ಅಂಕೋಲಾದಲ್ಲಿ ಆಪರೇಷನ್ ಮಂಗ: ಎರಡನೇ ದಿನವೂ ವಿಫಲ
ಮಂಗನ ದಾಳಿಯಿಂದ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಾಯ, ವೃದ್ಧೆ ಆಸ್ಪತ್ರೆಗೆ
Team Udayavani, Apr 27, 2022, 9:24 PM IST
Operation Monkey failed second day also in Ankola
ಅಂಕೋಲಾ : ತಾಲೂಕಿನ ಬೊಬ್ರವಾಡದಲ್ಲಿ ಸಾರ್ವಜನಿಕರಿಗೆ ಕಾಟ ಕೊಡುತ್ತಿರುವ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆಯು ಕೈಗೊಂಡ ಆಪರೇಷನ್ ಮಂಗ ಕಾರ್ಯಾಚರಣೆ ಎರಡನೆ ದಿನವೂ ವಿಫಲವಾಗಿದೆ.
ದಾಳಿ ಮಾಡಿ, ಉಪಟಳ ನೀಡುತ್ತಾ ಜನರಲ್ಲಿ ಭೀತಿ ಹುಟ್ಟಿಸಿದ್ದ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆ ಹಾಗೂ ಅರವಳಿಕೆ ತಜ್ಞರು ಸಾರ್ವಜನಿಕರ ಸಹಕಾರದೊಂದಿಗೆ ಎಷ್ಟೇ ತಂತ್ರಗಾರಿಕೆಯನ್ನು ಪ್ರಯೋಗಿಸಿದರೂ ಚಾಣಾಕ್ಷ ವಾನರ ತಪ್ಪಿಸಿಕೊಳ್ಳುತ್ತಿದೆ. ಮಂಗಳವಾರ ಇಡೀ ದಿನ ಪ್ರಯತ್ನಿಸಿ ವಿಫಲವಾದ ತಂಡ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿತು.
ಅರವಳಿಕೆ ಗನ್ ನಿಂದ ಶೂಟ್ ಮಾಡಲು ನಿರ್ದಿಷ್ಟ ಅಂತರದಲ್ಲಿ ಸಿಗಬೇಕು, ಆದರೆ ವಾನರ ಗನ್ ನೋಡುತ್ತಲೇ ಮರದ ಎತ್ತರಕ್ಕೆ ಏರುವುದು ಅಥವಾ ಸಂದಿಗ್ಧ ಸ್ಥಳದಲ್ಲಿ ಅಡಗಿಕೊಳ್ಳುತ್ತಿದೆ. ಗುರುವಾರ ಹೊರ ಜಿಲ್ಲೆಗಳಿಂದ ಇನ್ನೊಂದು ತಂಡ ಬರುತ್ತಿದೆ ಎನ್ನಲಾಗಿದೆ. ಮೂರನೇ ದಿನದ ಕಾರ್ಯಾಚರಣೆಯಲ್ಲಿ ಯಶ ಸಿಕ್ಕರೆ ಆತಂಕದಲ್ಲಿರುವ ಬೊಬ್ರುವಾಡದ ಜನತೆ ನಿಟ್ಟುಸಿರು ಬಿಡಬಹುದು.
ಈಗಾಗಲೇ ಮಂಗನ ಕಾಟದಿಂದ ಸುಮಾರು 10ಹೆಚ್ಚು ಜನರು ಗಾಯಗೊಂಡಿದ್ದಾರೆ. ಬುಧವಾರ ವೃದ್ದೆಯ ಮೇಲೆ ಎರಗಿದ ಕೋತಿ ವೃದ್ದೆಯನ್ನು ಕೆಡವಿ ಬಲವಾಗಿ ಗಾಯಗೊಳಿಸಿದೆ. ತಕ್ಷಣ ವೃದ್ಧೆಯನ್ನು ತಾಲ್ಲೂಕು ಆಸ್ಷತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.