ಪರೀಕ್ಷಾಅಕ್ರಮ: ಮರುಪರೀಕ್ಷೆ ನಡೆಸುವುದೇ ಉತ್ತಮ
Team Udayavani, Apr 29, 2022, 6:00 AM IST
ರಾಜ್ಯದಲ್ಲೀಗ ಪೊಲೀಸ್ ನೇಮಕಾತಿ ಮತ್ತು ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಭಾರೀ ಅಕ್ರಮವಾಗಿರುವ ಸುದ್ದಿ ಚರ್ಚೆಯಲ್ಲಿದ್ದು, ಇದರಿಂದಾಗಿ ನೇಮಕಾತಿ ವ್ಯವಸ್ಥೆ ಬಗ್ಗೆಯೇ ಅಸಹ್ಯ ಮೂಡಿದೆ. ಈ ಎರಡು ನೇಮಕಾತಿ ಪರೀಕ್ಷೆಗಳ ಜತೆಗೆ, ಉಳಿದ ಆಯ್ಕೆ ವೇಳೆಯಲ್ಲಿಯೂ ಅಕ್ರಮ ನಡೆದಿರಬಹುದೇ ಎಂಬ ಚರ್ಚೆಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಸದ್ಯ ಎದ್ದಿರುವ ಈ ಅಕ್ರಮ ಸುಂಟರಗಾಳಿಯಲ್ಲಿ ನಿಜವಾಗಿ, ಶ್ರಮಪಟ್ಟು ಓದಿರುವಂಥವರು ಮುಳುಗಿ ಹೋಗಿದ್ದಾರೆ. ಆದರೆ, ದುಡ್ಡುಕೊಟ್ಟವರು ಮತ್ತು ಪ್ರಭಾವ ಬೆಳೆಸಿರುವಂಥವರು ಮಾತ್ರ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ನೊಂದ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ. ಇದರ ಜತೆಯಲ್ಲೇ ಸಾರ್ವಜನಿಕ ವಲಯದಿಂದ ಮೂಡಿಬಂದಿರುವ ಹೊಸ ಆಗ್ರಹವೆಂದರೆ ಅಕ್ರಮ ನಡೆದಿರುವ ಪರೀಕ್ಷೆಗಳನ್ನು ರದ್ದು ಮಾಡಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂಬುದು.
ಈಗಿನ ವ್ಯವಸ್ಥೆಯನ್ನು ನೋಡಿದರೆ, ಈ ಆಗ್ರಹದ ಹಿಂದೆ ಸಮರ್ಪಕ ಉದ್ದೇಶವಿದೆ ಎಂಬುದನ್ನು ಹೇಳಬಹುದು. ಪಿಎಸ್‌ಐ ಪರೀಕ್ಷೆಯಲ್ಲಿ 545 ಹುದ್ದೆಗಳಿಗಾಗಿ ಪರೀಕ್ಷೆ ನಡೆದಿದ್ದು, ದೈಹಿಕ ಪರೀಕ್ಷೆ ಉತ್ತೀರ್ಣರಾಗಿದ್ದ 57 ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. ಈಗ ಸರಕಾರದ ಮುಂದೆ ಕೇವಲ 545 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುವುದೊ ಅಥವಾ ಎಲ್ಲ 57 ಸಾವಿರ ಮಂದಿಗೂ ಪರೀಕ್ಷೆ ನಡೆಸುವುದೋ ಎಂಬ ಪ್ರಶ್ನೆಗಳಿವೆ. ಆದರೆ ಅಭ್ಯರ್ಥಿಗಳ ನೋವಿನ ಆಧಾರದ ಮೇಲೆ ಹೇಳುವುದಾದರೆ, ಎಲ್ಲಾ 57 ಸಾವಿರ ಮಂದಿಗೂ ಪರೀಕ್ಷೆ ನಡೆಸುವುದೇ ಸೂಕ್ತವಾದ ನಿರ್ಧಾರವೆಂದು ಕಾಣಿಸುತ್ತದೆ.
ಈಗಿನ ಅಕ್ರಮದಿಂದಾಗಿ 545 ಮಂದಿಯಲ್ಲಿ ಕೆಲವರಾದರೂ ಆಯ್ಕೆಯಾಗಿರುತ್ತಾರೆ. ಇವರು ಯಾರು ಎಂದು ಗುರುತಿಸುವುದು ಕಷ್ಟ. ಸದ್ಯ ತನಿಖೆ ನಡೆಯುತ್ತಿದ್ದರೂ, ಇದು ಆಚೆಗೆ ಬರುವಷ್ಟರಲ್ಲಿ ಒಂದಷ್ಟು ಸಮಯವಾದರೂ ಆಗಬಹುದು.
ಇನ್ನು ಎರಡನೇ ವಾದವೂ ಇದೆ. ಆಯ್ಕೆಯಾಗಿರುವ ಈ 545 ಮಂದಿಯಲ್ಲಿ ಬಹಳಷ್ಟು ಮಂದಿ ಪ್ರಾಮಾಣಿಕವಾಗಿಯೇ ಓದಿ ಉತ್ತೀರ್ಣರಾಗಿದ್ದಾರೆ. ಮರು ಪರೀಕ್ಷೆ ನಡೆದು, ಯಾವುದೋ ಕಾರಣಕ್ಕಾಗಿ ಅನುತ್ತೀರ್ಣರಾದರೆ ಅನ್ಯಾಯವಾಗುತ್ತದೆ ಎಂಬ ಮಾತನ್ನು ಹೇಳುತ್ತಿದ್ದಾರೆ. ಆದರೆ ಈಗ ಸಿಐಡಿ ನಡೆಸುತ್ತಿರುವ ತನಿಖೆ ಮುಗಿದ ಬಳಿಕವಷ್ಟೇ ಆಯ್ಕೆಯಾಗಿರುವವರಲ್ಲಿ ಎಷ್ಟು ಮಂದಿ ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದಾರೆ ಎಂಬುದನ್ನು ಗುರುತಿಸಬಹುದು. ಆಗ ಮಾತ್ರ ಮರುಪರೀಕ್ಷೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
ಇನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲೂ ಅಕ್ರಮದ ವಾಸನೆ ಕಂಡು ಬಂದು ಆಗಲೇ ದಿನಗಳೇ ಕಳೆದಿವೆ. ಇಲ್ಲಿ ದೊಡ್ಡ ದೊಡ್ಡ ಕುಳಗಳೇ ಬಲೆಗೆ ಬಿದ್ದಿವೆ. ಧಾರವಾಡದ ಕವಿವಿಯ ಮೌಲ್ಯಮಾಪನ ಕುಲಸಚಿವರೇ ಬಂಧಿತರಾಗಿರುವುದರಿಂದ ಪ್ರಕರಣ ಇನ್ನೂ ಗಂಭೀರತೆ ಪಡೆದಿದೆ.
ಇಲ್ಲಿಯೂ ಅಷ್ಟೇ 1,200ಕ್ಕೂ ಹೆಚ್ಚು ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು, ಅಕ್ರಮದ ಬೇರು ಎಲ್ಲಿವರೆಗೆ ಚಾಚಿದೆ ಎಂದು ಹೇಳುವುದು ಕಷ್ಟಕರ. ಇಲ್ಲಿಯೂ ಮರು ಪರೀಕ್ಷೆ ನಡೆದರೆ ನಿಜವಾದ ಅಭ್ಯರ್ಥಿಗಳಿಗೆ ನ್ಯಾಯ ಸಿಕ್ಕಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.