ಕೋಲ್ಕತಾವನ್ನು ಕೆಡವಿದ ಡೆಲ್ಲಿ
Team Udayavani, Apr 28, 2022, 11:50 PM IST
ಮುಂಬಯಿ: ಕೋಲ್ಕತಾ ನೈಟ್‌ರೈಡರ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತನ್ನ 4ನೇ ಜಯವನ್ನು ಸಾಧಿಸಿದೆ. 6ನೇ ಸೋಲನುಭವಿಸಿದ ಕೆಕೆಆರ್ ಹಾದಿ ಇನ್ನಷ್ಟು ದುರ್ಗಮಗೊಂಡಿದೆ.
ಗುರುವಾರದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 9 ವಿಕೆಟಿಗೆ 146 ರನ್ ಗಳಿಸಿದರೆ, ಡೆಲ್ಲಿ 19 ಓವರ್‌ಗಳಲ್ಲಿ 6 ವಿಕೆಟಿಗೆ 150 ರನ್ ಬಾರಿಸಿತು.
ಪೃಥ್ವಿ ಶಾ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡರೂ ಚೇತರಿಸಿಕೊಂಡ ಡೆಲ್ಲಿ ಹೋರಾಟ ಮುಂದುವರಿಸಿತು. ಡೇವಿಡ್ ವಾರ್ನರ್, ಲಲಿತ್ ಯಾದವ್, ರೋವ¾ನ್ ಪೊವೆಲ್, ಅಕ್ಷರ್ ಪಟೇಲ್ ಸೇರಿಕೊಂಡು ಡೆಲ್ಲಿಯನ್ನು ಸುರಕ್ಷಿತವಾಗಿ ದಡ ತಲುಪಿಸಿದರು.
ಕಂಟಕವಾದ ಕುಲದೀಪ್ :
ಮಿಸ್ಟರಿ ಸ್ಪಿನ್ನರ್ ಕುಲದೀಪ್ ಯಾದವ್ ಕೆಕೆಆರ್ ಪಾಲಿಗೆ ಕಂಟಕವಾಗಿ ಕಾಡಿದರು. ಅವರು ಕೇವಲ 14 ರನ್ ನೀಡಿ 4 ವಿಕೆಟ್ ಉಡಾಯಿಸಿದರು. ಇದರೊಂದಿಗೆ ಡೆಲ್ಲಿಯ ನಾಲ್ಕೂ ಗೆಲುವುಗಳಲ್ಲಿ ಮಹತ್ವದ ಪಾತ್ರ ವಹಿಸಿದ ಕುಲದೀಪ್ ನಾಲ್ಕರಲ್ಲೂ ಪಂದ್ಯಶ್ರೇಷ್ಠರಾಗಿ ಮೂಡಿಬಂದರು.
ಕೆಕೆಆರ್ ಪರ ನಿತೀಶ್ ರಾಣಾ ಬ್ಯಾಟಿಂಗ್ ಪ್ರತಾಪವೊಂದನ್ನು ತೋರಿ 57 ರನ್ ಬಾರಿಸಿದರು (34 ಎಸೆತ, 3 ಬೌಂಡರಿ, 4 ಸಿಕ್ಸರ್). ರಾಣಾ ಹೊರತುಪಡಿಸಿ ಬೇರೆ ಯಾರಿಂದಲೂ ಸಿಕ್ಸರ್ ಸಿಡಿಯಲಿಲ್ಲ. ನಾಯಕ ಶ್ರೇಯಸ್ ಅಯ್ಯರ್ 42 ರನ್ ಮಾಡಿದರು.
ಸಕಾರಿಯಾ ಮೊದಲ ಬ್ರೇಕ್ :
ರಾಜಸ್ಥಾನ್ ರಾಯಲ್ಸ್‌ನಿಂದ ಬಂದ ಎಡಗೈ ವೇಗಿ ಚೇತನ್ ಸಕಾರಿಯಾ ಡೆಲ್ಲಿ ಪರ ಮೊದಲ ಪಂದ್ಯ ಆಡಿದರಷ್ಟೇ ಅಲ್ಲ, ಮೊದಲ ಓವರ್‌ನಲ್ಲೇ ದೊಡ್ಡ ಬೇಟೆಯನ್ನಾಡಿ ಶುಭಾರಂಭಗೈದರು. ಆರನ್ ಫಿಂಚ್ ಅವರನ್ನು ಮೂರನೇ ಎಸೆತದಲ್ಲೇ ಬೌಲ್ಡ್ ಮಾಡಿದರು. ಇದಕ್ಕೂ ಹಿಂದಿನ ಎಸೆತದಲ್ಲಿ ಫಿಂಚ್‌ಗೆ ಜೀವದಾನ ಲಭಿಸಿತ್ತು.
