ವಿಧಾನಸಭೆ ಚುನಾವಣೆ: ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ…


Team Udayavani, Apr 29, 2022, 7:30 AM IST

ವಿಧಾನಸಭೆ ಚುನಾವಣೆ: ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ…

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ  ಜತೆಗೆ 2024ರ ಲೋಕಸಭೆ ಚುನಾವಣೆ ಸ್ಪರ್ಧಾ ವಿಚಾರದ ಬಗ್ಗೆಯೂ ಮೂರೂ ಪಕ್ಷಗಳಲ್ಲಿ  ಲೆಕ್ಕಾಚಾರಗಳು ನಡೆಯುತ್ತಿದೆ.

ಪ್ರಸ್ತುತ ಶಾಸಕರಾಗಿರುವವರಲ್ಲಿ  ಕೆಲವರು ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಒಲವು ಹೊಂದಿದ್ದರೆ, ಮಾಜಿ ಹಾಗೂ ಹಾಲಿ ಸಂಸದರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿದರೆ  ಅವರ ಪುತ್ರ ಡಾ| ಯತೀಂದ್ರ ಅವರು ಲೋಕಸಭೆಗೆ ಮೈಸೂರಿನಿಂದ ಸ್ಪರ್ಧಿಸಲಿದ್ದಾರೆ.  ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನಸಭೆಗೆ ಬರಲು ಆಸಕ್ತಿ ಹೊಂದಿದ್ದು, ಕೆಜಿಎಫ್ ಅಥವಾ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧೆಗೆ ಒಲವು ತೋರಿದ್ದಾರೆ. ಅವರ ಪುತ್ರಿ ರೂಪಕಲಾ ಶಶಿಧರ್‌ ಕೋಲಾರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ನಲ್ಲಿರುವ ಮುದ್ದಹನುಮೇ ಗೌಡರು ಬಿಜೆಪಿಗೆ ಸೇರಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮುದ್ದಹನುಮೇ ಗೌಡರು ಬಿಜೆಪಿಯಿಂದ ಕಣಕ್ಕಿಳಿಯುವುದು ಖಚಿತವಾದರೆ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಚನ್ನಪಟ್ಟಣದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮತ್ತೂಂದೆಡೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈ ಬಾರಿ ಮೈಸೂರಿನಿಂದ ಸ್ಪರ್ಧಿಸಬೇಕೆಂಬ ಒತ್ತಡ ಪಕ್ಷದಲ್ಲಿ ಹೆಚ್ಚಾಗುತ್ತಿದೆ. ಆದರೆ ದೇವೇಗೌಡರಿಗೆ ತುಮಕೂರಿನಿಂದಲೇ ಕಣಕ್ಕಿಳಿಯುವ ಬಯಕೆಯಿದೆ. ಹಾಸನದಿಂದ ಪ್ರಜ್ವಲ್‌  ಅವರೇ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದು, ಕಾಂಗ್ರೆಸ್‌ನಿಂದ ಮಾಜಿ ಸಚಿವ ಎ.ಮಂಜು  ಅಭ್ಯರ್ಥಿಯಾಗಬಹುದು ಎನ್ನಲಾಗುತ್ತಿದೆ.

ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಲು  ಚಿಂತಿಸಿದ್ದು, ಗಾಂಧಿನಗರ ಅಥವಾ ಸರ್ವಜ್ಞನಗರ ಕ್ಷೇತ್ರದಿಂದ ಕಣಕ್ಕಿಳಿಯಬಹುದು. ಹಾಗಾದರೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ರಾಜೀವ್‌ ಚಂದ್ರಶೇಖರ್‌ ಕಣಕ್ಕಿಳಿಯಬಹುದು ಎನ್ನಲಾಗಿದೆ.

ಈ ನಡುವೆ ಮಾಜಿ ಸಚಿವ ಕೆ.ಜೆ.ಜಾರ್ಜ್‌ ತಮ್ಮ ಪುತ್ರ ರಾಣಾ ಜಾರ್ಜ್‌ನನ್ನು ಸರ್ವಜ್ಞನಗರದಿಂದ ವಿಧಾನಸಭೆಗೆ ಕಣಕ್ಕಿಳಿಸಿ ಅವರು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಂಸದರಾದ ಶೋಭಾ ಕರಂದ್ಲಾಜೆ, ಶಿವಕುಮಾರ್‌ ಉದಾಸಿ, ರಮೇಶ್‌ ಜಿಗಜಿಣಗಿ, ಉಮೇಶ್‌ ಜಾಧವ್‌ ಕೂಡ ವಿಧಾನಸಭೆ ಪ್ರವೇಶಕ್ಕೆ ಒಲವು ಹೊಂದಿದ್ದಾರೆ. ಕ್ಷೇತ್ರವನ್ನೂ ಗುರುತಿಸಿಕೊಂಡು ವರಿಷ್ಠರ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉದಾಸಿಯವರ ತಮ್ಮ ತಂದೆ ಪ್ರತಿನಿಧಿಸುವ ಹಾನಗಲ್‌, ಉಮೇಶ್‌ ಜಾಧವ್‌ ಚಿಂಚೋಳಿಯಿಂದ ಸ್ಪಧಿಸಬಹುದು. ಶೋಭಾ ಕರಂದ್ಲಾಜೆ  ವಿಧಾನಸಭೆಗೆ ಸ್ಪರ್ಧಿಸಿದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ ಹೆಗ್ಡೆ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.

