ಚಾಕೋಲೇಟ್‌ನಿಂದಾಗಿ ಹರುಡುತ್ತಿದೆ ಸೋಂಕು!
Team Udayavani, Apr 29, 2022, 8:40 AM IST
ಲಂಡನ್: ಚೀನಾದಿಂದ ಕೊರೊನಾ ವೈರಸ್ ಹರಡಿದ ರೀತಿಯಲ್ಲೇ ಬೆಲ್ಜಿಯಂನಿಂದ ಚಾಕೋಲೇಟ್‌ಗಳಲ್ಲಿ ಸಲ್ಮೋನೆಲ್ಲಾ ಹೆಸರಿನ ಬ್ಯಾಕ್ಟೀರಿಯಾ ಹರಡಲಾರಂಭಿಸಿದೆ. ಈ ಸೋಂಕಿಗೆ ಈಗಾಗಲೇ ಯುರೋಪ್ ಖಂಡದಾದ್ಯಂತ 150 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದು, ಆ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ.
ಯುನೈಟೆಡ್ ಕಿಂಗ್‌ಡಂ ಸರ್ಕಾರ ಬುಧವಾರದಂದು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರುವ ವರದಿಯ ಪ್ರಕಾರ ಅಮೆರಿಕದಲ್ಲಿ ಓರ್ವರಿಗೆ ಹಾಗೂ ಯುರೋಪ್ ಖಂಡದ 10 ರಾಷ್ಟ್ರಗಳ 150 ಮಕ್ಕಳಿಗೆ ಸಲ್ಮೋನೆಲ್ಲಾ ಸೋಂಕು ಹರಡಿದೆ.
ಸೋಂಕಿತರು ಬಹುಪಾಲು 10 ವರ್ಷದೊಳಗಿನ ಮಕ್ಕಳಾಗಿದ್ದಾರೆ. ವಿಶ್ವಸಂಸ್ಥೆ ವರದಿಯ ಪ್ರಕಾರ ಬೆಲ್ಜಿಯಂ ಕನಿಷ್ಠ 113 ರಾಷ್ಟ್ರಗಳಿಗೆ ಚಾಕೋಲೇಟ್ ರಫ್ತು ಮಾಡಿದೆ. ಈ ಬ್ಯಾಕ್ಟೀರಿಯಾದಿಂದ ಮನುಷ್ಯನಲ್ಲಿ ಜ್ವರ, ಹೊಟ್ಟೆ ನೋವು, ಅತಿಸಾರ ಕಾಣಿಸಿಕೊಳ್ಳಬಹುದು. ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಇದು ಗಂಭೀರ ಪರಿಣಾಮ ಉಂಟುಮಾಡಬಹುದು. ಈ ಹಿಂದೆ ಬೆಲ್ಜಿಯಂನ ಕಿಂಡರ್ ಚಾಕೋಲೇಟ್ ಉತ್ಪಾದನಾ ಕಂಪನಿಯಲ್ಲಿ ಸಲ್ಮೊನೆಲ್ಲಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆ ಕಂಪನಿಯ ಬಾಗಿಲು ಮುಚ್ಚಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.