ಮತ್ತೋರ್ವ ಆರಂಭಕಾರ ವೆಂಕಟೇಶ್ ಅಯ್ಯರ್ ಇಲ್ಲಿಯೂ ಯಶಸ್ವಿಯಾಗಲಿಲ್ಲ. 5ನೇ ಓವರ್‌ನಲ್ಲೇ ಸ್ಪಿನ್ ದಾಳಿ ಆರಂಭಿಸಿದ ಅಕ್ಷರ್ ಪಟೇಲ್ 3ನೇ ಎಸೆತದಲ್ಲೇ ಅಯ್ಯರ್ ವಿಕೆಟ್ ಉಡಾಯಿಸಿದರು. 12 ಎಸೆತ ಎದುರಿಸಿದ ಅಯ್ಯರ್ ಕೇವಲ 6 ರನ್ ಮಾಡಿ ಸಕಾರಿಯಾಗೆ ಕ್ಯಾಚ್ ನೀಡಿ ವಾಪಸಾದರು. ಪವರ್ ಪ್ಲೇಯಲ್ಲಿ ಬ್ಯಾಟಿಂಗ್ ಪವರ್ ತೋರ್ಪಡಿಸುವಲ್ಲಿ ಸಂಪೂರ್ಣ ವಿಫಲವಾದ ಕೆಕೆಆರ್ 2 ವಿಕೆಟಿಗೆ 29 ರನ್ ಗಳಿಸಿ ಕುಂಟುತ್ತಿತ್ತು.
ಕುಲದೀಪ್ ಯಾದವ್ ತಮ್ಮ ಮೊದಲ ಓವರ್‌ನ ಸತತ 2 ಎಸೆತಗಳಲ್ಲಿ ವಿಕೆಟ್ ಉಡಾಯಿಸಿ ಕೋಲ್ಕತಾವನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿದರು. ದ್ವಿತೀಯ ಎಸೆತದಲ್ಲಿ ಬಾಬಾ ಇಂದ್ರಜಿತ್ (6) ಅವರನ್ನು ಪೆವಿಲಿಯನ್ನಿಗೆ ತಳ್ಳಿದರೆ, ಮುಂದಿನ ಎಸೆತದಲ್ಲೇ ಸುನೀಲ್ ನಾರಾಯಣ್ ಅವರನ್ನು ಲೆಗ್ ಬಿಫೋರ್ ಬಲೆಗೆ ತಳ್ಳಿದರು. 35 ರನ್ನಿಗೆ ಕೋಲ್ಕತಾದ 4 ವಿಕೆಟ್ ಉರುಳಿತು. ಅರ್ಧ ಹಾದಿ ಮುಗಿಯುವಾಗ ಸ್ಕೋರ್ 56 ರನ್ ಆಗಿತ್ತು.
ನಾಯಕ ಶ್ರೇಯಸ್ ಅಯ್ಯರ್-ನಿತೀಶ್ ರಾಣಾ 48 ರನ್ ಒಟ್ಟುಗೂಡಿಸಿ ಪರಿಸ್ಥಿತಿಯನ್ನು ತುಸು ಸುಧಾರಿಸಿದರೆನ್ನುವಾಗಲೇ ಕುಲದೀಪ್ ಯಾದವ್ ಮತ್ತೆ ಅವಳಿ ಆಘಾತವಿಕ್ಕಿದರು. 3ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಆ್ಯಂಡ್ರೆ ರಸೆಲ್ ವಿಕೆಟ್ ಉಡಾಯಿಸಿದರು. ಅಯ್ಯರ್ 37 ಎಸೆತಗಳಿಂದ 42 ರನ್ ಹೊಡೆದರೆ, ರಸೆಲ್ ಖಾತೆ ತೆರೆಯುವ ಮೊದಲೇ ಸ್ಟಂಪ್ಡ್ ಆದರು. 83ಕ್ಕೆ 6 ವಿಕೆಟ್ ಉರುಳಿತು.
ಡೆತ್ ಓವರ್ ವೇಳೆ ನಿತೀಶ್ ರಾಣಾ-ರಿಂಕು ಸಿಂಗ್ ಜತೆಗೂಡಿದರು. 35 ಎಸೆತಗಳಿಂದ 62 ರನ್ ಪೇರಿಸಿ ಕೆಕೆಆರ್ ಮೊತ್ತಕ್ಕೆ ಒಂದಿಷ್ಟು ಗೌರವ ತಂದಿತ್ತರು.
ಕೆಕೆಆರ್ 3 ಬದಲಾವಣೆ :
ಈ ಪಂದ್ಯಕ್ಕಾಗಿ ಕೆಕೆಆರ್ 3 ಬದಲಾವಣೆ ಮಾಡಿಕೊಂಡಿತು. ಆರನ್ ಫಿಂಚ್, ಹರ್ಷಿತ್ ರಾಣಾ ಮತ್ತು ಬಾಬಾ ಇಂದ್ರಜಿತ್ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಡೆಲ್ಲಿ ತಂಡಕ್ಕೆ ಮಿಚೆಲ್ ಮಾರ್ಷ್ ಮರಳಿದರು. ಚೇತನ್ ಸಕಾರಿಯಾ ಡೆಲ್ಲಿ ಪರ ಮೊದಲ ಪಂದ್ಯ ಆಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.