ಕೋವಿಡ್ ಅವಧಿಯಲ್ಲಿ 8 ಲಕ್ಷ ಹೆಚ್ಚು ಎಲ್ಐಸಿ ಪಾಲಿಸಿ ಮಾರಾಟ: ಮಿನಿ ಐಪೆ
Team Udayavani, Apr 29, 2022, 6:03 AM IST
ಬೆಂಗಳೂರು: ಕೊರೊನಾ ಹಾವಳಿಯಿಂದ 2021-22ರಲ್ಲಿ ಇಡೀ ದೇಶ ತತ್ತರಿಸಿತ್ತು. ಲಕ್ಷಾಂತರ ಜನ ಕೆಲಸ ಕಳೆದುಕೊಂಡು, ಪಟ್ಟಣದಿಂದ ಹಳ್ಳಿಗಳನ್ನು ಸೇರಿದ್ದರು. ಹಾಗಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದ ನಿಗಮಕ್ಕೆ ಲಾಕ್ಡೌನ್ ನಡುವೆಯೂ ಕೋಟ್ಯಂತರ ರೂಪಾಯಿ ಹರಿದುಬಂದಿದೆ ಎಂದು ಎಲ್ಐಸಿ ವ್ಯವಸ್ಥಾಪಕ ನಿರ್ದೇಶಕಿ ಮಿನಿ ಐಪೆ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ರಲ್ಲಿ ದೇಶಾದ್ಯಂತ ಸುಮಾರು 2.17 ಕೋಟಿ ಪಾಲಿಸಿಗಳಾಗಿವೆ. 2020-21ರಲ್ಲಿ ಈ ಸಂಖ್ಯೆ 2.09 ಕೋಟಿ ಆಗಿತ್ತು. ಇದೇ ಅವಧಿಯಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಲಕ್ಷಾಂತರ ಪಾಲಿಸಿಗಳನ್ನೂ ಪುನರಾರಂ»ಮಾಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
“ನೇರ ಮಾರುಕಟ್ಟೆ’ ವಿಸ್ತರಣೆಗೆ ಯೋಜನೆ :
ಪ್ರಸ್ತುತ ಒಟ್ಟಾರೆ ಎಲ್ಐಸಿ ಬ್ಯುಸಿನೆಸ್ನಲ್ಲಿ ಶೇ. 95ರಷ್ಟು ಎಲ್ಐಸಿ ಏಜೆಂಟರಿಂದ ಹಾಗೂ ಉಳಿದ ಶೇ. 5ರಷ್ಟು ಬ್ಯಾಂಕ್ಗಳು ಮತ್ತು ಡಿಜಿಟಲ್ ವೇದಿಕೆಯಿಂದ ಬರುತ್ತದೆ. ಮುಂಬರುವ ದಿನಗಳಲ್ಲಿ “ನೇರ ಮಾರುಕಟ್ಟೆ’ ಜಾಲ ವಿಸ್ತರಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬ್ಯಾಂಕ್ ಹಾಗೂ ವೆಬ್ಸೈಟ್ ಮೂಲಕವೇ ಗ್ರಾಹಕರು ಎಲ್ಐಸಿ ಪಾಲಿಸಿಗಳನ್ನು ಖರೀದಿಸುವಂತೆ ಮಾಡಲಾಗುವುದು ಎಂದರು.
ಎಲ್ಐಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಪಟ್ನಾಯಕ್, ದೀಪಂ ನಿರ್ದೇಶಕ ರಾಹುಲ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಬಹುನಿರೀಕ್ಷಿತ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಷೇರು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮೇ 4ರಿಂದ 9ರವರೆಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಈ ಪ್ರಯೋಗದಿಂದ ಸುಮಾರು 21 ಸಾವಿರ ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ.
ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗಾಗಿ ತನ್ನ ಷೇರುಗಳ ಬೆಲೆಯನ್ನು 902ರಿಂದ 949 ರೂ. ನಿಗದಿ ಮಾಡಲಾಗಿದೆ. ಆರಂಭಿಕ ಹೂಡಿಕೆದಾರ (ರಿಟೇಲರ್)ರಿಗೆ 45ರಷ್ಟು ಹಾಗೂ ಪಾಲಿಸಿದಾರರಿಗೆ 60 ರೂ. ರಿಯಾಯಿತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಕನಿಷ್ಠ 15 ಈಕ್ವಿಟಿ ಷೇರುಗಳಿಗೆ ಹೂಡಿಕೆ ಮಾಡಬಹುದಾಗಿದ್ದು, ನಂತರದಲ್ಲಿ ಬಹುಮೊತ್ತಗಳಲ್ಲಿ ಬಿಡ್ ಮಾಡಲು ಅವಕಾಶ ಇರುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.