ವೃದ್ಧೆಗೆ ಒದ್ದು ಕಾಲುಮುರಿದ ಒಂಟಿ ಸಲಗ
ಸೊಂಡಲಿನಿಂದ ತಿವಿದು, ಒದ್ದು ಓಡಿಹೋಯಿತು. ಸಲಗದ ಒದೆತ ದಿಂದ ತೀವ್ರ ಗಾಯಗೊಂಡು ವೃದ್ದೆ ಜ್ಞಾನತಪ್ಪಿದರು.
Team Udayavani, Apr 27, 2022, 5:40 PM IST
ಹುಣಸೂರು: ಒಂಟಿಕೊಂಬಿನ ಸಲಗದ ದಾಳಿಗೆ ವೃದ್ಧೆಯೊಬ್ಬರು ಕಾಲು ಮುರಿದುಕೊಂಡಿರುವ ಘಟನೆ ಹನಗೋಡು ಭಾಗದ ಹರಳಹಳ್ಳಿ ಬಳಿ ನಡೆದಿದೆ. ಸೋಮವಾರದಂದು ಮೂರು ಕಾಡಾನೆಗಳ ಹಿಂಡು ಜನರಿಂದ ಕಾಡಿಸಿಕೊಂಡು ರಾತ್ರಿ ಕಾಡು ಸೇರಿಕೊಂಡರೆ, ಮಂಗಳವಾರ ಹನಗೋಡು ಭಾಗದ ಹರಳಹಳ್ಳಿ ಬಳಿಯಿಂದ ಒಂಟಿ ಕೊಂಬಿನ ಸಲಗವು ಜನರನ್ನು ಕಾಡಿಸಿದ್ದಲ್ಲದೆ, ದನಗಾಹಿ ವೃದ್ಧ ಮಹಿಳೆ ಹರಳಹಳ್ಳಿಯ ಪುಟ್ಟಲಕ್ಷ್ಮಮ್ಮ (60) ಮೇಲೆ
ದಾಳಿ ನಡೆಸಿ, ನಾಗಾಪುರದ ವುಡ್ ಲಾಟ್‌ನಲ್ಲಿ ಸೇರಿಕೊಂಡರೂ ರಾತ್ರಿ ವೇಳೆಗೆ ಉದ್ಯಾನದ ರೈಲ್ವೆ ಹಳಿ ಗೇಟ್ ತೆರೆದು ಕಾಡಿಗೆ ಸೇರಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾದರು.
ದನಗಳಂತೆ ಅಟ್ಟಾಡಿಸಿದರು: ಇಲ್ಲಿ ಕಾಡಾನೆಗಳ ನಿತ್ಯ ಹಾವಳಿಯಾದರೂ ಮಂಗಳವಾರ ಮಾತ್ರ ಒಂಟಿ ಕೊಂಬಿನ ಸಲಗ ಕಾಣಿಸಿಕೊಂಡು ಗ್ರಾಮ ಸ್ಥರಲ್ಲಿ ಭೀತಿ ಹುಟ್ಟಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ 500ಕ್ಕೂ ಹೆಚ್ಚು ಗ್ರಾಮಸ್ಥರು, ಯುವ ಪಡೆ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ಸಲಗವನ್ನು ಕಾಡಿಗಟ್ಟಲು ಹರಸಾಹಸ ಪಟ್ಟರು. ಜನರ ಕೂಗಾಟದಿಂದ ಬೆದರಿದ ಸಲಗ ಅತ್ತಿಂದಿತ್ತ ಓಡಾಡುತ್ತಾ ಅದ್ವಾಳ ಕೆರೆ ಬಳಿ ಸೇರಿಕೊಂಡಿತು.
ಮಹಿಳೆ ಮೇಲೆ ದಾಳಿ: ಅರಣ್ಯ ಸೇರಿಕೊಳ್ಳುವ ಆತುರದಲ್ಲಿದ್ದ ಸಲಗವು ಅದ್ವಾಳು ಕೆರೆ ಬಳಿ ತಮ್ಮ ಜಾನುವಾರು ಮೇಯಿಸುತ್ತಿದ್ದ ಹರಳಹಳ್ಳಿಯ ವೃದ್ಧೆ ಪುಟ್ಟಲಕ್ಷ್ಮಮ್ಮ(60) ಅವರನ್ನು ಸೊಂಡಲಿನಿಂದ ತಿವಿದು, ಒದ್ದು ಓಡಿಹೋಯಿತು. ಸಲಗದ ಒದೆತ ದಿಂದ ತೀವ್ರ ಗಾಯಗೊಂಡು ವೃದ್ದೆ ಜ್ಞಾನತಪ್ಪಿದರು.
ನಂತರ ಅರಣ್ಯ ಸಿಬ್ಬಂದಿ ಮಹಿಳೆಗೆ ನೀರು ಕುಡಿಸಿ ಉಪಚರಿಸಿ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು ಎಡಗಾಲು ಮುರಿದಿದೆ.
ಕೊನೆಗೂ ಕಾಡು ಸೇರಿತು: ಸ್ಥಳಕ್ಕೆ ಎಸಿಎಫ್ ಸತೀಶ್, ಆರ್‌ಎಫ್‌ಒ ನಮನ್ ನಾರಾಯಣ್ ನಾಯ್ಕ, ಡಿಆರ್‌ಎಫ್‌ಒಗಳಾದ ದ್ವಾರಕನಾಥ್, ಚಂದ್ರೇಶ್, ಅರಣ್ಯ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಸಂಜೆ ವೇಳೆಗೆ ನಾಗರಹೊಳೆ ಉದ್ಯಾನಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.
ಕಾಡಾನೆ ಕಾಟ ತಪ್ಪಿಸಿ: ಈ ಭಾಗದಲ್ಲಿ ನಿತ್ಯ ಕಾಡಾನೆಗಳ ಕಾಟದಿಂದ ರೈತರು ಕಂಗಾಲಾಗಿದ್ದು, ಬೆಳೆ, ಜೀವಹಾನಿಯೊಂದಿಗೆ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಈ ಭಾಗದಲ್ಲಿ ರೈಲ್ವೆ ಕಂಬಿ ತಡೆಗೋಡೆ ಪೂರ್ಣಗೊಳಿಸದೇ, ರೈತರು ಸಂಕಷ್ಟ ಎದುರಿಸಬೇಕಾಗಿದೆ. ಇನ್ನಾದರೂ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ, ಬೇಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.