್ಟು ಹೊಟ್ಟೆ ಉರಿ ಪಟ್ಟುಕೊಂಡರು, ಭದ್ರಾ ಮೇಂಲ್ದಡೆ ಯೋಜನೆ ಜಾರಿಗೆ ತಂದಿದ್ದು ದೇವೇಗೌಡರು ಈಗ ರಾಜ್ಯದ ಹಲವು ನದಿಗಳ ನೀರು ವ್ಯರ್ಥವಾಗಿ ಸಮುಂದ್ರ ಸೇರುತ್ತಿದ್ದು ಅವುಗಳನ್ನು ಜನರಿಗೆ ನೀಡಲು ಜೆಡಿಎಸ್ ಪಕ್ಷಕ್ಕೆ 125 ಶಾಸಕರ ಅವಶ್ಯಕತೆ ಇದೆ ಎಂದರು. ಮುಂಬರುವ 2023 ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಸುಧಾಕರ ಲಾಲ್ ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಇದರಲ್ಲಿ ಯಾವುದೇ ಗೊಂದಲ ಮತ್ತು ಊಹಾಪೋಹ ಗಳು ಇಲ್ಲ. ಅವರನ್ನು ಗೆಲ್ಲಿಸಿಕೊಂಡುವಂತೆ ಕರೆ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಪ್ರಚಾರಮಾಡಿ ಅಲ್ಪಸಂಖ್ಯಾತರ ಮತಗಳನ್ನು ಕಾಂಗ್ರೆಸ್ ಪಡೆಯುತ್ತಿತ್ತು, ಆದರೆ ಈ ಬಾರಿ ಹಾಗೆ ಆಗುವುದಿಲ್ಲಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಬಿಜೆಪಿಯವರೊಂದಿಗೆ ಕೈ ಜೋಡಿಸಿದರು ಇದನ್ನು ಮಧುಗಿರಿಯಲ್ಲಿ ಕಂಡು ನಾನೇ ದೇವೇಗೌಡರಿಗೆ ತಿಳಿಸಿ ಸಮಾರಂಭದ ಅರ್ಧದಲ್ಲಿ ಹೊರ ನಡೆದೆ, ಮುಂಬರುವ ೨ಂ೨೩ ರ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ, ಕೊರಟಗೆರೆ ಕ್ಷೇತ್ರದಿಂದ ಸುಧಾಕರಲಾಲ್ ರವರನ್ನು ಗೆಲಿಸಬೇಕು ಎಂದರು.
ಮಾಜಿ ಶಾಸಕ ಪಿ.ಆರ್. ಸುಧಾಕರಲಾಲ್ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರು ರೈತರ ನೀರಾವರಿಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟು ಹೋರಾಟ ಮಾಡಿದ್ದಾರೆ, ಜನತಾ ಜಲಧಾರೆಯಲ್ಲಿ ರಾಜ್ಯದಲ್ಲಿ ರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕಾರ್ಯಕ್ರಮವಾಗಿದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಂಮಿಶ್ರ ಸರ್ಕಾರದಲ್ಲಿ ರೈತರ ೨೫ ಸಾವಿರ ಕೋಟಿ ಸಾಲ ಮನ್ನಾ ಮಾಡಿದರು, ಕರ್ನಾಟಕ ದ ಪಾಲಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ನೀರಾವರಿ ಭಗೀರಥರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಮಾಜಿ ಜಿ.ಪಂ.ಅಧ್ಯಕ್ಷೆ ಕುಸುಮಾ, ಪ್ರೇಮಾ, ಮಾಜಿ ಸದಸ್ಯರುಗಳಾದ ಶಿವರಾಮಯ್ಯ, ಪ.ಪಂ.ಅಧ್ಯಕ್ಷೆ ಕಾವ್ಯಶ್ರೀ ರಮೇಶ್, ಉಪಾಧ್ಯಕ್ಷೆ ಭಾರತಿ ಸಿದ್ದಮಲ್ಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು, ಸದಸ್ಯರುಗಳಾದ ಕೆ.ಎನ್.ಲಕ್ಷ್ಮೀ ನಾರಾಯಣ್, ಪುಟ್ಟನರಸಯ್ಯ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಯುವ ಅಧ್ಯಕ್ಷ ವೆಂಕಟೇಶ್, ಮುಖಂಡರುಗಳಾದ ವಿ.ಕೆ.ವೀರಕ್ಯಾತರಾಯ, ಕುದುರೆ ಸತ್ಯನಾರಾಯಣ್, ಕೇಬಲ್ ಸೈಪುಲ್ಲಾ, ಕಲೀಂ, ಪ್ರಕಾಶ್, ಮಂಜುನಾಥ್, ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
Kerala:ಧರ್ಮ ಆಧಾರಿತ ವಾಟ್ಸಾಪ್ ಗ್ರೂಪ್ ರಚನೆ ಆರೋಪ; ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.