ಹಳ್ಳಿಹಕ್ಕಿಗೆ ಕೈ ಕನವರಿಕೆ :

ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಮಾತುಗಳು ಕೇಳಿಬರುತ್ತಿರುವುದರಿಂದ ಜೆಡಿಎಸ್‌ನಿಂದ ನಿಖೀಲ್‌ ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತವಾಗಿದೆ. ಆದ್ದರಿಂದ ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಗೆ  ತಲಾಷೆ  ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಕುಟುಂಬದ ಸದಸ್ಯರೊಬ್ಬರು  ಅಭ್ಯರ್ಥಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದರ ನಡುವೆ ಹಳ್ಳಿಹಕ್ಕಿ ಖ್ಯಾತಿಯ ಎಚ್‌.ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದು, ಪೂರ್ವಭಾವಿ ಮಾತುಕತೆಗಳು ಪ್ರಾರಂಭವಾಗಿವೆ. ಬಿಜೆಪಿಯಲ್ಲಿ ಇದ್ದೂ ಇಲ್ಲದಂತಾಗಿರುವ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಕೆಲವು ನಾಯಕರು ಆಸಕ್ತಿ ವಹಿಸಿ ಸಿದ್ದರಾಮಯ್ಯ ಮನವೊಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

-ಎಸ್‌.ಲಕ್ಷ್ಮೀನಾರಾಯಣ

ಟಾಪ್ ನ್ಯೂಸ್

Mokshita-Trivik

BBK11: ಬಿಗ್ ಬಾಸ್ ಮನೆಯಲ್ಲಿ ಈ ವರೆಗೆ ಸೈಲೆಂಟ್ ಆಗಿದ್ದ ‘ಪಾರು’ ವೈಲೆಂಟ್ ಆಗಿದ್ದೇಕೆ?

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

iskon-Thirupathi

Hoax Call: ತಿರುಪತಿಯಲ್ಲಿ ಹೋಟೆಲ್‌ಗಳ ಬಳಿಕ ಈಗ ಇಸ್ಕಾನ್‌ ದೇಗುಲಕ್ಕೂ ಬೆದರಿಕೆ ಸಂದೇಶ!

BYV-yathnal

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

1-snehamayi

MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವಿಡಿಯೋ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ

Beluru

Sagara: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರದಿಂದ ಶೀಘ್ರವೇ ಪರಿಹಾರ: ಶಾಸಕ ಬೇಳೂರು

4

Panambur: ಮಾದಕ ವಸ್ತು ಸಾಗಾಟ-ಮಾರಾಟ ಪ್ರಕರಣ; ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

BYV-yathnal

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

1-snehamayi

MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವಿಡಿಯೋ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ

1-a-ranji

Malayalam; ಪುರುಷನ ಮೇಲೆ ಲೈಂಗಿ*ಕ ದೌರ್ಜನ್ಯ!: ನಿರ್ದೇಶಕ ರಂಜಿತ್ ಮೇಲೆ ಪ್ರಕರಣ ದಾಖಲು

HK-Patil

Waqf Property: ವಿಜಯಪುರದ ರೈತರಿಗೆ ಕೊಟ್ಟಿರುವ ನೋಟಿಸ್‌ ವಾಪಸ್‌ಗೆ ಕ್ರಮ: ಸಚಿವ ಪಾಟೀಲ್

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Mokshita-Trivik

BBK11: ಬಿಗ್ ಬಾಸ್ ಮನೆಯಲ್ಲಿ ಈ ವರೆಗೆ ಸೈಲೆಂಟ್ ಆಗಿದ್ದ ‘ಪಾರು’ ವೈಲೆಂಟ್ ಆಗಿದ್ದೇಕೆ?

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

4

Belthangady: ಮನೆಯಿಂದ ನಗದು, ಚಿನ್ನಾಭರಣ ಕಳವು

3

Mangaluru: ಅಪಘಾತದ ಬಳಿಕ ಕಾರು ಚಾಲಕನಿಗೆ ಲೋಹದ ಪಂಚ್‌ ನಿಂದ ಹಲ್ಲೆ, ಪೆಪ್ಪರ್‌ ಸ್ಪ್ರೇ!

crime

Padubidri: ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಢಿಕ್ಕಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.